ಅಪರಾಧ ರಾಜಕೀಯ ಸುದ್ದಿ

ಸಿಲಿಂಡರ್ ಸೋರಿಕೆಯಿಂದ ಒಂದೇ ಕುಟುಂಬದ ನಾಲ್ವರ ಸಾವು

Share It

ಮೈಸೂರು : ತಂದೆ ತಾಯಿ ಮತ್ತು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮಲಗಿದ್ದಲ್ಲಿಯೇ ಮೃತಪಟ್ಟಿದ್ದು, ಅನಿಲ ಸೋರಿಕೆಯಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಮೈಸೂರಿನ ಯರಗನಹಳ್ಳಿಯಲ್ಲಿ ಘಟನೆ ನಡೆದಿದ್ದು, ೪೫ ವರ್ಷದ ಕುಮಾರಸ್ವಾಮಿ, ಮಂಜುಳಾ(೩೯) ಹಾಗೂ ಮಕ್ಕಳಾದ ಅರ್ಚನಾ (೧೯), ಸ್ವಾತಿ ಮೃತಪಟ್ಟವರು. ನೆನ್ನೆ ಇಡೀ ಕುಟುಂಬ ನೆಂಟರಿಷ್ಟರ ಜತೆಯಲ್ಲಿ ಲವಲವಿಕೆಯಿಂದಲೇ ಒಡನಾಡುತ್ತಿದ್ದರು. ರಾತ್ರಿ ಊಟ ಮಾಡಿ ಮಲಗಿದ ನಂತರ ಅನಿಲ ಸೋರಿಕೆಯಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ವಿಧಿವಿಜ್ಞಾನ ತಜ್ಞರು ಭೇಟಿ ನೀಡಿ ಪರಿಶೀಲಿಸಿದಾಗ ಮನೆಯಲ್ಲಿಟ್ಟಿದ್ದ ಮೂರು ಸಿಲಿಂಡರ್‌ನಲ್ಲಿ ಸೋರಿಕೆಯುಂಟಾದ ಕಾರಣಕ್ಕೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಮೃತ ಕುಟುಂಬ ಯರಗನಹಳ್ಳಿ ಪ್ರದೇಶದಲ್ಲಿ ಬಟ್ಟೆ ಐರನ್ ಮಾಡುವ ಅಂಗಡಿಯನ್ನಿಟ್ಟುಕೊAಡು ಜೀವನ ನಡೆಸುತ್ತಿದ್ದರು.

ಸ್ಥಳಕ್ಕೆ ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ಮೂರು ಸಿಲಿಂಡರ್‌ಗಳು ಪತ್ತೆಯಾಗಿದ್ದು, ಮೂರರ ಪೈಕಿ ಯಾವ ಸಿಲಿಂಡರ್ ಸೋರಿಕೆಯಾಗಿದೆ, ಅಥವಾ ಮೂರು ಸಿಲಿಂಡರ್ ಸೋರಿಕೆಯಾಗಿತ್ತಾ? ಎಂಬಿತ್ಯಾದಿ ವಿಷಯಗಳ ಕುರಿತು ಪರಿಶೀಲನೆ ನಡೆಯುತ್ತಿದೆ.


Share It

You cannot copy content of this page