ಮಹಿಳೆಯ ಅಂಡರ್ವೇರ್ನಲ್ಲಿತ್ತು ೫೦ ಲಕ್ಷದ ಚಿನ್ನ
ಬೆಂಗಳೂರು: ಒಳುಡುಪಿನಲ್ಲಿ ೫೦ ಲಕ್ಷ ರು ಬೆಲೆಬಾಳುವ ಚಿನ್ನವನ್ನು ಅಡಗಿಸಿಟ್ಟುಕೊಂಡು ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ದುಬೈನಿಂದ ಆಗಮಿಸಿದ ಮಹಿಳೆಯೊಬ್ಬರ ಒಳುಡುಪಿನಲ್ಲಿ ೭೧೭ ಗ್ರಾಂ ಚಿನ್ನ ಪತ್ತೆಯಾಗಿದೆ. ಆ ಚಿನ್ನದ ಬೆಲೆ ಸುಮಾರು ೪೯.೫೨ ಲಕ್ಷ ರು. ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ಚಿನ್ನದ ಬಿಸ್ಕೇಟ್ ಪ್ರಮಾಣದ ಚಿನ್ನವನ್ನು ಪುಡಿಪುಡಿ ಮಾಡಿ ಫೇಸ್ಟ್ ರೀತಿಯಲ್ಲಿ ತಯಾರಿಸಿ ಒಳಉಡುಪಿನಲ್ಲಿ ಲೇಪನ ಮಾಡಲಾಗಿತ್ತು. ಇದಕ್ಕಾಗಿಯೇ ವಿಶೇಷ ರೀತಿಯಲ್ಲಿ ಕಪ್ಪು ಬಣ್ಣದ ಒಳಉಡುಪನ್ನು ಆ ಮಹಿಳೆ ವಿನ್ಯಾಸಗೊಳಿಸಿಕೊಂಡಿದ್ದರು ಎನ್ನಲಾಗಿದೆ.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟಿçÃಯ ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳು ಈ ಸಂಬAಧ ದೂರು ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಆ ಮಹಿಳೆಯ ಹಿಂದೆ ಯಾವುದಾದರೂ ದೊಡ್ಡ ಜಾಲವಿದೆಯೇ ಎಂಬ ಅನುಮಾನದ ಆಧಾರದಲ್ಲಿ ತನಿಖೆ ನಡೆಯುತ್ತಿದೆ.