ಬೆಂಗಳೂರು: ನನ್ನನ್ನು ಹಿಂದೆ ಯೇಸು ಕುಮಾರ್ ಅಂತ ಕರೀತಿದ್ರು, ಆಮೇಲೆ ಬ್ರದರ್ ಅಂತ ಕರೆದ್ರು, ಈಗ ಶಿವನ ದೇವಾಲಯಕ್ಕೆ ಹೋದ್ರು ಟೀಕೆ ಮಾಡ್ತಾರೆ ಎಂದು ಡಿಸಿಎಂ ಡಿಕೆಶಿ ಗುಡುಗಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ನಾನು ಏನೇ ಮಾಡಿದ್ರೂ ಟೀಕೆ ಮಾಡ್ತಾರೆ. ನಾನು ಕುಂಭಮೇಳಕ್ಕೆ ಹೋದರೆ ಟೀಕಿಸುತ್ತಾರೆ, ಶಿವನ ದೇವಸ್ಥಾನಕೆಕ ಹೋದ್ರೆ ಟೀಕೆ ಮಾಡ್ತಾರೆ. ನಾನು ಹಿಂದೂವಾಗಿ ಹುಟ್ಟಿದ್ದೇನೆ. ಹಿಂದೂ ದೇವಸ್ಥಾನ, ಪೂಜೆಗೆ ಹೋದ್ರೆ ಟೀಕೆ ಮಾಡ್ತಾರೆ ಎಂದಿದ್ದಾರೆ.
ಹಿAದೆ ನನಗೆ ಯೇಸುಕುಮಾರ ಎಂದು ಟೀಕೆ ಮಾಡುತ್ತಿದ್ದರು. ಅನಂತರ ಬ್ರದರ್ ಎಂದು ಟೀಕೆ ಮಾಡುತ್ತಿದ್ದರು. ಈಗ ಶಿವನ ದೇವಸ್ಥಾನಕ್ಕೆ ಭೇಟಿ ಕೊಟ್ಟರು ಟೀಕೆ ಮಾಡ್ತಾರೆ. ಹೀಗಾಗಿ, ನಾನು ಟೀಕೆಗೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.