ರಾಜಕೀಯ ಸುದ್ದಿ

ಮೆಟ್ರೋ ಕಾಮಗಾರಿಗೆ ಕೇಂದ್ರದ ಅನುದಾನ ಶೇ 16.2 : ಮಾತ್ರ: ಸಚಿವ ರಾಮಲಿಂಗಾ ರೆಡ್ಡಿ ಕೊಟ್ಟ ಸ್ಪಷ್ಟನೆ ಏನು? 

Share It

ಬೆಂಗಳೂರು: ಮೆಟ್ರೋ ಕಾಮಗಾರಿಯಲ್ಲಿ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದ ಅನುದಾನ ಪಾಲುದಾರಿಕೆ ಕುರಿತು ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದು, ಕೇಂದ್ರದ ಪಾಲು ಶೇ. 16.2 ಎಂದು ಸ್ಪಷ್ಟಪಡಿಸಿದ್ದಾರೆ. 

ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಗುಲಾಬಿ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಲಿದ್ದು, ಈ ಹಿನ್ನೆಲೆಯಲ್ಲಿ ಕಾಮಗಾರಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ನೀಡಿತ್ತಿರಿವ ಅನುದಾನದ ಕುರಿತು ಚರ್ಚೆ ಆರಂಭವಾಗಿದೆ. ಈ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರ ಜೋರಾಗಿರುವ ಹಿನ್ನೆಲೆಯಲ್ಲಿ ರಾಮಲಿಂಗಾ ರೆಡ್ಡಿ ಅವರು, ಸೂಕ್ತ ಅಂಕಿ ಅಂಶಗಳ ಸಮೇತ ಸ್ಪಷ್ಟನೆ ನೀಡಿದ್ದಾರೆ. 

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪ್ರಸ್ತುತ ಉದ್ಘಾಟನೆಯಾಗುತ್ತಿರುವ ಯೋಜನೆಗೆ ಮೂಲ ಮಂಜೂರಾತಿ ನೀಡಿದ್ದು, ಕೇಂದ್ರದಲ್ಲಿದ್ದ ಯುಪಿಎ ಸರಕಾರ. ನಾನು ಸಾರಿಗೆ ಮತ್ತು ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 2014ರಲ್ಲಿ ಮೊದಲ ಹಂತದ ಕಾಮಗಾರಿ ಶುರುವಾಗಿತ್ತು ಎಂದು ತಿಳಿಸಿದ್ದಾರೆ. 

21 ಕಿ.ಮೀ ಉದ್ದದ ಗುಲಾಬಿ ಮಾರ್ಗದ ಯೋಜನೆಯ ಮೂಲ ಅಂದಾಜು ವೆಚ್ಚ 8730 ಕೋಟಿ ರೂಪಾಯಿಗಳಾಗಿತ್ತು. ನಂತರ ಪರಿಷ್ಟೃತ ಅಂದಾಜು ವೆಚ್ಚವನ್ನು 17,346 ಕೋಟಿ ರೂಪಯೋಗಳಾಗಿದೆ. ಇದರಲ್ಲಿ ರಾಜ್ಯ ಸರಕಾರದ ಪಾಲು 12,000 ಕೋಟಿ ರೂಪಾಯಿಗಳಾಗಿದೆ. 

ನಮ್ಮ ಮೆಟ್ರೋ ಯೋಜನೆಯ ಮೊದಲ ಮತ್ತು ಎರಡನೆಯ 2A, 2B ಹಾಗೂ ಮೂರನೇ ಹಂತದ ಒಟ್ಟಾರೆ ವೆಚ್ಚ 77,891 ಕೋಟಿ ರೂಪಾಯಿಗಳಾಗಿದೆ. ಇದರಲ್ಲಿ ರಾಜ್ಯ ಸರಕಾರದ ಕೊಡುಗೆ 65291 ಕೋಟಿ ರೂಪಾಯಿಗಳಾಗಿದ್ದರೆ, ಕೇಂದ್ರ ಸರಕಾರದ ಕೊಡುಗೆ 12000 ಕೋಟಿ ರೂಪಾಯಿಗಳಾಗಿದೆ. ಒಟ್ಟಾರೆ ಶೇಕಡಾವಾರು ರಾಜ್ಯದ ಪಾಲು ಶೇ 83.8 ರಷ್ಟು ಆಗಿದ್ದಾರೆ, ಕೇಂದ್ರ ಸರಕಾರದ ಪಾಲು ಶೇ.16.2 ರಷ್ಟಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. 


Share It

You cannot copy content of this page