ಅಣ್ಣಿಗೇರಿ: ಉತ್ತರ ಕರ್ನಾಟಕದ ಕಲೆ ಸಾಹಿತ್ಯ ಸಂಗೀತ, ನೃತ್ಯ, ಚಿತ್ರಕಲೆ, ಸಂಸ್ಕೃತಿ,ಪಾರAಪರಿಕ ಪದ್ಧತಿಗಳು, ಕನ್ನಡ ಭಾಷೆ, ನೆಲ, ಜಲ, ಸಂಪತ್ತುಗಳು,ಐತಿಹಾಸಿಕ ಪ್ರಸಿದ್ಧ ಯಾತ್ರಾ ಕ್ಷೇತ್ರಗಳು, ಕವಿಗಳು, ವಿದ್ವಾಂಸರು, ಶರಣರು, ಜನಪದ ಕಲಾವಿದರು,ರಂಗಭೂಮಿ ಕಲಾವಿದರು,ಸತ್ಪುರಷರು, ಮಹಾತ್ಮರ, ಅವಿಮುಕ್ತ ಕ್ಷೇತ್ರಗಳನ್ನು ಉಳಿಸಿ ಬೆಳೆಸುವಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಂಡು ಕನ್ನಡ ನಾಡಿನ ಇತಿಹಾಸ ಮೇಲ್ಪಂಕ್ತಿಯಲ್ಲಿ ಉಳಿಸಲು ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸಂಗೀತ ನಾದಬ್ರಹ್ಮ ಡಾ ಹಂಸಲೇಖ ಹೇಳಿದರು.
ಅಣ್ಣಿಗೇರಿ ತಾಲೂಕಿನ ಆದಿಕವಿ ಪಂಪನ ಜನ್ಮಭೂಮಿಯ ಮನೆಯ ದೇಶಪಾಂಡೆ ವಾಡೆದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಣ್ಣುಮಕ್ಕಳಿಗೆ ಆಗುತ್ತಿರುವ ಶೋಷಣೆ, ಭ್ರೂಣಹತ್ಯೆ, ಅತ್ಯಾಚಾರ ಕೌಟಂಬಿಕ ಕಲಹಗಳು, ಆಗುತ್ತಿರುವ ಅನ್ಯಾಯಗಳ ಕುರಿತು ಅವಲೋಕಿಸಿ ಸೂರಿ ಹೇಳಿದ ಸ್ಟೋರಿಯ ಓಕೆ ಚಲನಚಿತ್ರದ ಚಿತ್ರಕರಣಕ್ಕೆ ಪಟ್ಟಣದ ದೇಸಾಯಿ ವಾಡೆದಲ್ಲಿ ಹಮ್ಮಿಕೊಂಡಿದ್ದು, ಈ ಭಾಗದ ಶಿಶುನಾಳ, ಇಟಗಿ ಇನ್ನೀತರ ಕ್ಷೇತ್ರಗಳಲ್ಲಿ ಚಿತ್ರಿಕರಣ ಮಾಡುವುದರ ಜೊತೆಗೆ ಈಭಾಗದ ರಂಗಭೂಮಿಯ ಕಲಾವಿದರನ್ನೇ ಬಳಿಸಿಕೊಂಡು ಸಿನಿಮಾ ತೆಗೆಯುತ್ತಿದ್ದೇವೆ. ಚಿತ್ರಕಥೆ, ಸಂಭಾಷಣೆ, ಸಂಗೀತ, ಸಾಹಿತ್ಯ, ನಿರ್ದೇಶನ, ಕೂಡಾ ನಾನೇ ಮಾಡುತ್ತಿದ್ದೇನೆ. ನನ್ನ ಚಿತ್ರದ ನಿರ್ಮಾಣ ಜೊತೆ ನಾಗೇಶ ವಾಸ್ಟರ್ ನಿರ್ಮಾಕರಾಗಿ ಜೊತೆಗಿದ್ದಾರೆ. ಅದೀಬಾ ಅಕ್ಷರ್ ಕಥೆ ಬರೆದಿದ್ದು, ಪಿ.ಕೆ.ಎಚ್.ದಾಸ್ ಛಾಯಗ್ರಾಹಕರಾಗಿದ್ದಾರೆ. ಹೊಸ್ಮನೆ ಮೂರ್ತಿ ಕಲೆಗೆ ಪ್ರೇರಣೆ ಕಲ್ಪಿಸುತ್ತಿದ್ದಾರೆ.
