ಚನ್ನರಾಯಪಟ್ಟಣ: ಗಾನ ಕೋಗಿಲೆ ಎಸ್ ಜಾನಕಿ ಅವರ ಸ್ಮರಣಾರ್ಥವಾಗಿ ಚನ್ನರಾಯಪಟ್ಟಣದ ಡಾ ಬಿ ಅರ್ ಅಂಬೆಂಡ್ಕರ್ ಭವನದಲ್ಲಿ ಸ್ವರಾಂಜಲಿ ಮೆಲೊಡಿಯೋಸ್ ವತಿಯಿಂದ ಗಾನ ಮಂಜರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮವನ್ನು ಶ್ರಾವಣ ಬೆಳಗೊಳ ಶಾಸಕ ಸಿ ಎನ್ ಬಾಲಕೃಷ್ಣ ಉದ್ಘಾಟನೆ ಮಾಡಿ ಮಾತನಾಡಿ, ಎಸ್ ಜಾನಕಿ ಅವರು ಕನ್ನಡ ನಾಡಿನ ಆಸ್ತಿ. ಸಂಗೀತ ಲ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆ ಅನನ್ಯವಾದುದು.ನಮ್ಮ ಕ್ಷೇತ್ರದಲ್ಲಿ ಅವರನ್ನು ಸ್ಮರಿಸುವ ಕಾರ್ಯಕ್ರಮ ಮಾಡುತ್ತಿರುವುದಕ್ಕೆ ನಮಗ ಹೆಮ್ಮೆಯಿದೆ ಎಂದರು.
ಹಿರಿಬಿಳ್ತಿ ಮಂಜು ಮತ್ತು ತಂಡ ಜಾನಕಿ ಅವರನ್ನು ಸ್ಮರಿಸುವ ಒಂದು ಸ್ಮರಣೀಯ ಕಾರ್ಯಕ್ರಮ ರೂಪಿಸಿದೆ. ನಾಡು ನುಡಿಗೆ ಸೇವೆ ಸಲ್ಲಿಸಿದ ಇಂತಹ ಮಹನೀಯರನ್ನು ಸ್ಮರಿಸುವ ಮೂಲಕ ಅವರನ್ನು ಜೀವಂತವಾಗಿಡುವ ಪ್ರಯತ್ನ ನಡೆದಿದೆ ಎನ್ನಬಹುದು. ಜಾನಕಿ ಅವರು ತಾವು ಹಾಡಿರುವ ಹಾಡುಗಳ ಮೂಲಕ ನಮ್ಮೊಂದಿಗೆ ಇದ್ದಾರೆ ಎಂಬ ಭಾವನೆ ಇದೆ. ಇದನ್ನು ಸೃಷ್ಟಿಸಿದ ಗಾಯಕರಿಗೆ ಧನ್ಯವಾದಗಳು ಎಂದು ತಿಳಿಸಿದರು.
ಸ್ವರಾಂಜಲಿ ಸಂಸ್ಥಾಪಕ ಹಿರಿಬಿಳ್ತಿ ಮಂಜುನಾಥ್, ಬನುಮಾ ಗುರುದತ್ತ, ರೇವಣ್ಣ ಸ್ವಾಮಿ, ವೇದಶ್ರೀ, ಕುಮಾರ್, ಪ್ರಮೋದ್ ಮೊದಲಾದ ಕಲಾವಿದರು ಎಸ್ ಜಾನಕಿ ಅವರು ಗಾಯನದ ಹಾಡುಗಳನ್ನು ಹಾಡುವ ಮೂಲಕ ರಂಜಿಸಿದರು. ಕಾರ್ಯಕ್ರಮದಲ್ಲಿ, ಮೈಸೂರಿನ ವಾದ್ಯ ತಂಡ ಭಾಗವಹಿಸಿತ್ತು. ಅನೇಕ ಗಣ್ಯರು ಮತ್ತು ಅಭಿಮಾನಿಗಳು ಭಾಗವಹಿಸಿದ್ದರು.

