ರಾಜಕೀಯ ಸುದ್ದಿ

ವರಿಷ್ಠರ ಒತ್ತಡಕ್ಕೆ ಮಣಿದ ರಾಮಲಿಂಗಾ ರೆಡ್ಡಿ: ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ರಾಮಲಿಂಗ ರೆಡ್ಡಿ

Share It

ಬೆಂಗಳೂರು: ವರಿಷ್ಠರು ಮತ್ತು ಸಿಎಂ ಒತ್ತಡಕ್ಕೆ ಮಣಿದಿರುವ ಸಚಿವ ರಾಮಲಿಂಗಾ ರೆಡ್ಡಿ ಅವರು ತಮ್ಮ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ವಾಪಸ್ ಪಡೆಯಲು ತೀರ್ಮಾನಿಸಿದ್ದಾರೆ.

ರಾಜೀನಾಮೆ ನಂತರ ಅಜ್ಞಾತ ಸ್ಥಳಕ್ಕೆ ತೆರಳಿದ್ದ ರಾಮಲಿಂಗ ರೆಡ್ಡಿ ಅವರನ್ನು ಸಿಎಂ ಡಿಕೆ ಶಿವಕುಮಾರ್ ಭೇಟಿಯಾಗಿ ಮನವೋಲಿಸುವ ಪ್ರಯತ್ನ ನಡೆಸಿದ್ದರು. ಈ ವೇಳೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ರಾಮಲಿಂಗ ರೆಡ್ಡಿ ಅವರನ್ನು ಇಂದು ಸುರ್ಜೇವಾಲಾ ಭೇಟಿಯಾಗಿ ರಾಜೀನಾಮೆ ವಾಪಸ್ ಪಡೆಯುವ ಕುರಿತು ಮಾತನಾಡಿದ್ದರು.


Share It

You cannot copy content of this page