ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ನಡುರಸ್ತೆಯ ಎರಡು ಗ್ಯಾಂಗ್ಗಳ ನಡುವಿನ ಗ್ಯಾಂಗ್ ವಾರ್ ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಉಡುಪಿಯ ಕುಂಜಿಬೆಟ್ಟು ಸಮೀಪ ಎರಡು ಗ್ಯಾಂಗ್ ಗಳ ನಡುವೆ ನಡುರಸ್ತೆಯಲ್ಲಿಯೇ ಗಲಾಟೆಯಾಗಿತ್ತು. ಪರಸ್ಪರ ಕಾರು ಗುದ್ದಿಸಿಕೊಂಡು, ತಲ್ವಾರ್ ಹಿಡಿದು ನಡುರಸ್ತೆಯಲ್ಲಿಯೇ ಬಡಿದಾಡಿಕೊಂಡಿದ್ದರು. ಆಧರೆ, ಇದಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿರಲಿಲ್ಲ.
ಆದರೆ, ಈ ಗ್ಯಾಂಗ್ಗಳ ನಡುವಿನ ಗ್ಯಾಂಗ್ ವಾರ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರಿಂದ ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಅನುಮಾನ ಮೂಡಿಸಿತ್ತು, ತಕ್ಷಣವೇ ಎಚ್ಚತ್ತುಕೊಂಡ ಪೊಲೀಸರು, ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದರು.
ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗರುಡ ಗ್ಯಾಂಗ್ನ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಇನ್ನುಳಿದ ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ. ಒಟ್ಟಾರೆ, ರೌಡಿಸಂ ಹೆಡೆಮುರಿ ಕಟ್ಟುಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.