ಬೆಂಗಳೂರು: ಬಿಜೆಪಿಯ ಭದ್ರಕೋಟೆ, ಹಿಂದುತ್ವದ ಪ್ರಯೋಗಶಾಲೆ ಮಂಗಳೂರಿನಲ್ಲಿ ಏಪ್ರಿಲ್ 14ರಂದು ನಡೆಯಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ಇದ್ದಕ್ಕಿದ್ದಂತೆ ರದ್ದಾಗಿದ್ಯಾಕೆ?
ಮಂಗಳೂರಿನ ಕಾರ್ಯಕ್ರಮ ರದ್ದು ಮಾಡಿ, ಕೇವಲ ರ್ಯಾಲಿಯನ್ನಷ್ಟೇ ನಡೆಸಲು ತೀಮರ್ಾನಿಸಿದ್ದು, ಇದಕ್ಕೆ ಸೂಕ್ತ ಕಾರಣವೇನು ಎಂಬುದನ್ನು ಈವರೆಗೆ ಬಿಜೆಪಿಯಾಗಲೀ, ಪ್ರಧಾನಿ ಅವರ ಕಾಯರ್ಾಲಯವಾಗಲೀ ಸ್ಪಷ್ಟಪಡಿಸಿಲ್ಲ. ಹಾಗಾದರೆ, ನಿಜವಾಗಿಯೂ ಮೋದಿ ಕಾರ್ಯಕ್ರಮ ರದ್ದಾಗಲು ಕಾರಣವೇನು ಎಂಬುದು ಇದೀಗ ಕುತೂಹಲದ ಪ್ರಶ್ನೆಯಾಗಿದೆ.
ಹಿಂದುತ್ವದ ಪ್ರಯೋಗ ಶಾಲೆಯಾಗಿದ್ದ ಮಂಗಳೂರಿನಲ್ಲಿ 15 ವರ್ಷಗಳಿಂದಲೂ ಬಿಜೆಪಿಯದ್ದೇ ಮೇಲುಗೈ. ಕಳೆದ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಅಲ್ಪ ಪ್ರಮಾಣದಲ್ಲಿ ಹಿಂದುತ್ವದ ಅಜೆಂಡಾಗೆ ಹಿನ್ನಡೆಯಾಗಲು ಆರಂಭವಾಗಿತ್ತು. ಹಿಂದುತ್ವದ ಬೆಂಕಿಚೆಂಡುಗಳೆನಿಸಿಕೊಂಡವರಲ್ಲಿ ಅನೇಕರು ಸೋಲು ಕಂಡರು. ಇದೇ ಸೋಲಿನ ಸರಣಿ ಲೋಕಸಭೆಯಲ್ಲಿಯೂ ಮುಂದುವರಿಯಲಿದೆ ಎಂಬ ಆತಂಕದಲ್ಲಿ ಬಿಜೆಪಿ ಅನೇಕ ಹಿಂದೂ ಫೈರ್ ಬ್ರ್ಯಾಂಡ್ಗಳಿಗೆ ಟಿಕೆಟ್ ನೀಡಿಲ್ಲ.
ಮಂಗಳೂರಿನಲ್ಲಿ ಇತ್ತೀಚೆಗೆ ಹಿಂದುತ್ವ ಕಳೆಗುಂದುತ್ತಿದ್ದೆ. ಅಭಿವೃದ್ಧಿ ಶೂನ್ಯ ಧಮರ್ಾಧಾರಿತ ರಾಜಕಾರಣವನ್ನು ಮಂಗಳೂರಿನ ಬುದ್ದಿವಂತ ಮತದಾರರು ವಿರೋಧಿಸಲು ಆರಂಭಿಸಿದ್ದಾರೆ. ಇದೇ ಕಾರಣಕ್ಕೆ ನಳೀನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ಕೊಡಬಾರದು ಎಂಬ ಒತ್ತಾಯ ಕೇಳಿಬಂದಿತ್ತು. ಉಡುಪಿಯಿಂದ ಶೋಭಾ ಕರಂದ್ಲಾಜೆ ಟಿಕೆಟ್ ಬೇಡ ಎಂಬ ಕೂಗು ಕೇಳಿತ್ತು.
