ಬೊಮ್ಮಾಯಿ ಕುಟುಂಬ ಜನರ ಸೆವೆಗೆ ಮೀಸಲು: ಶಂಕರ ಪಾಟೀಲ್ ಮುನೇನಕೊಪ್ಪ
ಹಾವೇರಿ, (ಶಿಗ್ಗಾವಿ): ಬೊಮ್ಮಾಯಿ ಕುಟುಂಬ ಜನರ ಸೆವೆಗೆ ಮೀಸಲು ಎಂದು ಭರತ್ ಬೊಮ್ಮಾಯಿ ಉಪ ಚುನಾವಣೆಗೆ ಸ್ಪರ್ಧಿಸಿದ್ದಾರೆ ಎಂದು ಬಿಜೆಪಿ ಮುಖಂಡ ಶಂಕರ ಪಾಟೀಲ್ ಮುನೇನಕೊಪ್ಪ ಹೇಳಿದ್ದಾರೆ.
ಶಿಗ್ಗಾವಿ ಕ್ಷೇತ್ರದ ಉಪಚುನಾವಣೆಗೆ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಕ್ಷೇತ್ರದಲ್ಲಿ ಪ್ರಚಾರ ಮಾಡಿ ಮಾತನಾಡಿದರು. ಕಾಂಗ್ರೆಸ್ ಪಕ್ಷದ ಈ ಸರ್ಕಾರ ಗ್ಯಾರೆಂಟಿ ಬಿಟ್ಟರೆ ಬೇರೆ ಏನನ್ನೂ ರಾಜ್ಯದ ಜನತೆಗೆ ಕೊಡುವುದಿಲ್ಲ ಎನ್ನುವಂತಾಗಿದೆ. ಮಳೆ ಹಾನಿ, ಮನೆ ಹಾನಿಯಾಗಿ ಜನರು ಸಂಕಷ್ಟಪಡುತ್ತಿದ್ದರೆ ಈ ಸರ್ಕಾರಕ್ಕೆ ಯಾವುದೇ ಜನಪರ ಕಾಳಜಿ ಇಲ್ಲ ಎಂಬುದು ಸಾಬೀತಾಗಿದೆ.
ಆದರೆ ಬಿಜೆಪಿ ಸರ್ಕಾರದಲ್ಲಿ ಹಿಂದೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ಕಾಲದಲ್ಲಿ 5 ಲಕ್ಷದ ಮನೆ ಮಂಜೂರು ಮಾಡಿದ್ದಾರೆ . ಜಗದೀಶ್ ಶೆಟ್ಟರ್ ರೈತರ ಸಾಲ ಮನ್ನಾ ಮಾಡಿದ್ದಾರೆ. ಬೊಮ್ಮಾಯಿಯವರು ನಾಲ್ಕು ಬಾರಿ ಶಾಸಕರಾಗಿ ಈ ಕ್ಷೇತ್ರದಲ್ಲಿ ಉದ್ಯೋಗ ನೀಡಲು ಸಾಯಿ ಗಾರ್ಮೆಂಟ್, ಜವಳಿ ಪಾರ್ಕ್ ನೀಡಿದ್ದಾರೆ ಎಂದರು.
ಭರತ್ ಬೊಮ್ಮಾಯಿ ಅಜ್ಜ ಮಾಜಿ ಸಿಎಂ ದೇಶದ ನಾಯಕರು. ಅವರ ತಂದೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಭರತ್ ಬೊಮ್ಮಾಯಿ ಅರಾಮಾಗಿ ಬೇರೆ ಉದ್ಯೋಗ ಮಾಡಿಕೊಂಡು ಹೋಗಬಹುದಿತ್ತು. ಆದರೆ, ಬೊಮ್ಮಾಯಿ ಕುಟುಂಬ ಜನರ ಸೇವೆಗೆ ಮೀಸಲು ಎಂದು ಅವರೂ ಚುನಾವಣೆಗೆ ನಿಂತಿದ್ದಾರೆ. ಅವರನ್ನು ಗೆಲ್ಲಿಸಿ ಕಳುಹಿಸಿ ಕೊಡುವಂತೆ ಶಂಕರ್ ಪಾಟೀಲ್ ಮುನೇನಕೊಪ್ಪ ಮನವಿ ಮಾಡಿದರು.