ರಾಜಕೀಯ ಸುದ್ದಿ

ಸಿಎಂ ಸಿದ್ದರಾಮಯ್ಯಗೆ ಮರ್ಯಾದೆ ಇದ್ದಿದ್ದರೆ ರಾಜೀನಾಮೆ ಕೊಡಬೇಕಿತ್ತು:ಆರಗ ಜ್ಞಾನೇಂದ್ರ

Share It

ಹಾವೇರಿ(ಶಿಗ್ಗಾವಿ): ಇಡೀ ಭಾರತವನ್ನು ಕಾಂಗ್ರೆಸ್ ನಾಯಕರು ವಕ್ಪ್ ಮಾಡಲು ಹೊರಟಿದ್ದಾರೆ‌. ಮುಡಾ ಹಗರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯಗೆ ಮರ್ಯಾದೆ ಇದ್ದೀದ್ದೇ ಆಗಿದ್ದರೆ ರಾಜೀನಾಮೆ ಕೊಟ್ಟು ಹೋಗಬೇಕಿತ್ತು. ಆದರೆ ಇವರೊಬ್ಬ ಭಂಡ ಸಿಎಂ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಶಿಗ್ಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು. ಬಸವರಾಜ ಬೊಮ್ಮಾಯಿಯವರು ಅಲ್ಪ ಅವಧಿಯ ಸಿಎಂ ಆಗಿದ್ದರೂ ಒಳ್ಳೆಯ ಆಡಳಿತ ಕೊಟ್ಟಿದ್ದಾರೆ. ಅವರ ಸಂಪುಟದಲ್ಲಿ ನಾನು ಗೃಹ ಸಚಿವನಾಗಿ ಅತ್ಯಂತ ಹತ್ತಿರದಿಂದ ನೋಡಿದ್ದೇನೆ‌. ಎಲ್ಲ ಕ್ಷೇತ್ರಗಳಿಗೂ ಅನುದಾನವನ್ಬು ಕೈ ಬಿಚ್ಚಿ ಕೊಟ್ಟಿದ್ದಾರೆ.

ಸಿದ್ದರಾಮಯ್ಯ ಅವರ ಸರ್ಕಾರ ಬಂದು ಒಂದೂವರೆ ವರ್ಷ ಆಯಿತು ಒಂದು ಪೈಸೆ ಕೊಟ್ಟಿಲ್ಲ‌‌. ನಮಗೆ ಕ್ಷೇತ್ರದ ಅಭಿವೃದ್ದಿಗೆ ಹಣ ಕೇಳಿದರೆ, ಗ್ಯಾರೆಂಟಿ ಹಣ ಕೊಟ್ಟಿದ್ದೇವೆ ಎಂದು ಉಡಾಫೆಯಾಗಿ ಹೇಳುವ ಬೇಜವಾಬ್ದಾರಿ ಸರ್ಕಾರ ಹಿಂದೆಂದೂ ಕಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇಡೀ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ‌ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಸಿಲುಕಿಕೊಂಡಿದ್ದಾರೆ‌. ವಾಲ್ಮಿಕಿ ನಿಗಮದ ಹಣ ನುಂಗಿ ನೀರು ಕುಡಿದಿದ್ದಾರೆ. ಈಗ ಅಬಕಾರಿ ಹಗರಣ, ವಕ್ಪ್ ಹಗರಣ ಮಾಡುತ್ತಿದ್ದಾರೆ. ಸಂವಿಧಾನಕ್ಕೆ ಅತೀತವಾದ ಅಧಿಕಾರ ವಕ್ಪ್ ಗೆ ನೀಡಲು ಮುಂದಾಗಿದ್ದಾರೆ. ಇಡೀ ಭಾರತವನ್ನು ವಕ್ಪ್ ಮಾಡಲು ಹೊರಟಿದ್ದಾರೆ‌.

ಮರ್ಯಾದೆ ಇರುವ ಸಿಎಂ ಆಗಿದ್ದರೆ ರಾಜೀನಾಮೆ ಕೊಟ್ಟು ಹೋಗಬೇಕಿತ್ತು. ಇವರು ಭಂಡು ಬಿದ್ದಿದ್ದಾರೆ. ಇವರಿಗೆ ಜನರೇ ಪಾಠ ಕಲಿಸಿ, ಭರತ್ ಬೊಮ್ಮಾಯಿ ಅವರಿಗೆ ಮತ ನೀಡುವ ಮೂಲಕ ಸಿದ್ದರಾಮಯ್ಯ ಡಿಕೆಶಿವಕುಮಾರ್ ಗೆ ಸಂದೇಶ ಕಳುಹಿಸಬೇಕು. ಭರತ್ ನಮ್ಮ ತೀರ್ಥಹಳ್ಳಿಯ ಅಳಿಯ ಅವರನ್ನು ಗೆಲ್ಲಿಸಿ, ಅವರ ಅಜ್ಜ, ತಂದೆಯಂತೆ ಶಾಸನ ಸಭೆಯಲ್ಲಿ ಕೆಲಸ ಮಾಡಲು ಅವಕಾಶ ಕೊಡಬೇಕು ಎಂದು ಅರಗ ಜ್ಞಾನೇಂದ್ರ ಮನವಿ ಮಾಡಿದರು.


Share It

You cannot copy content of this page