ರಾಜಕೀಯ ಸುದ್ದಿ

ಕರ್ನಾಟಕದ ಕುರ್ಚಿ ಕದನ: ದೆಹಲಿಯಲ್ಲಿ ಹೈವೋಲ್ಟೇಜ್ ಸಭೆ

Share It

ಬೆಂಗಳೂರು: ಕರ್ನಾಟಕದ ಸಿಎಂ ಸ್ಥಾನ ಬದಲಾವಣೆ ಬೆಳವಣಿಗೆ ಇದೀಗ ದೆಹಲಿಯ ಹೈಕಮಾಂಡ್ ಅಂಗಳವನ್ನು ತಲುಪಿದೆ. ಕಾಂಗ್ರೆಸ್ ಹೈಕಮಾಂಡ್ 11 ಗಂಟೆಗೆ ಸಭೆ ನಡೆಸಲಿದೆ.

ಸಭೆಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡುವ ಕುರಿತು ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ ಡಾ ಜಿ ಪರಮೇಶ್ವರ ಅವರ ಹಿರಿತನ ಪರಿಗಣಿಸಿ ಅವರಿಗೆ ಸಿಎಂ ಸ್ಥಾನ ಕೊಡಬೇಕು ಎಂದು ಮತ್ತೊಂದು ಬಾಣ ಬಲವಾಗಿ ಪ್ರತಿಪಾದನೆ ಮಾಡುತ್ತಿದೆ ಎನ್ನಲಾಗಿದೆ.

ಡಿಸಿಎಂ ಸೈಲೆಂಟ್ ಆಗಿ ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ. ಸಿಎಂ ತಾವು ಕುರ್ಚಿ ಬಿಡಲು ಸಿದ್ಧ, ಆದರೆ ಆ ಸ್ಥಾನಕ್ಕೆ ಯಾರು ಬರಬೇಕು ಎಂಬುದನ್ನ ಶಾಸಕರು ತೀರ್ಮಾನಿಸಲಿ ಎಂದು ದಾಳ ಉರುಳಿಸಿದ್ದಾರೆ ಎನ್ನಲಾಗಿದೆ. ಆದರೆ, ಸಿದ್ದರಾಮಯ್ಯ ಬಣದ ಬಹುತೇಕ ಶಾಸಕರಿಗೆ ಡಿಕೆ ಶಿವಕುಮಾರ್ ಸಿಎಂ ಆಗುವುದು ಇಷ್ಟವಿಲ್ಲ.

ಹೀಗಾಗಿ ಹೊಸ ದಳ ಉರುಳಿಸಿರುವ ಸಿಎಂ ಆಪ್ತರು, ಡಾ ಜಿ ಪರಮೇಶ್ವರ್ ಅವೃನ್ನು ಸಿಎಂ ಮಾಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇದೀಗ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಿದೆ


Share It

You cannot copy content of this page