ಉಪಯುಕ್ತ ಸುದ್ದಿ

Bpl ನಿಂದ 350 ಹುದ್ದೆಗೆ ಅರ್ಜಿ ಆಹ್ವಾನ!!

Share It

ಭಾರತದ ಪ್ರತಿಷ್ಠಿತ ಕಂಪನಿಯಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಂಪನಿಯು 350 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆದಿದೆ. ಕಮ್ಯುನಿಕೇಶನ್ ವಿಭಾಗದಲ್ಲಿ ಪದವಿಯನ್ನು ಪಡೆದವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿಯ ವಿವರಗಳನ್ನು ಈ ಕೆಳಗಿನಂತೆ ನೋಡೋಣ ಬನ್ನಿ.

ಅರ್ಜಿಯನ್ನು ಸಲ್ಲಿಸಲು ಕಂಪನಿಯ ಅಧಿಕೃತ ಜಾಲತಾಣ bel-india.in ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯನ್ನು ಸಲ್ಲಿಸಲು ಇದೇ ಜನವರಿ 31 ಕೊನೆಯ ದಿನವಾಗಿರುತ್ತದೆ.

ಹುದ್ದೆಗಳು ಈ ಕೆಳಗಿನಂತಿವೆ : 

1. ಪ್ರೊಬೇಷನರಿ ಎಂಜಿನಿಯರ್ (ಎಲೆಕ್ಟ್ರಾನಿಕ್ಸ್) ಇ-II ಗ್ರೇಡ್: 200 ಹುದ್ದೆಗಳು

2. ಪ್ರೊಬೇಷನರಿ ಎಂಜಿನಿಯರ್ (ಮೆಕ್ಯಾನಿಕಲ್) ಇ-II ಗ್ರೇಡ್: 150 ಹುದ್ದೆಗಳು

ಅರ್ಹತೆಗಳು :

ಪ್ರೊಬೇಷನರಿ ಎಂಜಿನಿಯರ್ ಹುದ್ದೆಗೆ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್/ ಮೆಕ್ಯಾನಿಕಲ್ ವಿಭಾಗಗಳಲ್ಲಿ BE/B.Tech/BSc ಎಂಜಿನಿಯರಿಂಗ್, /ಎಲೆಕ್ಟ್ರಾನಿಕ್ಸ್ & ಟೆಲಿಕಮ್ಯುನಿಕೇಷನ್/ಕಮ್ಯುನಿಕೇಷನ್/ಟೆಲಿಕಮ್ಯುನಿಕೇಷನ್/ಮೆಕ್ಯಾನಿಕಲ್ ನಲ್ಲಿ ಪಾಸ್ ಆಗಿರಬೇಕು.

ವಯೋಮಿತಿ : 

25 ವರ್ಷದ ಒಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸಿಬಿಟಿ ಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಮೊದಲು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ನಂತರ ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ ಹಾಜರಾಗಬೇಕು. ಒಟ್ಟಾರೆ ಪರೀಕ್ಷೆಯಲ್ಲಿ ಶೇ 35 ರಷ್ಟು ಅಂಕವನ್ನು ಪಡೆಯಬೇಕು. ಪರಿಶಿಷ್ಟ ಜಾತಿ, ಪಂಗಡದ , ಪಿಡಬ್ಲ್ಯೂಡಿ ಗೆ 30 ರಷ್ಟು ಅಂಕ ಪಡೆದರೆ ಸಾಕು. 

ಅರ್ಜಿ ಶುಲ್ಕ:

 ಸಾಮಾನ್ಯ ಅಭ್ಯರ್ಥಿಗೆ 1180 ಹಾಗೂ  SC/ST/PwBD/ESM ಉಚಿತವಾಗಿ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.


Share It

You cannot copy content of this page