ಉಪಯುಕ್ತ ಸುದ್ದಿ

ಬಾಯಿಯಲ್ಲಿ ಹುಣ್ಣಾಗಿದ್ಯ? ಹಾಗಿದ್ರೆ ವೀಳ್ಯದೆಲೆ ಜೊತೆ ಇವುಗಳನ್ನು ಜಗಿಯಿರಿ!

Share It

ತಾತ ಅಜ್ಜಿಯರು ಸದಾ ಎಲೆ ಅಡಿಕೆಯನ್ನು ಬಾಯಿಯಲ್ಲಿ ಅಗಿಯುವುದುಂಟು. ತಾಂಬೂಲ ತಿನ್ನುವುದು ಭಾರತೀಯ ಪರಂಪರೆಯ ಒಂದು ಭಾಗವಾಗಿದೆ. ತಾಂಬೂಲವನ್ನು ತಿನ್ನುವುದರಿಂದ ವಿವಿಧ ರೀತಿಯ ಲಾಭಗಳನ್ನು ಪಡೆಯಬಹುದಾಗಿದೆ. ಅದರಲ್ಲಿಯೂ ಬಾಯಿಯಲ್ಲಿ ಹುಣ್ಣು ಆಗಿದ್ರೆ ಪಾನ್ ತಿಂದರೆ ಪರಿಹಾರವಾಗುತ್ತದೆ ಎಂದು BHU ನ ಖ್ಯಾತ ಆಯುರ್ವೇದ ವೈದ್ಯ ಸುಶೀಲ್ ಅವರು ಹೇಳಿದ್ದಾರೆ.

ಎಲೆ ಅಡಿಕೆಯ ಸೇವನೆಯು ಆರೋಗ್ಯಕರ ಅಭ್ಯಾಸವಾಗಿದೆ. ಭಾರತೀಯರು ಊಟ ಸೇವನೆ ಮಾಡಿದ ಬಳಿಕ ಎಲ್ಲರ ಜೊತೆ ಕುಳಿತು ಹರಟೆ ಮಾತುಗಳನ್ನು ಆಡುತ್ತ ತಾಂಬೂಲವನ್ನು ಸೇವನೆ ಮಾಡುತ್ತಾರೆ. ಇದರಿಂದ ಜೀರ್ಣ ಕ್ರಿಯೆಗೆ ಸಹಾಯಕ ಎಂಬುದು ಜನಪದರ ಉಲ್ಲೇಖ.

ಜನಪದ ವೈದ್ಯರ ಪ್ರಕಾರ ವೀಳ್ಯದೆಲೆ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಅಂಶವನ್ನು ಹೊಂದಿರುತ್ತದೆ. ಇದು ಖಾರಖಾರವಾದ ಅನುಭವವನ್ನು ನೀಡುವುದರಿಂದ ಉರಿಯೂತದ ಅಂಶವನ್ನು ಹೊಂದಿದೆ. ಇದು ಬಾಯಿಯಲ್ಲಿ ಆಗುವ ಹುಣ್ಣುಗಳಿಗೆ ರಾಮಬಾಣ ಎಂದು ಹೇಳುತ್ತಾರೆ.

ಜೊತೆಗೆ ನಮ್ಮ ಆಹಾರವು ಸುಲಭವಾಗಿ ಜೀರ್ಣವಾಗಲು ಲಾಲಾರಸದ ಪಾತ್ರ ಬಹಳ ಮುಖ್ಯ. ಅಡಿಕೆ ಎಲೆಯನ್ನು ಜಗಿಯುವಾಗ ಹೆಚ್ಚಿನ ಪ್ರಮಾಣದ ಲಾಲರಸ ಉತ್ಪಾದನೆಯಾಗುತ್ತದೆ. ಇದರಿಂದ ನಮ್ಮ ಆರೋಗ್ಯಕ್ಕೂ ಒಳ್ಳೆಯದು.

ಇದರ ಜೊತೆಗೆ ಸುಣ್ಣವನ್ನು ಬಳಸುವುದರಿಂದ ಒಂದಷ್ಟು ಉಪಯೋಗಗಳು ಇವೆ. ಆದ್ರೆ ಅತಿಯಾಗಿ ಸುಣ್ಣವನ್ನು ಬಳಸುವುದರಿಂದ ಬಾಯಿಯ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಸುಣ್ಣದಲ್ಲಿ ಕ್ಯಾಲ್ಸಿಯಂ ಗುಣವಿರುತ್ತದೆ. ಇದು ಅತಿಯಾದರೆ ಬಾಯಿಯ ಒಳ ಭಾಗದ ಚರ್ಮವನ್ನು ಸುಡುತ್ತದೆ.

ನೀವು ಎಲೆ ಜೊತೆಯಲ್ಲಿ ಸುಣ್ಣ ಹಾಗೂ ಹೊಗೆಸೊಪ್ಪು ಬಳಸದೆ ಕೇವಲ ಅಡಿಕೆ ಏಲಕ್ಕಿ ಲವಂಗವನ್ನು ಬಳಸುವುದು ಹೆಚ್ಚು ಸೂಕ್ತ. ಇದು ಆರೋಗ್ಯವನ್ನು ಸುಧಾರಿಸುವುದರ ಜೊತೆ ಜೊತೆಗೆ ಬಾಯಿಯಲ್ಲಿ ಆಗಿರುವ ಹುಣ್ಣನ್ನು ಪರಿಹಾರ ಮಾಡುತ್ತದೆ.


Share It

You cannot copy content of this page