ಇದೀಗ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವಿರೋಧಿ ಅಲೆ ಮಂಗಳೂರಿನಲ್ಲಿ ಹೆಚ್ಚಾಗುತ್ತಿದೆ. ಇದು ಮೋದಿ ಕಾರ್ಯಕ್ರಮದ ಮೇಲೆ ಪರಿಣಾಮ ಬೀರಿದರೆ, ಬಿಜೆಪಿಯ ಭದ್ರಕೋಟೆಯಲ್ಲಿಯೇ ಮುಖಭಂಗವಾದಂತಾಗುತ್ತದೆ. ಈ ಕಾರಣದಿಂದ ಪ್ರಚಾರ ಸಭೆ ನಡೆಸದೆ, ಕೇವಲ ರ್ಯಾಲಿ ನಡೆಸಲು ತೀಮರ್ಾನ ಮಾಡಲಾಗಿದೆಯಂತೆ.
ಬಿಜೆಪಿಯ ಮುಖಂಡರ ಪ್ರಕಾರ, ರಾಜ್ಯದಲ್ಲಿ ಭಾರಿ ಪ್ರಮಾಣದ ಬಿಸಿಲಿದೆ, ಮಂಗಳೂರಿನಲ್ಲಿ ಸೆಖೆಯ ಪ್ರಮಾಣ ಬಹಳಷ್ಟಿದೆ. ಹೀಗಾಗಿ, ಪ್ರಚಾರ ಸಭೆಗೆ ಜನರನ್ನು ಒಟ್ಟುಗೂಡಿಸುವುದು ಬಹಳ ಕಷ್ಟ. ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಹಿಂದಿನಷ್ಟು ಬಿಜೆಪಿ ಪರವಾದ ಅಲೆಯಿಲ್ಲ.
ಈ ಸಲ ಪಕ್ಷ ಹೆಚ್ಚಿನ ಪ್ರಮಾಣದಲ್ಲಿ ಕಷ್ಟಪಡಬೇಕಿದೆ. ಗ್ಯಾರಂಟಿಗಳ ಅಲೆಯಲ್ಲಿ ತೇಲುತ್ತಿರುವ ಮಂಗಳೂರಿಗರು ಕೂಡ ಕಾಂಗ್ರೆಸ್ ಕಡೆಗೆ ಒಲವು ತೋರುತ್ತಿದ್ದಾರೆ. ಇದೆಲ್ಲ ಕಾರಣಕ್ಕೆ ಮೋದಿ ಅವರ ಕಾರ್ಯಕ್ರಮಕ್ಕೆ ಜನರ ಸಂಖ್ಯೆ ಕಡಿಮೆಯಾದರೆ, ಪಕ್ಷಕ್ಕೆ ಮತ್ತು ಪ್ರಧಾನಿ ಮೋದಿ ಅವರಿಗೆ ದೊಡ್ಡ ಪ್ರಮಾಣದ ಹಿನ್ನಡೆಯಾಗುತ್ತದೆ.
ಆ ಕಾರಣದಿಂದ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ಆದರೆ, ರ್ಯಾಲಿ ನಡೆಸಲು ತೀಮರ್ಾನಿಸಲಾಗಿದೆ. ಮೋದಿ ಅವರ ರ್ಯಾಲಿ ನಡೆಯುವ ದಾರಿಯುದ್ದಕ್ಕೂ ಅಪಾರ ಸಂಖ್ಯೆಯ ಜನರನ್ನು ಒಟ್ಟುಗೂಡಿಸುವ ಜವಾಬ್ದಾರಿಯನ್ನು ಮುಖಂಡರಿಗೆ ನೀಡಲಾಗಿದೆ.
ಹೆಚ್ಚು ಜನರು ಸೇರದಿದ್ದರೆ, ರ್ಯಾಲಿಯುದ್ದಕ್ಕೂ ಜನರು ಸಾಗುವಂತೆ ವ್ಯವಸ್ಥೆ ಮಾಡಲು ತೀಮರ್ಾನಿಸಲಾಗಿದೆ. ಒಟ್ಟಾರೆ, ಮೋದಿ ಅವರ ಮೊದಲ ಪ್ರಚಾರ ಸಭೆಗೆ ಜನರು ಬರುತ್ತಿಲ್ಲ ಎಂಬ ಟೀಕೆ ತಪ್ಪಿಸಿಕೊಳ್ಳುವ ಸಲುವಾಗಿ ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂಬುದು ಬಿಜೆಪಿ ಮುಖಂಡರ ಅಭಿಪ್ರಾಯವಾಗಿದೆ.