ವೈಟ್ ಪೇಪರ್ ವಿಶೇಷ
ಬೆಂಗಳೂರು: ಜೆಡಿಎಸ್ ಜ್ಯಾತ್ಯಾತೀತ ತತ್ವಗಳನ್ನೆಲ್ಲ ಗಾಳಿಗೆ ತೂರಿ, ಬಿಜೆಪಿ ಜತೆಗೆ ಕೈಜೋಡಿಸಿದಾಗಲೇ ಇಡೀ ನಾಡಿಗೆ ಒಂದು ಅದ್ಭುತವಾದ ಅನುಮಾನ ಮೂಡಿತ್ತು. ಅದೇನೆಂಬುದು ಇದೀಗ ಪೆನ್ ಡ್ರೆöÊವ್ ಮೂಲಕ ಬಹಿರಂಗವಾದAತಾಗಿದೆ.
ದೇವೇಗೌಡರು ಅಧಿಕಾರಕ್ಕಾಗಿ ಅನೇಕ ಸಲ ಕೆಲವೊಂದು ತ್ಯಾಗ ಮಾಡಿದ್ದಾರೆ, ಕೆಲವೊಮ್ಮೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಆದರೆ, ಅಲ್ಲೆಲ್ಲೂ ಜ್ಯಾತ್ಯಾತೀತ ತತ್ವಗಳಿಗೆ ವಿರುದ್ಧವಾದ ನಡೆಯನ್ನು ಅನುಸರಿಸಿರಲಿಲ್ಲ. ತಾವು ಪ್ರಧಾನಿಯಾಗುವ ಸಂದರ್ಭದಲ್ಲಿಯೂ ಜ್ಯಾತ್ಯಾತೀತ ತ್ವದಲ್ಲಿ ನಂಬಿಕೆಯಿಟ್ಟಿದ್ದ ಶಕ್ತಿಗಳ ಜತೆ ಗೂಡಿ ಅಧಿಕಾರ ಹಂಚಿಕೆ ಮಾಡಿಕೊಂಡರೇ ಹೊರತು, ಜ್ಯಾತ್ಯಾತೀತ ತತ್ವಕ್ಕೆ ವಿರುದ್ಧವಾಗಿ ನಡೆದುಕೊಂಡಿರಲಿಲ್ಲ.
ದೇಶದಲ್ಲಿ ಅಲ್ಪಸಂಖ್ಯಾತರ ಹಿತ ಕಾಯುವ ಪಕ್ಷ ಎಂದರೆ ಕಾಂಗ್ರೆಸ್ ಎಂಬ ಮನಸ್ಥಿತಿಯಿದ್ದಾಗಲೂ, ರಾಜ್ಯದಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳು ಹೆಚ್.ಡಿ.ದೇವೇಗೌಡರನ್ನು ಮತ್ತು ಅವರ ಪಕ್ಷವನ್ನು ನಂಬಿ ತಮ್ಮಿಡೀ ಶಕ್ತಿಯನ್ನು ಧಾರೆಯೆರೆದು ಅಧಿಕಾರ ನೀಡಿದ ಉದಾಹರಣೆಯಿದೆ. ಈವರೆಗೆ ನಡೆದ ಎಲ್ಲ ಚುನಾವಣೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳು ದೇವೇಗೌಡರನ್ನು ಬಿಟ್ಟು ಹೋಗಿಲ್ಲ ಎಂದೇ ಹೇಳಬಹುದು. ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿದ್ದರೂ, ಕೆಲವು ಕಡೆ ಮುಸ್ಲಿಂ ಸಮುದಾಯದ ನಾಯಕರು ದೇವೇಗೌಡರ ಮೇಲಿನ ನಂಬಿಕೆ ಕಳೆದುಕೊಂಡಿಲ್ಲ.
ದೇವೇಗೌಡರು ಕುಮಾರಸ್ವಾಮಿ ಬಿಜೆಪಿ ಸೇರಿ ಸರಕಾರ ರಚನೆ ಮಾಡಲು ಮುಂದಾದಾಗ ಅಕ್ಷರಶಃ ಕೆಂಡಾಮAಡಲವಾದರು. ಕೋಮುವಾದಿ ಶಕ್ತಿಗಳೊಂದಿಗೆ ಕೈಜೋಡಿಸಿದ ಎಂಬ ಕಾರಣಕ್ಕೆ ಕುಮಾರಸ್ವಾಮಿಯನ್ನು ಎಷ್ಟೋ ವರ್ಷಗಳ ಕಾಲ ಮನೆಗೆ ಸೇರಿಸಿರಲಿಲ್ಲ ಎಂಬುದು ಅವರ ಆಪ್ತವಲಯದ ಎಲ್ಲರಿಗೂ ಗೊತ್ತಿರುವ ವಿಚಾರ. ಇದೇ ಕಾರಣದಿಂದ ರೇವಣ್ಣ ಕುಮಾರಸ್ವಾಮಿ ಅವರಿಗಿಂತ ಗೌಡರಿಗೆ ಇಷ್ಟವಾದ ಮಗನಾದರು. ಅವರ ಮಕ್ಕಳು ಸಹಜವಾಗಿಯೇ ಪ್ರೀತಿಪಾತ್ರರಾದರು. ಗೌಡರ ಈ ಪ್ರೀತಿಯೇ ಮುಂದೆ ಅವರ ರಾಜಕೀಯ ಜೀವನದ ಸಿದ್ಧಾಂತಕ್ಕೆ ಹುಳಿಯಿಂಡಿತು ಎಂಬುದು ಮಾತ್ರ ವಿಪರ್ಯಾಸ.
