ಉಪಯುಕ್ತ ಸುದ್ದಿ

ಡೈಮಂಡ್ ಬ್ಯಾಟರಿ ಇದು ಸಾರ್ವಕಾಲಿಕ ಬ್ಯಾಟರಿ

Share It

ವಿದ್ಯುತ್ಚಕ್ತಿ ಎಂಬ ಅಗೋಚರ ಶಕ್ತಿಯೊಂದು ಆಧುನಿಕ ಪ್ರಪಂಚದ ಉಗಮಕ್ಕೆ ಮೂಲ ಎಂದೇ ಹೇಳಬೇಕು. ವಿದ್ಯುತ್ಚಕ್ತಿ ಇಲ್ಲದೆ ಯಾವುದೇ ಕೆಲಸ ನಡೆಯುವುದಿಲ್ಲ. ಹಳೆಯ ಎಚ್ಎಂಟಿ ಕೈ ಗಡಿಯಾರದಿಂದ ಹಿಡಿದು ಅಧುನಿಕ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ವರೆಗೆ ವಿದ್ಯುತ್ ಬೇಕೇ ಬೇಕು.

ಶಕ್ತಿಯ ರೂಪಗಳು ಬೇರೆ ಬೇರೆ ಇದ್ದರೂ ಶಕ್ತಿ ಒಂದೇ . ನಮ್ಮಲ್ಲಿ ಸಾಮಾನ್ಯವಾಗಿ ಬ್ಯಾಟರಿಗಳನ್ನು ಚಾರ್ಜ್ ಮಾಡಿ ಬಳಕೆ ಮಾಡುತ್ತೇವೆ. ನೀವು ಎಂದಾದರೂ ಯೋಚಿಸಿದ್ದೀರಾ ಓಮ್ಮೆ ಚಾರ್ಜ್ ಮಾಡಿದ ಬ್ಯಾಟರಿ ದೀರ್ಘಕಾಲದ ವರೆಗೆ ಬಾಳಿಗೆ ಬರಬೇಕೆಂದು ಸದ್ಯ ವಿಜ್ಞಾನಿಗಳು ಅಂತದೊಂದು ಯೋಜನೆಗೆ ಕೈ ಹಾಕಿದ್ದಾರೆ. ಅವರು ಇತ್ತೀಚೆಗೆ ಸೂಪರ್ ಪವರ್ ಬ್ಯಾಟರಿಯನ್ನು ಆವಿಷ್ಕರಿಸಿದ್ದಾರೆ. ಆ ಬ್ಯಾಟರಿಯೇ ನ್ಯಾನೋ ಡೈಮಂಡ್ ಬ್ಯಾಟರಿ.

ನ್ಯಾನೋ ಡೈಮಂಡ್ ಬ್ಯಾಟರಿ (NDB) ಅತ್ಯಂತ ಶಕ್ತಿ ಶಾಲಿ ಹಾಗೂ ದೀರ್ಘಕಾಲೀನದ ವರೆಗೆ ವಿದ್ಯುತ್ ಅನ್ನು ಉತ್ಪಾದಿಸುವ ಬ್ಯಾಟರಿಯಾಗಿದೆ. ಈ ಬ್ಯಾಟರಿಯು ವಜ್ರ ಹಾಗೂ ಅಲ್ಪಾ, ಬೀಟಾ, ನ್ಯೂಟ್ರಾನ್ ಗಳನ್ನು ಒಳಗೊಂಡಿರುತ್ತದೆ. ಮೊದಲಿಗೆ 2017 ರ ಕಾಬೋಟ್ ಇನ್ಸ್ಟಿಟ್ಯೂಟ್ ಸೋಲ್ಡ್ ಔಟ್ ಅನ್ಯೂಯಲ್ ಲಚ್ಚರ್ ನ ‘ಐಡಿಯಾಸ್ ಟೂ ಚೇಂಜ್ ದ ವರ್ಲ್ಡ್’ ಎಂಬ ಉಪನ್ಯಾಸದಲ್ಲಿ ಡೈಮಂಡ್ ಬ್ಯಾಟರಿಯ ಬಗ್ಗೆ ಚರ್ಚೆ ಮಾಡಲಾಗಿತ್ತು. ಬಳಿಕ ಲಂಡನ್ ನ ಬ್ರಿಸ್ಟಲ್ ವಿವಿಯ ಆಟೋಮಿಟಿಕ್ ಎನರ್ಜಿ ಅಥರೀಟಿಯ ವಿಜ್ಞಾನಿಗಳು ವಿಶ್ವದ ಮೊಟ್ಟ ಮೊದಲ ಕಾರ್ಬನ್ 14 ಡೈಮಂಡ್ ಬ್ಯಾಟರಿಯನ್ನು ಕಂಡುಹಿಡಿದಿದ್ದಾರೆ.

