ಕ್ಯಾಲೆಂಡರ್ ತರ್ತೀವಿ, ಗ್ಯಾರಂಟಿ ದಿನಾಂಕ ಘೋಷಣೆ ಮಾಡಿ ಎಂದು ಹೋರಾಟ: ಹೊಸ ತಿರುವು ಪಡೆದುಕೊಂಡ ನಿಖಿಲ್ ಗ್ಯಾರೆಂಟಿ ಹೋರಾಟ
ಬೆಂಗಳೂರು: ಕಾಂಗ್ರೆಸ್ ಪಕ್ಷ ಚುನಾವಣೆ ವೇಳೆ ಐದು ಗ್ಯಾರಂಟಿಗಳನ್ನ ಪ್ರಸ್ತಾಪ ಮಾಡಿದ್ರು. ಆದರೆ ಅವರು ಹೇಳಿದಂತೆ ರಾಜ್ಯದ ಜನತೆಗೆ ಗ್ಯಾರಂಟಿಗಳು ಮುಟ್ಟುತಿದ್ಯಾ.? ಕೇಂದ್ರದ ಕಾಂಗ್ರೆಸ್ ಗಾಂಧಿ ಕುಟುಂಬ ಬಂದು, ನಾಡಿನ ಮಹಿಳೆಯರಿಗೆ ಹಣ ನೀಡಿ ಆರ್ಥಿಕ ಶಕ್ತಿ ತುಂಬುತ್ತಿರೋದಾಗಿ ಭಾಷಣ ಮಾಡಿದ್ರು ಈಗ ಯಾವ ಪರಿಸ್ಥಿತಿ ಬಂದಿದೆ ಎಂದು ಅವರಿಗೆ ಗೊತ್ತಾ ಎಂದು ಕಿಡಿಕಾರಿದರು.
ಕ್ಯಾಲೆಂಡರ್ ತರ್ತೀವಿ ದಿನಾಂಕ ಘೋಷಣೆ ಮಾಡಿ: ಸಭೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ನಿಖಿಲ್ ಅವರು; ಗೃಹಲಕ್ಷ್ಮಿ ಹಣ ಬಿಡುಗಡೆಗೊಳಿಸಿ ನಾಳೆ (ಸೋಮವಾರ) ಬೆಳಗ್ಗೆ 11.30ಕ್ಕೆ ಫ್ರೀಡಂ ಪಾರ್ಕ್ ನಲ್ಲಿ ಜೆಡಿಎಸ್‌ನ ಎಲ್ಲಾ ನಾಯಕರು ಪ್ರತಿಭಟನೆ ಮಾಡಲಿದ್ದೇವೆ.ಅಲ್ಲೇ ಕ್ಯಾಲೆಂಡರ್ ತರ್ತೀವಿ ಗ್ಯಾರಂಟಿ ದಿನಾಂಕವನ್ನು ಘೋಷಣೆ ಮಾಡಲಿ ಎಂದು ನಿಖಿಲ್ ಕುಮಾರಸ್ವಾಮಿ ಅವರು ಒತ್ತಾಹಿಸಿದರು.
ಗೃಹಲಕ್ಷ್ಮಿ ಹಣ ಲೋಕಸಭಾ ಉಪಚುನಾವಣೆಯ ಸಂಧರ್ಭದಲ್ಲಿ ಬಿಡುಗಡೆ ಮಾಡಿದ್ರು. ರಾಜ್ಯದ ಜನರ ಧ್ವನಿಯಾಗಿ ಕೆಲಸ ಮಾಡೋದು ನಮ್ಮ ಕೆಲಸ. ಉಚಿತ ಹಣ, ವಿದ್ಯುತ್, ನೀರು ಕೊಡೋದಾಗಿ ಘೋಷಣೆ ಮಾಡಿದ್ರು ನಾಲ್ಕೈದು ತಿಂಗಳಿಂದ ಹಣ ಬಂದಿಲ್ಲ ಅಂತ ಜನ ಗೊಂದಲದಲ್ಲಿ ಇದ್ದಾರೆ ನಾಡಿನ ಜನತೆಗೆ ಉತ್ತರ ನೀಡಿ ಎಂದು ಅಗ್ರಹಿಸಿದರು.
ಇಂದಿನ ಮುಖಂಡರುಗಳ ಸಭೆಯಲ್ಲಿ ಪ್ರಮುಖವಾಗಿ, ಪಕ್ಷದ ಸದಸ್ಯತ್ವ ಅಭಿಯಾನ ಮತ್ತು ಮಿಸ್ ಕಾಲ್ ಡ್ರೈವ್ ಬಗ್ಗೆ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಲಾಗಿದೆ. ಪಕ್ಷಕ್ಕೆ ಹೆಚ್ಚು ಒತ್ತು ನೀಡಿ ಸಭೆ ಮಾಡಲಾಗಿದೆ ಮಿಸ್ ಕಾಲ್ ಅಭಿಯಾನಕ್ಕೆ ಈ ತಿಂಗಳು ದಿನಾಂಕ ನಿಗದಿ ಮಾಡಿದ್ದೇವೆ. ಮಾನ್ಯ ದೇವೇಗೌಡರು ಮಿಸ್ ಕಾಲ್ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.