ರಾಜಕೀಯ ಸುದ್ದಿ

ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲಿಗೆ ಸೆ.16 ರಂದು ಪ್ರಧಾನಿ ಮೋದಿ ಚಾಲನೆ

Share It

ಬೆಂಗಳೂರು: ಪ್ರಧಾನಿ‌ ನರೇಂದ್ರ ಮೋದಿ ಸೆ.16ರಂದು ಹುಬ್ಬಳ್ಳಿ ಪುಣೆ ನಡುವೆ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಅಂದು ಪ್ರಧಾನಿ ಅಹ್ಮದಾಬಾದ್ ನಿಂದ ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ. ಹುಬ್ಬಳ್ಳಿಯಿಂದ ಸೆ.18ರಿಂದ ರೈಲು ಸಂಚಾರ ಆರಂಭವಾಗಲಿದೆ.

ಬುಧವಾರ, ಶುಕ್ರವಾರ, ಭಾನುವಾರ ಹುಬ್ಬಳ್ಳಿಯಿಂದ ಹಾಗೂ ಗುರುವಾರ, ಶನಿವಾರ, ಸೋಮವಾರ ಪುಣೆಯಿಂದ ಸಂಚರಿಸಲಿದೆ.

ವಂದೇ ಭಾರತ್ ರೈಲು ಹುಬ್ಬಳ್ಳಿ ಪುಣೆ ನಡುವೆ ನೇರವಾಗಿ ಸಂಚರಿಸಲಿದ್ದು, ಕೊಲ್ಲಾಪುರ ಮೂಲಕ ಸಂಚಾರ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿ- ಪುಣೆ ವಂದೇ ಭಾರತ್ ರೈಲು ಸಂಚಾರದಿಂದ ಉತ್ತರ ಕರ್ನಾಟಕ ಭಾಗದ ಜನತೆಗೆ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.


Share It

You cannot copy content of this page