ನ್ಯಾನೋ ಡೈಮಂಡ್ ಬ್ಯಾಟರಿ ಸಣ್ಣ ಪರಮಾಣು ಸ್ಥಾವರದಂತೆ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ ಹೆಚ್ಚು ಸಾಮರ್ಥ್ಯವುಳ್ಳ ರೆಡಿಯೋ ಐಸೋಟೋಪುಗಳು ಹಾಗೂ ಹತ್ತಾರು ಸಿಂಥೆಟಿಕ್ ಹಾಳೆಗಳಿಂದ ಬ್ಯಾಟರಿಯು ಆವೃತವಾಗಿರುತ್ತದೆ. ಈ ಮಾದರಿಯಲ್ಲಿ ವಿದ್ಯುತ್ ಅನ್ನು ಉತ್ಪಾದಿಸುವ ಕ್ರಿಯೆಗೆ ಸ್ಥಿತಿ ಸ್ಥಿತಿಸ್ಥಾಪಕ ಚದುರುವಿಕೆ ಎಂದು ಕರೆಯುತ್ತೇವೆ. ಈ ಬ್ಯಾಟರಿಯು ಸತತವಾಗಿ 28,000 ವರ್ಷಗಳ ವರೆಗೆ ವಿದ್ಯುತ್ ಉತ್ಪಾದನೆ ಮಾಡಬಲ್ಲದ್ದಾಗಿದೆ.

ಈ ಬ್ಯಾಟರಿಗೆ ಯಾವುದೇ ಬಾಹ್ಯ ಶಕ್ತಿಗಳ ಅವಶ್ಯಕತೆ ಇರುವುದಿಲ್ಲ. ವಾತಾವರಣದಲ್ಲಿ ಗಾಳಿ ಇದ್ದರೆ ಸಾಕು. ಬ್ಯಾಟರಿ ಜೀವಂತವಾಗಿರುತ್ತದೆ. ಇದರಿಂದ ಉತ್ಪಾದನೆ ಆಗುವ ವಿದ್ಯುತ್ತನ್ನು ಕೆಪಾಸಿಟರ್ ಗಳ ಮೂಲಕ ಸಂಗ್ರಹಿಸಿಟ್ಟುಕೊಂಡು ಬಳಕೆ ಮಾಡಬಹುದು. ಪ್ರಸ್ತುತ ಗೃಹ ಬಳಕೆಗೆ ಬೇಕಾದ ವಿದ್ಯುತ್ತನ್ನು ಈ ಬ್ಯಾಟರಿ ಉತ್ಪಾದಿಸುತ್ತಿದೆ. ಈ ಯೋಜನೆಯು ಮುಂದಿನ ದಿನಗಳಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಲಿದೆ.

ವಿದ್ಯುತ್ ಹೇಗೆ ಉತ್ಪಾದನೆಯಾಗುತ್ತದೆ: ನ್ಯಾನೋ ಡೈಮಂಡ್ ಬ್ಯಾಟರಿಯಲ್ಲಿ ಕಾರ್ಬನ್ 14 ಮತ್ತು ವಜ್ರವನ್ನು ಬಳಸಲಾಗುತ್ತದೆ. ಕಾರ್ಬನ್ 14 ಒಂದು ರೇಡಿಯೋ ವಿಕಿರಣಗಳನ್ನು ಹೊರ ಸೂಸುವ ವಸ್ತುವಾಗಿದೆ. ಡೈಮಂಡ್ ಆ ವಿಕಿರಣವನ್ನು ಸೆಳೆದುಕೊಂಡು ವಿದ್ಯುತ್ ಆಗಿ ಪರಿವರ್ತಿಸುವ ಮೂಲಕ ವಿದ್ಯುತ್ ಉತ್ಪಾದನೆಗೊಳ್ಳುತ್ತದೆ. ಈ ಎರಡು ವಸ್ತುಗಳು ಪರಿಸರಕ್ಕೆ ಹಾನಿಯನ್ನು ಉಂಟು ಮಾಡುವುದಿಲ್ಲ. ಜೊತೆಗೆ ಈ ಎರಡು ವಸ್ತುಗಳ ಲಭ್ಯತೆ ಸುಲಭ. ಇವು ನೈಸರ್ಗಿಕವಾಗಿ ದೊರೆಯುತ್ತವೆ.

