ಭಕ್ತಿಯ ಪರಾಕಾಷ್ಠೆ ತಲುಪುತ್ತಿದ್ದಾರೆ ಬಿಜೆಪಿ ಮುಖಂಡ !
ವೈಟ್‌ಪೇಪರ್ ವಿಶೇಷ
ಬೆಂಗಳೂರು: ಆಳುವವರು ತಮ್ಮನ್ನು ತಾವೇ ದೇವರೆಂದುಕೊAಡರೆ ಏನಾಗುತ್ತದೆ ಎಂಬುದನ್ನು ಇತಿಹಾಸದುದ್ದಕ್ಕೂ ನೋಡಿದ್ದೇವೆ. ಇತ್ತೀಚೆಗೆ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಂತಹದ್ದೇ ನೆಲೆಯಲ್ಲಿ ನಿಲ್ಲಿಸಲು ನೋಡುತ್ತಿದೆ ಎನಿಸುತ್ತದೆ. ಇದರ ಪರಿಣಾಮ ಏನೆಂಬುದು ಮಾತ್ರ ನಿಗೂಢ.
ನೆನ್ನೆಯಷ್ಟೇ ಬಿಜೆಪಿಯ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಸಂಭೀತ್ ಪಾತ್ರಾ, ಪೂರಿ ಜಗನ್ನಾಥನೇ ಪ್ರಧಾನಿ ನರೇಂದ್ರ ಮೋದಿಯ ಭಕ್ತ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಇದು ವಿವಾದ ಸೃಷ್ಟಿಸಿದ್ದು, ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಮೋದಿ ದೇವರಿಗಿಂತ ದೊಡ್ಡವರು ಎಂದು ಸಾಗಾಗ ಸಾಭಿತು ಮಾಡುವ ಪ್ರಯತ್ನವನ್ನು ಬಿಜೆಪಿಗರು ಮಾಡುತ್ತಿದ್ದು, ಸಂಭೀತ್ ಪಾತ್ರಾ ಅದರ ಭಾಗ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಮೋದಿ ಭಕ್ತಿಯ ಹೆಸರಿನಲ್ಲಿ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದಾಗ ತೊಡುವ ವೇಷಭೂಷಣಗಳಿಂದ ಪ್ರೇರೇಪಿತರಾಗುವ ಅವರ ಅನುಯಾಯಿಗಳನ್ನು ದೇವರಂತೆ ಬಿಂಬಿಸುವುದು ಹೊಸದಲ್ಲ. ನರೇಂದ್ರ ಮೋದಿ ಅವರು ಶ್ರೀ ರಾಮಮಂದಿರ ಉದ್ಘಾಟನೆಗೆ ಸಜ್ಜು ಮಾಡಿದಾಗ ಕೆಲವು ಬಿಜೆಪಿ ನಾಯಕರು ಅವರನ್ನು ಶ್ರೀರಾಮನ ಅವತಾರವೆಂದೇ ಕೊಂಡಾಡಿದರು.
ಕೇದಾರನಾಥದ ಗುಹೆಗಳಲ್ಲಿ ಕುಳಿತಾಗ ಆತನೊಬ್ಬ ಸಂತ ಎಂಬAತೆ, ಭಾವಿಸಿ ಅವರನ್ನು ಹೊಗಳಿ ಕೊಂಡಾಡುವ ಮನಸ್ಥಿತಿ ಬಿಜೆಪಿ ನಾಯಕರಲ್ಲಿದೆ. ಅದೇ ರೀತಿ ಶ್ರೀರಾಮನನ್ನೇ ಬಾಲಕನ್ನಾನಿಗಿಸಿಕೊಂಡು, ಆತನ ಕೈಹಿಡಿದು ರಾಮಮಂದಿರದ ಕಡೆಗೆ ಕರೆದೊಯ್ಯುತ್ತಿರುವ ಚಿತ್ರ ಬಿಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿತ್ತು. ಇದು ಟೀಕೆಗೆ ಗುರಿಯಾಗಿತ್ತು. ರಾಮನನ್ನೇ ಬಾಲಕನನ್ನಾಗಿ ಮಾಡಿ, ಆತನಿಗೆ ದಾರಿ ತೋರುವಂತೆ ಮೋದಿಯನ್ನು ಚಿತ್ರಿಸುವ ಮೂಲಕ ಭಕ್ತಿಯ ಪರಾಕಾಷ್ಠೇ ಮೆರೆಯುತ್ತಿದ್ದಾರೆ ಎಂದು ಜನ ಟೀಕಿಸಿದ್ದರು.
