ಉಪಯುಕ್ತ ಸುದ್ದಿ

ಪಿಓಪಿ ಗಣೇಶ ವಿಗ್ರಹಗಳ ತಯಾರಿಕೆ ಘಟಕಗಳ ಮೇಲೆ ದಾಳಿ: ಸಚಿವ ರಾಮಲಿಂಗಾ ರೆಡ್ಡಿ ಆದೇಶದಂತೆ ಕಾರ್ಯಾಚರಣೆ

Share It

ಬೆಂಗಳೂರು: ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ರಾಮಲಿಂಗಾ ರೆಡ್ಡಿ, ಅವರು ರಾಜ್ಯಾದ್ಯಂತ ವಿಶೇಷ ಕಾರ್ಯಾಚರಣೆ ತಂಡಗಳನ್ನು ರಚಿಸಿದ್ದು ಈ ವಿಶೇಷ ತಂಡಗಳು ಪಿಒಪಿ ವಿಗ್ರಹ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿದವು.

ಪ್ರತಿ ಜಿಲ್ಲೆಯಲ್ಲೂ ನಾಲ್ಕರಿಂದ ಐದು ವಿಶೇಷ ತಂಡಗಳನ್ನು ರಚಿಸಿದ್ದು, ಕಳೆದ ಎರಡು ದಿನದಲ್ಲಿ ತಂಡಗಳು ರಾಜ್ಯದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಪರಿಸರಕ್ಕೆ ಹಾನಿಯಾಗುವ ಪಿಓಪಿ ಗಣೇಶ ವಿಗ್ರಹಗಳ ತಯಾರಿಕೆ/ಮಾರಾಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿದವು. 

ವಿಶೇಷ ಕಾರ್ಯಾಚರಣೆ ಪಡೆ ಜೊತೆಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ವಿವಿಧ ಇಲಾಖೆಯ ಅಧಿಕಾರಿಗಳು ನೆರವಾಗಿದ್ದು, ಬೆಂಗಳೂರು ನಗರ, ರಾಮನಗರ, ಮೈಸೂರು, ಚಾಮರಾಜನಗರ, ಹಾಸನ, ಕೊಡಗು, ಮಂಗಳೂರು, ಚಿಕ್ಕಮಂಗಳೂರು, ಕಾರವಾರ, ಉಡುಪಿ, ಬೆಳಗಾವಿ, ವಿಜಯಪುರ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ತುಮಕೂರು, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲ್ಬುರ್ಗಿ, ಬೀದರ್, ಯಾದಗಿರಿ, ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರ,  ಜಿಲ್ಲೆಗಳಲ್ಲಿ ವಿಶೇಷ ಕಾರ್ಯಚರಣೆ ತಂಡ ಪರಿಶೀಲನೆ ನಡೆಸಿತು. 

 ಮಾರ್ಗದರ್ಶನ ಪಾಲಿಸದೆ ತಯಾರಿಸಲಾಗುತ್ತಿದ್ದ 357 ಮಳಿಗೆ/ಗೋದಾಮುಗಳ ಪರಿವೀಕ್ಷಣೆ ನಡೆಸಿ, 2564 ಪಿಓಪಿ ಗಣೇಶ ಮೂರ್ತಿಗಳನ್ನು ಮುಟ್ಟುಗೋಲು ಹಾಕಲಾಗಿದೆ. ನಾಳೆ ಮಧ್ಯಾಹ್ನದ ನಂತರ ಕುದ್ದು ಸಚಿವರೆ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ, ಕರ್ನಾಟಕ ಸರ್ಕಾರವು ಪಿಓಪಿ ಗಣೇಶ ಮೂರ್ತಿಗಳನ್ನು ತಯಾರಿಸುವುದು, ಸಾಗಿಸುವುದು, ಮಾರಾಟ ನಿಷೇಧಿಸಿದೆ. ಮಣ್ಣಿನ ಗಣೇಶ ಮೂರ್ತಿಗಳನ್ನೇ ಬಳಸಿ, ಪರಿಸರ ಹಾಗೂ ಜಲಚರಗಳನ್ನು ಸಂರಕ್ಷಿಸಲು ಕೈ ಜೋಡಿಸಿ. ಜೈವಿಕವಾಗಿ ಕರಗುವ ಮಣ್ಣಿನ ಮೂರ್ತಿಗಳು ಜಲಮಾಲಿನ್ಯ ಮತ್ತು ತ್ಯಾಜ್ಯವನ್ನು ಕಡಿಮೆ ಮಾಡುತ್ತವೆ. ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ಮೂರ್ತಿಗಳನ್ನು ಬಳಸದೆ, ಪರಿಸರ ಸ್ನೇಹಿ ಗಣೇಶನನ್ನು ಉಪಯೋಗಿಸಿ ಎಂದು ಸಚಿವ ರಾಮಲಿಂಗಾ ರೆಡ್ಡಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. 


Share It

You cannot copy content of this page