ಕಾರ್ಬನ್ 14 ಮತ್ತು ಡೈಮಂಡ್ : ಕಾರ್ಬನ್ 14 ಎಂಬುದು ರೇಡಿಯೋ ಆಕ್ಟಿವ್ ಐಸೋಟೋಪ್ ಆಗಿದೆ. ಕಾರ್ಬನ್ ಕುಟುಂಬದಲ್ಲಿ ಹೆಚ್ಚು ವಿಕಿರಣವನ್ನು ಹೊರ ಸೂಸುವ ವಸ್ತುವಾಗಿದೆ. ಅಣು ಇಂಧನದಲ್ಲಿ ಶಕ್ತಿ ನಿರಂತರವಾಗಿ ಬಿಡುಗಡೆಯಾಗುವ ರೀತಿ ಕಾರ್ಬನ್ 14 ಕೆಲಸ ಮಾಡುತ್ತದೆ. ಈ ಕಾರ್ಬನ್ 14 ಅರ್ಧದಷ್ಟು ಕರಗಲು 500 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಇನ್ನು ಡೈಮಂಡ್ ನೈಸರ್ಗಿಕವಾಗಿ ದೊರೆಯುವ ಸ್ಪಟಿಕ ರೂಪದ ವಸ್ತುವಾಗಿದೆ.

ಕಾರ್ಬನ್ 14 ಲಭ್ಯತೆ ಹೇಗೆ: ಕಾರ್ಬನ್ 14 ಸ್ಥಾವರಗಳಿಂದ ಸಿಗುವ ಅಣು ತ್ಯಾಜ್ಯಗಳಿಂದ ಪಡೆದುಕೊಳ್ಳಬಹುದು. ಅಲ್ಲದೆ ಗ್ರಾಫೈಟ್ ನಿಂದಲೂ ಸಹ ಕಾರ್ಬನ್ 14 ಪಡೆಯಬಹುದು. ಕಾರ್ಬನ್ 14 ಪರಿಸರ ಸ್ನೇಹಿಯಾಗಿದ್ದು, ಇದರಿಂದ ಹೊರ ಸೂಸುವ ವಿಕಿರಣ ಜೀವ ವೈವಿಧ್ಯತೆಗೆ ಮಾರಕವಾಗಲಾರದು ಎಂದು ಸಂಶೋಧಕ ಹೇಳುತ್ತಾರೆ.

ಪರಿಸರ ಸ್ನೇಹಿ ಬ್ಯಾಟರಿ

  1. ಪರಿಸರಕ್ಕೆ ಹಾನಿಯುಂಟು ಮಾಡುವ ಹೊಗೆ ಹಾಗೂ ಇತರ ಮಾರಕ ಅನಿಲಗಳು ಬಿಡುಗಡೆ ಯಾಗುವುದಿಲ್ಲ.
    2.ಓಮ್ಮೆ ಚಾರ್ಜ್ ಮಾಡಿದರೆ 28,000 ವರ್ಷಗಳ ವರೆಗೆ ನಿರಂತರ ವಿದ್ಯುತ್ ಉತ್ಪಾದನೆ.
  2. ಬಳಕೆ ಮತ್ತು ನಿರ್ವಹಣೆ ಸುಲಭ.
  3. ದುರಸ್ತಿಯ ಸಮಸ್ಯೆ ಇರುವುದಿಲ್ಲ.

ಎಲ್ಲೆಲ್ಲಿ ಬಳಸಬಹುದು

  1. ಮೊಬೈಲ್ ಫೋನ್ ಹಾಗೂ ದಿನನಿತ್ಯದ ಬಳಕೆಯ ವಸ್ತುಗಳಲ್ಲಿ.
  2. ಯುದ್ಧ ವಿಮಾನಗಳು ಮತ್ತು ಇತರ ಸಾಮಗ್ರಿಗಳಲ್ಲಿ ಬಳಕೆ.
  3. ಎಲೆಕ್ಟ್ರಿಕಲ್ ವಾಹನಗಳು ಸೆನ್ಸಾರ್ ಗಳು ಹಾಗೂ ಇತರೆ ಡಿವೈಸ್ ಗಳಲ್ಲಿ ಬಳಸಬಹುದು.
  4. ವೈದ್ಯಕೀಯ ಕ್ಷೇತ್ರದಲ್ಲಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಬಳಸಬಹುದಾಗಿದೆ.
  5. ವಿದ್ಯುತ್ ಬೇಡುವ ಎಲ್ಲ ಕಡೆ ಇದನ್ನು ಬಳಸಬಹುದು.
  • ಸಂತೋಷ್ ಎಚ್. ಡಿ.

Share It

You cannot copy content of this page