ಭಾರತದಲ್ಲಿ ನಾಯಕರ ಮೇಲಿನ ಇಂತಹ ಅಂಧಭಕ್ತಿ ಮೋದಿ ಕಾಲದಲ್ಲೇ ಹೊಸದೇನಲ್ಲ, ಆದರೆ, ಈಗ ಮಿತಿಮೀರಿದೆ ಅಷ್ಟೇ. ಇಂದಿರಾ ಗಾಂಧಿ ಅವರ ಕಾಲದಲ್ಲಿಯೂ ಇಂತಹದ್ದೇ ಹೊಗಳುಭಟರು ಕಾಂಗ್ರೆಸ್‌ನೊಳಗಿದ್ದರು. ಈಗಲೂ ಕೆಲವರು ಆಗಾಗ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಬಗ್ಗೆ ಅಂತಹದ್ದೇ ನಿಷ್ಠೆ ಉಳಿಸಿಕೊಂಡಿದ್ದಾರೆ. ಆದರೆ, ಮೋದಿ ಮೇಲಿನ ಭಕ್ತಿಯಷ್ಟು ರಾಜಾರೋಷವಾಗಿ ತೋರ್ಪಡಿಕೆಯಾಗುತ್ತಿಲ್ಲ ಅಷ್ಟೇ.
ರಾಜಕೀಯ ನಾಯಕನೊಬ್ಬನ ಮೇಲಿನ ಇಂತಹ ಕುರುಡು ಭಕ್ತಿಯೇ ಸರ್ವಾಧಿಕಾರದೆಡೆಗೆ ದೇಶವನ್ನು ಕೊಂಡೊಯ್ಯುತ್ತದೆ ಎಂದು ಇತಿಹಾಸ ಹೇಳುತ್ತದೆ. ಇದಕ್ಕಾಗಿಯೇ ಮೋದಿ ವಿಚಾರದಲ್ಲಿ ಸರ್ವಾಧಿಕಾರಿ ಎಂಬ ಟೀಕೆ ಇತ್ತೀಚೆಗೆ ಹೆಚ್ಚಾಗಿರುವುದು. ಇದರಲ್ಲಿ ಮೋದಿ ಅವರ ತಪ್ಪಿದೆಯೋ, ಅವರ ಹಿಂಬಾಲಕರ ತಪ್ಪಿದೆಯೋ ಒಟ್ಟಾರೆ, ಇಂತಹದ್ದೊAದು ವಾತಾವರಣ ಸೃಷ್ಟಿಯಾಗುತ್ತಿರುವುದಂತೂ ಸ್ಪಷ್ಟವಾಗಿದೆ.
ಇಂದಿರಾ ಗಾಂಧಿ ಮೇಲಿನ ಕಾಂಗ್ರೆಸ್ ನಾಯಕರ ಇಂತಹ ಅಂಧಶ್ರದ್ಧೆಯೇ ತುರ್ತುಪರಿಸ್ಥಿತಿಗೆ ಕಾರಣ ಎಂದು ಹೇಳಲಾಗುತ್ತದೆ. ತುರ್ತು ಪರಿಸ್ಥಿತಿ ತಂದು ಕೆಲವೊಂದು ಒಳ್ಳೆಯ ಕಾನೂನು ಜಾರಿಗೆ ತಂದರಾದರೂ, ಅದರಿಂದ ಸಾವಿರಾರು ಬಡವರಿಗೆ ಅನುಕೂಲವಾಗುವ ಕೆಲ ಕಾನೂನು ಜಾರಿಯಾದವಾದರೂ, ಅದರಿಂದ ಆದ ಘಾಸಿ ಇನ್ನೂ ಮಾಸಿಲ್ಲ. ಹೀಗಾಗಿ, ಅಂಧಭಕ್ತಿ ಅಷ್ಟೊಂದು ಒಳ್ಳೆಯದಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಟೀಕೆ ಹೆಚ್ಚಾಗುತ್ತಿದ್ದಂತೆ ಸಂಬೀತ್ ಫಾತ್ರಾ ತಾವು ಕ್ಷಮೆ ಕೋರಿದ್ದಾರೆ. ತಮ್ಮ ಕ್ಷಮೆಗಾಗಿ, ಮೂರು ದಿನ ಉಪವಾಸವಿದ್ದು, ಪೂರಿ ಜಗನ್ನಾಥನ ಸನ್ನಿದಿಯಲ್ಲಿಯೇ ಕಳೆಯುವುದಾಗಿ ತಿಳಿಸಿದ್ದಾರೆ. ಇದರಿಂದ ಒಡಿಸ್ಸಾದ ಜನತೆಗೆ, ದೇಶದ ಪೂರಿ ಜಗನ್ನಾಥ ಭಕ್ತರಿಗೆ ಆಗಿರುವ ನೋವಿಗೆ ಕ್ಷಮೆ ಕೋರಿದ್ದಾರೆ. ಕ್ಷಮೆಯಿರಲಿ, ಇಂತಹ ಹೇಳಿಕೆ ಕೊಡುವಾಗ ಎಚ್ಚರಿಕೆ ಕೊಡುವುದು ಉತ್ತಮ ಎಂದು ಮೊದಲೇ ತಿಳಿದುಕೊಳ್ಳಬೇಕು. ನಾಯಕರನ್ನು ನಾವಾಗಿಯೇ ದೇವರಿಗಿಂತ ದೊಡ್ಡವರನ್ನಾಗಿ ಮಾಡಬಾರದು.