ಬೆಂಗಳೂರು: ಬಾಕಿ ಉಳಿದಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ನಾಮಪತ್ರ ಪರಿಶೀಲನೆ ನಿನ್ನೆ ಪೂರ್ಣಗೊಂಡಿದ್ದು, 14 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 74 ನಾಮಪತ್ರಗಳು ತಿರಸ್ಕೃತಗೊಂಡಿವೆ.
ನಾಮಪತ್ರ ಹಿಂಪಡೆಯಲು ಪಡೆಯಲು ನಾಳೆ ಕಡೆಯ ದಿನವಾಗಿದ್ದು, ಚುನಾವಣೆಯ ಅಂತಿಮ ಕಣದಲ್ಲಿ ಉಳಿಯುವ ಅಧಿಕೃತ ಅಭ್ಯರ್ಥಿಗಳ ಪಟ್ಟಿ ನಾಳೆ ಸಂಜೆ ವೇಳೆಗೆ ಪ್ರಕಟವಾಗಲಿದೆ.
ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಒಟ್ಟು 14 ಲೋಕಸಭಾ ಕ್ಷೇತ್ರಗಳಲ್ಲಿ 300 ಅಭ್ಯರ್ಥಿಗಳ 419 ನಾಮಪತ್ರಗಳು ಮಾನ್ಯವಾಗಿದ್ದು, 74 ತಿರಸ್ಕೃತಗೊಂಡಿವೆ. ಬಾಕಿ ಉಳಿದಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ 32 ಗಳು 40 ನಾಮಪತ್ರಗಳ ಪೈಕಿ 4 ನಾಮಪತ್ರಗಳು ತಿರಸ್ಕೃತಗೊಂಡಿವೆ. 36 ನಾಮಪತ್ರಗಳು ಪುರಸ್ಕೃತವಾಗಿದ್ದು, 28 ಅಭ್ಯರ್ಥಿಗಳ ನಾಮಪತ್ರಗಳು ಮಾನ್ಯವಾಗಿವೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.