ಭುವನೇಶ್ವರ : ಮರು ಮದುವೆಗೆ ವಿರೋಧಿಸುತ್ತಿದ್ದ ತನ್ನ ಮಕ್ಕಳನ್ನೇ ತಾಯಿಯ ಸಹಾಯದಿಂದ ಕೊಲೆಗೈದ ವ್ಯಕ್ತಿಯೊಬ್ಬ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಿದ ಘಟನೆ ನಯಾಗಢ ಜಿಲ್ಲೆಯಲ್ಲಿ ನಡೆದಿದೆ.
ಪ್ರಕಾಶ್ ಮೋಹಂತಿ ಎಂಬ 40 ವರ್ಷದ ವ್ಯಕ್ತಿ ಹಾಗೂ ಆತನಿಗೆ ಸಹಾಯ ಮಾಡಿದ 60 ವರ್ಷದ ಆತನ ತಾಯಿ ಸೌರಿ ಮೊಹಾಂತಿಯನ್ನು ಪೊಲೀಸರು ಬಂಧಿಸಿದ್ದಾರೆದೀ ಇಬ್ಬರು ಸೇರಿ ಪ್ರಕಾಶ್ ಪುತ್ರರಾದ 14 ವರ್ಷದ ಆಕಾಶ್ ಮೊಹಂತಿ ಹಾಗೂ 9 ವರ್ಷದ ಬಿಕಾಶ್ ಮೊಹಂತಿಯನ್ನು ಕತ್ತುಹಿಸುಕಿ ಕೊಲೆ ಮಾಡಿ ನಂತರ ನೇಣುಬಿಗಿದು ಆತ್ಮಹತ್ಯೆ ಎಂದು ಬಿಂಬಿಸಿದ್ದರು.
ಅಕ್ರಮ ಕಟ್ಟಡದಲ್ಲಿ ಡಾಬಾ ನಡೆಸುತ್ತಿದ್ದ ಕಾರಣಕ್ಕೆ ಪ್ರಕಾಶ್ ಮೊಹಂತಿಯ ಹೋಟೆಲ್ ಅನ್ನು ಬಿಎಂಸಿ ಅಧಿಕಾರಿಗಳು ನೆಲಸಮ ಮಾಡಿದ್ದರು. ಅಂದಿನಿAದ ಪ್ರಕಾಶ್ ನಿರುದ್ಯೋಗಿಯಾಗಿದ್ದ. ಆದರೆ, ಆತನ ಪತ್ನಿ ಕೌಟುಂಬಿಕ ಕಲಹದಿಂದಾಗಿ ಎರಡೂವರೆ ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು.
ತಾಯಿಯ ಸಾವಿನ ನಂತರ ಆಕಾಶ್ ಮತ್ತು ಬಿಕಾಶ್ ತಂದೆ ಮತ್ತು ಅಜ್ಜಿಯ ಜತೆಗೆ ವಾಸ ಮಾಡುತ್ತಿದ್ದು, ತನ್ನ ತಂದೆ ಮರುಮದುವೆಯಾಗುವುದನ್ನು ವಿರೋಧಿಸುತ್ತಿದ್ದರು. ಜತೆಗೆ, ತಮ್ಮ ತಂದೆಯ ಮರುಮದುವೆಯ ಯೋಜನೆಗಳನ್ನು ಸಂಬAಧಿಕರಿಗೆ ತಿಳಿಸುವ ಮೂಲಕ ಆತನಿಗೆ ಬುದ್ದಿವಾದ ಹೇಳಿಸುತ್ತಿದ್ದರು.
ಕಳೆದ ಒಂದು ವಾರದ ಹಿಂದೆ ವಧುವಿನ ಕಡೆಯ ಸಂಬAಧಿಕರು ಮನೆಗೆ ಬಂದಿದ್ದು, ಆ ಸಂದರ್ಭದಲ್ಲಿ ಮಕ್ಕಳು ತಂದೆಯ ಮದುವೆಯನ್ನು ವಿರೋಧಿಸಿದ್ದ ಘಟನೆ ನಡೆದಿತ್ತು. ಮಕ್ಕಳಿದ್ದರೆ ಮರುಮದುವೆ ಸಾಧ್ಯವಿಲ್ಲ ಎಂದು ವಧುವಿನ ಕಡೆಯವರು ಹೊರಟುಹೋಗಿದ್ದರು.
ಇದರಿಂದ ಸಿಟ್ಟಿಗೆದ್ದಿದ್ದ ಪ್ರಕಾಶ್ ಇಬ್ಬರು ಮಕ್ಕಳನ್ನು ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದರು. ನಂತರ ತಾಯಿಯ ಸಹಾಯದಿಂದ ಇಬ್ಬರನ್ನು ಮನೆಯ ಕೋಣೆಯ ಫ್ಯಾನ್‌ಗೆ ನೇತುಹಾಕಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಂಬಿಸಿದ್ದರು. ಹೊರಗೆ ಹೋದವನಂತೆ ನಟಿಸಿದ್ದ ಪ್ರಕಾಶ್ ಕೆಲ ಸಮಯದ ನಂತರ ಘಟನಾ ಸ್ಥಳಕ್ಕೆ ಬಂದಿದ್ದರು.
ಮಕ್ಕಳ ಚಿಕ್ಕಪ್ಪ ಲಕ್ಷö್ಮಣ್ ನಾಯಕ್ ಎಂಬುವವರು ಘಟನೆಯ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ವಿಚಾರಣೆ ನಡೆಸಿದಾಗ ಪಾಪಿಗಳ ಕುಕೃತ್ಯ ಬೆಳಕಿಗೆ ಬಂದಿದೆ. ಮೊದಲಿಗೆ ಆತ್ಮಹತ್ಯೆ ಎಂದೇ ವಾದ ಮಾಡುತ್ತಿದ್ದ ಆರೋಪಿಗಳು ಅನಂತರ ಸತ್ಯ ಒಪ್ಪಿಕೊಂಡಿದ್ದಾರೆ.
ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಮರುಮದುವೆಗೆ ಅಡ್ಡಿಯಾಗಿದ್ದೇ ಮಕ್ಕಳ ಕೊಲೆಗೆ ಕಾರಣ ಎಂದು ಗೊತ್ತಾಗಿದ್ದು, ಮಕ್ಕಳ ಶವಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ನಯಾಗರ್ ಎಸ್‌ಪಿ ಸುಶ್ರೀ ಟೈಮ್ ಆಫ್ ಇಂಡಿಯಾ ತಿಳಿಸಿದ್ದಾರೆ.