ರಾಜ್ಯದ ಹಲವೆಡೆ ಸಿಡಿಲು-ಗುಡುಗು ಮಳೆ!
ಬಿಸಿಲಿನ ಧಗೆಗೆ ಬಳಲಿದ್ದ ಜನರಿಗೆ ಮಳೆರಾಯ ಗುರುವಾರ ತಂಪರೆದಿದ್ದಾನೆ. ಕಳೆದ ಕೆಲ ದಿನಗಳಿಂದ ರಾಜ್ಯದ ಹಲವೆಡೆ ಕೊನೆಗೂ ಮಳೆಯ ಸಿಂಚನ ಮೂಡಿದೆ.
ವಿಜಯಪುರ ಜಿಲ್ಲೆಯಲ್ಲೂ ಇಂದು(ಏಪ್ರಿಲ್ 18) ಗಾಳಿ, ಗುಡುಗು, ಸಿಡಿಲು ಸಹಿತ ಭರ್ಜರಿ ಮಳೆಯಾಗಿದ್ದು, ಜನರಲ್ಲಿ ಮಂದಹಾಸ ಮೂಡಿದೆ. ವಿಜಯಪುರ ಸೇರಿದಂತೆ ರಾಜ್ಯದ ಬಾಗಲಕೋಟೆ, ಹಾವೇರಿ, ಶಿವಮೊಗ್ಗ, ಗದಗ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ನಾಕಾ ರಸ್ತೆಯಲ್ಲಿ ಮಳೆಯ ಅಬ್ಬರಕ್ಕೆ ಬೃಹತ್ ಮರಗಳು ಧರೆಗುರುಳಿದಿದ್ದು, ವಾಹನ ಸವಾರರು ಪರದಾಟ ನಡೆಸಿದ್ದಾರೆ. ಇತ್ತ ಸಿಡಿಲು ಬಡಿದು ವಿಜಯಪುರದ ಜುಮ್ಮಾ ಮಸೀದಿ ರಸ್ತೆಯಲ್ಲಿರುವ ಐತಿಹಾಸಿಕ ಮೆಹೆತರ್ ಮಹಲ್‌ಗೆ ಹಾನಿಯಾಗಿದೆ.
ಆದಿಲ್ ಶಾಹಿ ಕಾಲದಲ್ಲಿ ನಿರ್ಮಿಸಲಾಗಿದ್ದ ಈ ಐತಿಹಾಸಿಕ ಮೆಹೆತರ್ ಮಹಲ್‌ನ ಮಿನಾರ್‌ಗೆ ಬಡಿದಿರುವ ಸಿಡಿಲ ಹೊಡೆತಕ್ಕೆ ಮಿನಾರ್ ತುಂಡಾಗಿ ಮೆಹರತ್ ಮೆಹಲ್ ಬಳಿ ನಿಂತಿದ್ದ ಕಾರಿನ ಮೇಲೆ ಬಿದ್ದಿದೆ.