ಹಂಸಲೇಖ ಮೂವಿಸ್ ಮತ್ತು ಆಕಾಂಕ್ಷಾ ಪ್ರೊಡಕ್ಷನ್ ಸಂಸ್ಥೆಗಳ ಜಂಟಿ ನಿರ್ಮಾಣದಲ್ಲಿ ಓಕೆ ಚಲನಚಿತ್ರದ ಚಿತ್ರೀಕರಣ ಪ್ರಾರಂಭಗೊAಡಿದೆ. ತಾರಾಣಗದಲ್ಲಿ ಕಿಶೋರ್, ರವಿಚಂದ್ರನ್. ಮಾಲಶ್ರೀ, ನಿಷ್ಕಲಾ, ತನಿಷ್ಕಾ ರಾಶಿಕಾ ಶೆಟ್ಟಿ, ದೊಡ್ಡಣ್ಣ ಅಶೋಕ, ಚಿತ್ಕಲಾ ಬಿರಾದರ್, ನೀತಾ ಮೈಂದರ್ಗಿ ಗವಿಸಿದ್ಧಯ್ಯ, ಶ್ಯಾಮ್ ಖಾನಾಪುರ ಸುನಂದ ಹೊಸ್ಪೇಟ್, ಇಂದ್ರಜಿತ್ , ಅಕ್ಷತಾ ತಾರಗಣದಲ್ಲಿದ್ದಾರೆ.
ಈ ಚಿತ್ರ ಡಿಸೆಂಬರ್ ಅಂತ್ಯದೊಳಗೆ ಚಿತ್ರೀಕರಣ ಮುಗಿಸಿ ಬಿಡುಗಡೆ ಮಾಡುವ ಹಂತದಲ್ಲಿದ್ದೇವೆ. ಪ್ರತಿಯೊಬ್ಬ ಹೆಣ್ಣುಮಕ್ಕಳು ನೋಡುವಂತ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವಂತ ಚಲನಚಿತ್ರವಾಗಿದ್ದು, ಪ್ರತಿಯೊಬ್ಬರು ನೋಡಿ ಹಾರೈಸಿ ಯಶಸ್ವಿಗೆ ಕಾರಣೀಬೂತರಾಗಬೇಕೆಂದು ಹೇಳಿದರು.
ಗದಗ ಪಂಚಾಕ್ಷರಿ ಗವಾಯಿ ಮಠ, ಅಣ್ಣಿಗೇರಿ ಆದಿಕವಿ ಪಂಪನ ಜನ್ಮಸ್ಥಳ, ಕುಮಾರವ್ಯಾಸನ ಜನ್ಮಸ್ಥಳ,ಈ ಬಾಗದ ಕವಿಗಳ, ಶರಣರು, ಸತ್ಪುರಷರು, ಬಸವಣ್ಣವರ ಪ್ರಮಥರ ಕಾಲಿನ ಜನ್ಮಸ್ಥಳ,ಕನ್ನಡ ಸಾಹಿತ್ಯ ಕ್ಷೇತ್ರಗಳಲ್ಲಿ ಉಳಿಸುವ ದಿಸೆಯಲ್ಲಿ ಅಭಿವೃದ್ಧಿ ಪಡಿಸಬೇಕಾದ ಅವಶ್ಯಕತೆಯಿದೆ. ಸರ್ಕಾರ ಇಂದಿನ ಮುಖ್ಯಮಂತ್ರಿಗಳು ಕನ್ನಡ ನೆಲ,ಜಲ, ಭಾಷೆ, ಕವಿಗಳು ಐತಿಹಾಸಿಕ ಕ್ಷೇತ್ರಗಳ ಉಳಿಸುವಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕು ಆ ಹಿನ್ನಲೆಯಲ್ಲಿ ಸದಾ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಎಂದರು.
ಕಲಾವಿದರಾದ ಕಿಶೋರ್, ಇಂದ್ರಜೀತ್ ನಿಷ್ಕಲಾ, ತನಿಷ್ಕಾ, ರಾಶಿಕಾ ಶೆಟ್ಟಿ, ದೊಡ್ಡಣ್ಣ, ಅಶೋಕ, ಚಿತ್ಕಲಾ ಬಿರಾದರ, ಗವಿಸಿದ್ದಯ್ಯ ಸುನಂದ ಹೊಸಪೇಟಿ, ಅಕ್ಷತಾ ಡಾ ಹಂಸಲೇಖ ನಿರ್ಮಾಣದ ಒಕೆ ಸಿನಿಮಾದಲ್ಲಿ ನಮ್ಮಂಥ ಕಲಾವಿದರನ್ನು ಬೆಳೆಸುವಲ್ಲಿ ಆಯ್ಕೆ ಮಾಡಿ ಅವಕಾಶ ಕಲ್ಪಿಸಿದ್ದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸಿದರು.

