ಬೆಂಗಳೂರು: ಬೆಂಗಳೂರು ನಗರದ ಉಷ್ಣಾಂಶ ಈ ವರ್ಷ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ನಿನ್ನೆ ಭಾನುವಾರ ಏಪ್ರಿಲ್ 28 ರಂದು ಬೆಂಗಳೂರಿನಲ್ಲಿ ಬರೋಬ್ಬರಿ 38.5° ಸೆಲ್ಸಿಯಸ್ ದಾಖಲಾಗಿದೆ. ಇದು ಕಳೆದ 50 ವರ್ಷಗಳಲ್ಲೇ ಬೆಂಗಳೂರಿನಲ್ಲಿ 2ನೇ ಗರಿಷ್ಠ ಉಷ್ಣಾಂಶ ದಾಖಲಾಗಿದೆ.
ಭಾರತದ ಸಿಲಿಕಾನ್ ವ್ಯಾಲಿ, ಐಟಿ ಕ್ಯಾಪಿಟಲ್, ಗಾರ್ಡನ್ ಸಿಟಿ ಎಂದೆಲ್ಲಾ ಖ್ಯಾತಿ ಪಡೆದಿರುವ ಬೆಂಗಳೂರು ಮಹಾನಗರ ಜನಸಂಖ್ಯೆ ಆಧಾರದಲ್ಲಿ ಭಾರತದ 3ನೇ ಅತಿ ದೊಡ್ಡ ನಗರ ಎಂದು ಪರಿಗಣಿಸಲಾಗಿದೆ. ವಿಸ್ತೀರ್ಣದಲ್ಲಿ ಭಾರತದ 2ನೇ ಅತಿ ದೊಡ್ಡ ನಗರ ಎಂಬ ಕೀರ್ತಿಗೆ ಪಾತ್ರವಾಗಿದೆ ನಮ್ಮ ಬೆಂಗಳೂರು ಮಹಾನಗರ. ಜೊತೆಗೆ ಏಷ್ಯಾ ಫೆಸಿಫಿಕ್ ಖಂಡದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಂ.1 ನಗರ ಎಂಬ ಕೀರ್ತಿ ಗಳಿಸಿರುವ ಬೆಂಗಳೂರು ಮಹಾನಗರದಲ್ಲಿ ಈ ವರ್ಷ ಎಲ್-ನಿನೋ ಮತ್ತು ಜಾಗತಿಕ ತಾಪಮಾನ ಹೆಚ್ಚಳದಿಂದ ಅತಿ ಹೆಚ್ಚಿನ ಉಷ್ಣಾಂಶ ಈ ಬೇಸಿಗೆ ಕಾಲದಲ್ಲಿ ದಾಖಲಾಗುತ್ತಿದೆ.
ಬೆಂಗಳೂರು ನಗರದ ಉಷ್ಣಾಂಶ ಈ ವರ್ಷ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ನಿನ್ನೆ ಭಾನುವಾರ ಏಪ್ರಿಲ್ 28 ರಂದು ಬೆಂಗಳೂರಿನಲ್ಲಿ ಬರೋಬ್ಬರಿ 38.5° ಸೆಲ್ಸಿಯಸ್ ದಾಖಲಾಗಿದೆ. ಇದು ಕಳೆದ 50 ವರ್ಷಗಳಲ್ಲೇ ಬೆಂಗಳೂರಿನಲ್ಲಿ 2ನೇ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಹಿಂದೆ ಏಪ್ರಿಲ್ 25, 2024 ರಂದು ಬೆಂಗಳೂರಿನಲ್ಲಿ 39.2° ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.
ಇದಾದ ಬಳಿಕ ನಿನ್ನೆ ಬೆಂಗಳೂರಿನಲ್ಲಿ 38.5° ಸೆಲ್ಸಿಯಸ್ ದಾಖಲಾಗಿದೆ. ಆದ್ದರಿಂದ ಕಳೆದ 50 ವರ್ಷಗಳಲ್ಲೇ ಬೆಂಗಳೂರು ಮಹಾನಗರದಲ್ಲಿ ಇದು 2ನೇ ಗರಿಷ್ಠ ಉಷ್ಣಾಂಶ ಎಂದು ಪರಿಗಣಿಸಲಾಗಿದೆ. ಜೊತೆಗೆ ಬೆಂಗಳೂರು ಮಹಾನಗರದಲ್ಲಿ ಬೇಸಿಗೆ ಝಳದ ಮಧ್ಯೆ ಬಿಸಿ ಗಾಳಿ ಬೀಸುತ್ತಿದೆ ಎಂದು ಹವಾಮಾನ ಇಲಾಖೆ ನಾಗರಿಕರಿಗೆ ಎಚ್ಚರಿಕೆ ನೀಡಿದೆ.
ಏ.30 ರಿಂದ ಲಘು ಮಳೆ ನಿರೀಕ್ಷೆ: ಇದೇ ವೇಳೆ ಭಾರತೀಯ ಹವಾಮಾನ ಇಲಾಖೆ ಪ್ರಕಾರ ಏಪ್ರಿಲ್ 30 ರಿಂದ ಮೇ 3 ರವರೆಗೆ ಕರ್ನಾಟಕದ ಬೆಂಗಳೂರು ನಗರ, ವಿಜಯಪುರ, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಲಘು ಮಳೆಯಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯಿಂದ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಆದಾಗ್ಯೂ ರಾಜ್ಯದ ಬಾಗಲಕೋಟೆ, ಬೀದರ್, ಗದಗ ಹಾಗೂ ಇತರೆ ಜಿಲ್ಲೆಗಳಲ್ಲಿ ಮೇ 2 ರಂದು ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.