ಅಪರಾಧ ಸುದ್ದಿ

ರಾಮೇಶ್ವರ ಕೆಫೆಗೆ ಉಗ್ರರು ಬಾಂಬ್ ಇಟ್ಟು ಸ್ಫೋಟಿಸಿದ್ದು ಇದಕ್ಕಾಗಿ

Share It

ಬೆಂಗಳೂರು : ವೈಟ್​​ಫಿಲ್ಡ್​​ನಲ್ಲಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳನ್ನು ಎನ್.ಐ.ಎ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ವಿಚಾರಣೆ ವೇಳೆ ಉಗ್ರರು ಹಲವು ವಿಚಾರಗಳನ್ನು ಬಾಯಿಬಿಟ್ಟಿದ್ದು, ವೈಟ್​​ಫೀಲ್ಡ್​​ನ ರಾಮೇಶ್ವರಂ ಕೆಫೆಯಲ್ಲೇ ಸ್ಪೋಟಗೊಳಿಸಲು ಕಾರಣವೇನೆಂದು ಹೇಳಿದ್ದಾರೆ. ಉಗ್ರರು ಮೊದಲು ​ವೈಟ್​ಫೀಲ್ಡ್​​​ನ ಯಾವುದಾರೂ ಒಂದು ಐಟಿ ಕಂಪನಿಯಲ್ಲಿ ಸ್ಫೋಟಗೊಳಿಸಲು ನಿರ್ಧರಿಸಿದ್ದರು.

ವೈಟ್​ಫೀಲ್ಡ್​ನಲ್ಲಿ ಸ್ಫೋಟಗೊಳಿಸಬೇಕೆಂದು ಬಂಧಿತ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವೀರ್ ಹುಸೇನ್ ಉಗ್ರರು ಯೋಜಿಸಿದ್ದರು. ಬೆಂಗಳೂರಿನಲ್ಲಿ ವೈಟ್​ಫೀಲ್ಡ್ ಸ್ಪೆಷಲ್ ಎಕನಾಮಿಕ್​ ಜೋನ್​​ (SEZ)​ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ದೊಡ್ಡ ದೊಡ್ಡ ಐಟಿಬಿಟಿ ಕಂಪನಿಗಳಿವೆ. ಸಾವಿರಾರು ಜನ ಟೆಕ್ಕಿಗಳು ಕೆಲಸ ಮಾಡುತ್ತಾರೆ. ಇಲ್ಲಿ ಬಾಂಬ್ ಸ್ಫೋಟಿಸಿದರೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತೆ ಅಂತ ಉಗ್ರರು ವೈಟ್​ಫೀಲ್ಡ್ ಆಯ್ಕೆ ಮಾಡಿಕೊಂಡಿದ್ದರು.

ಈ ಸಂಬಂಧ ಉಗ್ರರು ವೈಟ್​ಫೀಲ್ಡ್​​ನ ಹಲವೆಡೆ ಓಡಾಡಿದ್ದರು. ಆದರೆ ಐಟಿಬಿಟಿ ಏರಿಯಾದಲ್ಲಿ ಬಾಂಬ್ ಇಡುವುದು ಅಷ್ಟು ಸುಲಭವಲ್ಲ. ಕಂಪನಿಗಳಲ್ಲಿ ಟೈಟ್ ಸೆಕ್ಯುರಿಟಿ, ಸಿಸಿಟಿವಿಗಳ ಕಣ್ಗಾವಲು, ಮೆಟಲ್ ಡಿಟೆಕ್ಟರ್ಸ್ ಇರುತ್ತೆ. ಇದೆಲ್ಲವನ್ನು ಗಮನಿಸಿದ್ದ ಉಗ್ರರು ಕಂಪನಿ ಒಳಗೆ ಹೋಗುವುದು ಸುಲಭವಲ್ಲವೆಂದು ಅರಿತರು. ನಂತರ ತಮ್ಮ ಯೋಚನೆ ಬದಲಾಯಿಸಿ ಅದೇ ಭಾಗದಲ್ಲಿ ಯಾವುದಾರೂ ಒಂದು ಸ್ಥಳದಲ್ಲಿ ಸ್ಫೋಟಗೊಳಿಸಬೇಕೆಂದು ಪ್ಲಾನ್​ ಮಾಡಿದರು.

ಆಗ ಉಗ್ರರಿಗೆ ಕಂಡಿದ್ದು ರಾಮೇಶ್ವರಂ ಕೆಫೆ. ಈ ರಾಮೇಶ್ವರಂ ಕೆಫೆಗೆ ಹೆಚ್ಚು ಜನ ಬರುತ್ತಾರೆ. ಜೊತೆಗೆ ಟೆಕ್ಕಿಗಳು ಕೂಡ ಬರುತ್ತಾರೆ. ಮತ್ತು ರಾಮಮಂದಿರ ಉದ್ಘಾಟನೆ ಸಮಯದಲ್ಲಿ ಕೆಫೆ ಮುಂಭಾಗದಲ್ಲಿ ಸಂಭ್ರಮಾಚರಣೆ ಕೂಡ ನಡೆದಿತ್ತು. ಇದನ್ನೆಲ್ಲ ಗಮನಿಸಿದ್ದ ಉಗ್ರರು ಕೆಫೆಯಲ್ಲೇ ಸ್ಫೋಟಗೊಳಿಸಲು ನಿರ್ಧರಿಸಿದರು.

ಅಲ್ಲದೆ ರಾಮೇಶ್ವರಂ ಕೆಫೆ ಒಳಗೆ ಹೋಗಲು ಯಾವುದೇ ಅಡೆತಡೆ ಇರಲಿಲ್ಲ. ಸೆಕ್ಯುರಿಟಿ, ಮೆಟಲ್ ಡಿಟೆಕ್ಟರ್ ಕೂಡ ಇರಲಿಲ್ಲ. ಅದ್ದರಿಂದ ಬಾಂಬ್ ಸ್ಫೋಟಗೊಳಿಸಲು ರಾಮೇಶ್ವರಂ ಕೆಫೆ ಸೂಕ್ತ ಸ್ಥಳವೆಂದು ನಿಗದಿ ಮಾಡಿದರು. ಅದರಂತೆ ಉಗ್ರರು ಮಾರ್ಚ್ 1 ರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಮಾಡಿದರು. ಈ ಎಲ್ಲ ವಿಚಾರಗಳನ್ನು ಉಗ್ರರು ಎನ್ಐಎ ಅಧಿಕಾರಿಗಳ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ.


Share It

You cannot copy content of this page