ಬೆಂಗಳೂರು: ಕನ್ನಡದ ಮಿಲ್ಕಿ ಬ್ಯೂಟಿ ಎಂದೇ ಖ್ಯಾತವಾಗಿರುವ ಅಶಿಕಾ ರಂಗನಾಥ್ ಇದೀಗ ತೆಲುಗಿನಲ್ಲಿ ಮಿಂಚುತ್ತಿದ್ದಾರೆ. ತೆಲುಗಿನಲ್ಲಿ ಬ್ಯುಸಿ ನಟಿಯಾಗಿದ್ದರೂ ಕನ್ನಡದ ಬಗೆಗ ಒಂದಷ್ಟು ಪ್ರೀತಿ ಕಡಿಮೆಯಾಗಿಲ್ಲ ಎನ್ನುತ್ತಾರೆ ಅವರ ಅಭಿಮಾನಿಗಳು.

ಇದೀಗ ಮಿಲ್ಕಿ ಬ್ಯೂಟಿಯ ಅಭಿಮಾನಿಗಳು ಖುಷಿಪಡುವಂತಹ ಮತ್ತೊಂದು ಸುದ್ದಿ ಟಾಲಿವುಡ್ ಅಂಗಳದಿAದ ಹೊರಬಂದಿದ್ದು, ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಜತೆಗೆ ಅಶಿಕಾ ರಂಗನಾಥ್ ಸ್ಕ್ರೀನ್ ಶೇರ್ ಮಾಡಿಕೊಳ್ಳಲು ರೆಡಿಯಾಗಿದ್ದಾರೆ. ಚಿರಂಜೀವಿ ಅಭಿನಯದ ವಿಶ್ವಂಬರ ಸಿನಿಮಾದಲ್ಲಿ ಲೀಡ್ ರೋಲ್‌ನಲ್ಲಿ ಆಶಿಕಾ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಈವರೆಗೆ ಚಿತ್ರತಂಡ ಯಾವುದೇ ಅಪ್‌ಡೇಟ್ ಬಿಟ್ಟುಕೊಟ್ಟಿರಲಿಲ್ಲ, ಆದರೆ, ಅಶಿಕಾ ತಾವಾಗಿಯೇ ಖುಷಿಯಿಂದ ಚಿರಂಜೀವಿ ಅವರ ಜತೆ ನಟಿಸಲು ತಮಗೆ ಸಿಕ್ಕ ಅವಕಾಶದ ಬಗ್ಗೆ ಕನ್ನಡದ ಅಭಿಮಾನಿಗಳಿಗೆ ಹೇಳಿಕೊಂಡಿದ್ದಾರೆ. ಇದು ಸಹಜವಾಗಿಯೇ ವೈರಲ್ ಆಗಿದ್ದು, ಆಶಿಕಾಗೆ ಅಭಿಮಾನಿಗಳು ಗುಡ್‌ಲಕ್ ಹೇಳುತ್ತಿದ್ದಾರೆ.

ತಮ್ಮ ಪಾತ್ರದ ಬಗ್ಗೆ ಅವರು, ವಿಶ್ವಂಬರ ವಿಭಿನ್ನ ಕತೆಯಿರೋ ಸಿನಿಮಾ. ಇಲ್ಲಿ ಹೀರೋ ಜತೆ ಲವ್ ಸಬ್ಜೆಕ್ಟ್ನಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ. ಜಿರಂಜೀವಿ ಸರ್ ಅವರಂತಹ ಸ್ಟಾರ್ ಜತೆಗೆ ನಟಿಸುವುದು ನನಗೆ ಖುಷಿ ತಂದಿದೆ. ಅವರ ಜತೆಗೆ ನಟನೆ ಈಗಷ್ಟೇ ಶುರುವಾಗಿದೆ. ಅವರಿಂದ ತುಂಬಾ ಕಲಿಯೋಕೆ ಇದೆ. ಮುಂದೆ ಮತ್ತಷ್ಟು ಅವಕಾಶಗಳು ಬರುವಂತಾಗಲೀ ಎಂದುಕೊಳ್ಳುತ್ತೇನೆ ಎಂದಿದ್ದಾರೆ.