ಉಪಯುಕ್ತ ರಾಜಕೀಯ ಸುದ್ದಿ

ಪ್ರಧಾನಿ ನರೇಂದ್ರ ಮೋದಿ ತಂಗಿದ್ದ ಹೋಟೆಲ್ ಬಿಲ್ ಬಾಕಿ !

Share It

ಬಂಡೀಪುರಕ್ಕೆ ಮೋದಿ ಬಂದು ಹೋದ ಖರ್ಚೆ ಇನ್ನೂ ಬಂದಿಲ್ಲ! 3 ಕೋಟಿ 33 ಲಕ್ಷ ರೂ. ಬಾಕಿ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಡೆದಿದ್ದ, ಪ್ರಧಾನಿ ನರೇಂದ್ರ ಮೋದಿ ಅವರ ಹುಲಿ ಸಂರಕ್ಷಣೆ ಕಾರ್ಯಕ್ರಮದ ಬಾಕಿ ಬಿಲ್ ಪಾವತಿ ಈವರೆಗೆ ಆಗಿಲ್ಲ ಎನ್ನುವುದು ವಿಶೇಷ.

ಸಾಮಾನ್ಯವಾಗಿ ಪ್ರಧಾನಿ ಅವರ ಕಾರ್ಯಕ್ರಮದ ಖರ್ಚುವೆಚ್ಚವನ್ನೆಲ್ಲ ಕಾರ್ಯಕ್ರಮ ಆಯೋಜನೆ ಮಾಡುವ ಸರಕಾರ ಅಥವಾ ಸರಕಾರದ ಪ್ರಾಧಿಕಾರಿಗಳು ನೋಡಿಕೊಳ್ಳುತ್ತವೆ. ಅಂತೆಯೇ ಹುಲಿ ದಿನದ ಕಾರ್ಯಕ್ರಮದ ಖರ್ಚನ್ನು ಹುಲಿ ಸಂರಕ್ಷಣಾ ಪ್ರಾಧಿಕಾರವೇ ಪಾವತಿಸಬೇಕಾಗಿತ್ತು.

ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್‌ಟಿಸಿಎ)ದ ನಡುವಿನ ಸಂವಹನ ಕೊರತೆಯಿಂದಾಗಿ ಈವರೆಗೆ ಕಾರ್ಯಕ್ರಮಕ್ಕೆ ಖರ್ಚಾಗಿದ್ದ ಹಣ ಬಿಡುಗಡೆಯಾಗಿಲ್ಲ ಎನ್ನಲಾಗುತ್ತಿದೆ. ಇದರಿಂದ ಕಾರ್ಯಕ್ರಮದ ವ್ಯವಸ್ಥೆ ನೋಡಿಕೊಂಡಿದ್ದ ಕೆಲವು ಖಾಸಗಿ ಸಂಸ್ಥೆಗಳು ಪರದಾಡುವಂತಾಗಿದೆ.

ಕಳೆದ ವರ್ಷದ ಏಪ್ರಿಲ್‌ನಲ್ಲಿ ಕಾರ್ಯಕ್ರಮ ನಡೆದಿತ್ತು. ಈಗಾಗಲೇ ಒಂದು ವರ್ಷ ಪೂರ್ಣಗೊಂಡಿದ್ದರು ಹಣ ಬಿಡುಗಡೆಯಾಗಿಲ್ಲ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ವತಿಯಿಂದ ರಾಜ್ಯದಲ್ಲಿ ಆಯೋಜಿಸಲಾಗಿದ್ದ, ಪ್ರಧಾನಿ ಮೋದಿ ಆಗಮಿಸಿದ್ದರು. ಮೈಸೂರಿನಲ್ಲಿ ಎರಡು ದಿನ ಇದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಧಾನಿ ಮೋದಿ ಅವರ ಭೇಟಿಯ ವೇಳೆಯಲ್ಲಿಯೇ ಹೆಲಿಕ್ಯಾಪ್ಟರ್ ಶಬ್ಧದಿಂದಾಗಿ, ಅವರ ಸಫಾರಿಯಲ್ಲಿ ಒಂದೇ ಒಂದು ಹುಲಿಯೂ ಕಾಣಿಸಿಕೊಂಡಿಲ್ಲ ಎಂದು ವರದಿಯಾಗಿತ್ತು. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆತಿಥ್ಯದ ಬಾಕಿ ಬಿಲ್ ಇನ್ನೂ ಬರಬೇಕಿದೆ. ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ಎನ್‌ಟಿಸಿಎ ಭರಿಸುವುದಾಗಿ ಹೇಳಿತ್ತು. ಇನ್ನೂ 3.33 ಕೋಟಿ ಬಾಕಿ ಬರಬೇಕಿದೆ.

ಕಾರ್ಯಕ್ರಮಕ್ಕೆ ಖರ್ಚಾಗಿದ್ದು ಆರೂವರೆ ಕೋಟಿ: ಕಾರ್ಯಕ್ರಮಕ್ಕೆ ಆಗಿರುವ ವೆಚ್ಚ 6 ಕೋಟಿ 33 ಲಕ್ಷ ರೂ. ಈ ಪೈಕಿ 3 ಕೋಟಿ ರೂಪಾಯಿ ಬಂದಿದ್ದು, ಇನ್ನೂ 3 ಕೋಟಿ 33 ಲಕ್ಷ ರೂ. ಬಾಕಿ ಬರಬೇಕಿದೆ. ಇದರಲ್ಲಿ ರಾಡಿಸನ್ ಬ್ಲೂ ಆತಿಥ್ಯ ವೆಚ್ಚ ಸುಮಾರು 80 ಲಕ್ಷ ರೂ. ಸೇರಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿüಕಾರಿಗಳು ಹಲವು ಬಾರಿ ಪತ್ರ ಬರೆದಿದ್ದರೂ, ಎನ್‌ಟಿಸಿಎ ಬಾಕಿ ಹಣ ನೀಡಿಲ್ಲ ಎನ್ನಲಾಗಿದೆ.


Share It

You cannot copy content of this page