ವರದಿ: ಮಹೇಶ ಮಲ್ಲಿಕಾರ್ಜುನ ಹಕ್ಕರಕಿ.
ಅಣ್ಣಿಗೇರಿ:ಗಾಳಿ, ಮಳೆ, ಬಿಸಿಲು, ಚಳಿ ಎನ್ನದೆ ದಿನನಿತ್ಯ ನಸುಕಿನ ಜಾವದಿಂದ ಸ್ವಚ್ಛತಾ ಸೇವೆ ಕೈ ಗೋಳ್ಳುವ ಪೌರ ಕಾರ್ಮಿಕರು ನಿಜವಾದ ಕಾಯಕಯೋಗಿಗಳು ಎಂದು ಶಾಸಕ ಎನ್ ಕೋನರಡ್ಡಿ ಅವರು ಹೇಳಿದರು.
ಅಣ್ಣಿಗೇರಿಯ ಪುರಸಭೆಯ ಪ್ರಾಂಗಣದಲ್ಲಿ ಅಮೃತ ನಗರೋತ್ಪಾನ ಯೋಜನೆ 4 ರ ಅಡಿಯಲ್ಲಿ ನಿರ್ಮಾಣವಾದ ವಿಶ್ರಾಂತಿ ಗೃಹವನ್ನು ಮಂಗಳವಾರ ಶಾಸಕ ಎನ್ ಎಚ್ ಕೋನರಡ್ಡಿ ಉದ್ಘಾಟಿಸಿದರು. ನಂತರ ಸಭೆ ಉದ್ದೇಶಿಸಿ ಮಾತನಾಡಿದ ಅವರು ಪೌರ ಕಾರ್ಮಿಕರು ಅಣ್ಣಿಗೇರಿ ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿ ಇಡಲು ಅವರ ಕಾರ್ಯ ಶ್ಲಾಘನೀಯ. ಸರ್ಕಾರದ ನಿರ್ದೇಶನದಂತೆ ಅವರಿಗೆ ವಿಶ್ರಾಂತಿ ಗೃಹ ಕಟ್ಟಿ ಅವರಿಗೆ ಹಸ್ತಾಂತ ಮಾಡಿರುವದು ನನಗೆ ಅತೀವ ಸಂತೋಷವಾಗುತ್ತಿದೆ. ಅದಲ್ಲದೆ ರಾಜರಾಜೇಶ್ವರಿ ನಗರದಲ್ಲಿನ ಉದ್ಯಾನವನ, ಶೌಚಾಲಯ ಉದ್ಘಾಟನೆ ಮಾಡಿ ಸಾರ್ವಜನಿಕರಿಗೆ ಬಯಲು ಮಕ್ತ ಶೌಚಾಲಯ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮುಖ್ಯಾಧಿಕಾರಿ ವಾಯ್ ಜಿ ಗದ್ದಿಗೌಡರ ಮಾತನಾಡಿದರು. ನಂತರ ಪೌರಕಾರ್ಮಿಕರ ವತಿಯಿಂದ ಶಾಸಕ ಎನ್ ಎಚ್ ಕೋನರಡ್ಡಿ ಅವರಿಗೆ ಸನ್ಮಾನಿಸಲಾಯಿತು.
ಬಾಕ್ಸ.
ಅಣ್ಣಿಗೇರಿ ಶಾಶ್ವತ ಕುಡಿಯುವ ನೀರಿನ ಕೇರೆಗೆ ಊರಿನ ಆರಾಧ್ಯದೈವ ಅಮೃತೇಶ್ವರ ಹೆಸರು ನಾಮಕರಣವನ್ನು ಪುರಸಭೆ ಸರ್ವಾನುಮತದಿಂದ ಮಾಡಿರುವದು. ಅಣ್ಣಿಗೇರಿ ಅಮೃತೇಶ್ವರ ಕುಡಿಯುವ ನೀರಿನ ಜಲಾಶಯ ಎಂದು ನಾಮಕರಣ ಮಾಡಿರುವದು ನನ್ನ ಪೂರ್ವ ಜನ್ಮದ ಪುಣ್ಯ
– ಎನ್ ಎಚ್ ಕೋನರಡ್ಡಿ,
ನವಲಗುಂದ ವಿಧಾನ ಸಭಾ ಕ್ಷೇತ್ರದ ಶಾಸಕ.
ಈ ಸಂದರ್ಭದಲ್ಲಿ ಅಧ್ಯಕ್ಷ ಶಿವಾನಂದ ಬೆಳಹಾರ, ಉಪಾಧ್ಯಕ್ಷ ನಾಗಪ್ಪ ದಳವಾಯಿ, ಮುಖ್ಯಾಧಿಕಾರಿ ವಾಯ್ ಜಿ ಗದ್ದಿಗೌಡರ, ಸ್ಥಾಯಿ ಸಮಿತಿ ಸದಸ್ಯರಾದ ತಿಮ್ಮಣ್ಣ ಕೋರವರ, ಇಮಾಮ ಸಾಬ ದರವಾನ, ಹಸೀನ್ ಸಾಬ್ ಬಾರಿಗಿಡಿದ, ನೀಲವ್ವಾ ಕುರಹಟ್ಟಿ ಹಾಗೂ ಸರ್ವ ಸದಸ್ಯರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.