೨೦೧೯ ರ ಚುನಾವಣೆಗೆ ಮುಂಚೆ ದೊಡ್ಡಗೌಡರು, ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ನಾನು ದೇಶ ಬಿಡುತ್ತೇನೆ ಎಂದು ಪ್ರತಿಜ್ಞೆ ಮಾಡಿದರು. ಇಡೀ ಬಿಜೆಪಿ ಕುಟುಂಬ ಮತ್ತು ಆರ್‌ಎಸ್‌ಎಸ್ ದೇವೇಗೌಡರನ್ನು ಇನ್ನಿಲ್ಲದಂತೆ ಹಂಗಿಸಿತು. ಮತ್ತೇ ಬಿಜೆಪಿ ಅಧಿಕಾರಕ್ಕೆ ಬಂದಾಗ ಗೌಡರನ್ನು ಹೀಯಾಳಿಸಿತು. ಚುನಾವಣೆಯಲ್ಲಿ ಅದೇ ಸಿಟ್ಟಿನಿಂದ ಸೋಲಿಸಿದರು. ಇಷ್ಟೆಲ್ಲ ಅವಮಾನಗಳ ನಡುವೆಯೂ ದೊಡ್ಡಗೌಡರು ಸಹನೆಯಿಂದಲೇ ಸಹಿಸಿಕೊಂಡರು.
೨೦೧೮ರಲ್ಲಿ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾದಾಗ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಹೆಚ್ಚಿನ ಅನುಕೂಲಗಳಿದ್ದವು. ಆದರೆ, ಸೈದ್ಧಾಂತಿಕ ಬದ್ಧತೆಯನ್ನು ಬಿಟ್ಟುಕೊಡದ ದೊಡ್ಡಗೌಡರು, ಸಿದ್ದರಾಮಯ್ಯ ಅವರ ನಡುವಿನ ವಿರೋಧದ ನಡುವೆಯೂ ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಂಡರು. ಮುಖ್ಯಮಂತ್ರಿ ಸ್ಥಾನ ಪಡೆದುಕೊಂಡು, ಕಾಂಗ್ರೆಸ್ ಜತೆಗೆ ಹೆಜ್ಜೆ ಹಾಕಿದರು. ಮುಂದೆ ಬಿಜೆಪಿ ಆಪರೇಷನ್ ಕಮಲದ ಮೂಲಕ ಅಧಿಕಾರ ಕಿತ್ತುಕೊಂಡಾಗ, ಬಿಜೆಪಿ ವಿರುದ್ಧ ಮತ್ತು ಬಿಜೆಪಿ ಸಿದ್ಧಾಂತದ ವಿರುದ್ಧ ಮುಗಿಬಿದ್ದರು.
ಇನ್ನು ಕುಮಾರಸ್ವಾಮಿ, ಒಮ್ಮೆ ಯಡಿಯೂರಪ್ಪ ಅವರ ಸಖ್ಯದಿಂದ ಅಧಿಕಾರ ಅನುಭವಿಸಿದ್ದರೂ, ಮುಂದೆ ಎಲ್ಲಿಯೂ ಬಿಜೆಪಿ ಜತೆಗೆ ತಮ್ಮ ಜ್ಯಾತ್ಯಾತೀತ ತತ್ವಗಳಿಗೆ ಹಿನ್ನಡೆಯಾಗದಂತೆ ನಡೆದುಕೊಂಡಿದ್ದರು. ಕಾಂಗ್ರೆಸ್ ಜತೆ ಸೇರಿ ಸಿಎಂ ಆದರು. ಕೆಲವೊಮ್ಮೆ ಭಿನ್ನಾಭಿಪ್ರಾಯ ಬಂದರೂ, ಡಿಕೆಶಿ ಜತೆಗೆ ಸೈದ್ಧಾಂತಿಕವಾಗಿ ಹೊಂದಾಣಿಕೆಯನ್ನು ಮಾಡಿಕೊಂಡೇ ಸಾಗಿದರು. ಸಿದ್ದರಾಮಯ್ಯ ಅವರ ಜತೆಗೂ ಸಂಬAಧ ಹದಗೆಡದಂತೆ ನೋಡಿಕೊಂಡಿದ್ದರು.
೨೦೨೨ ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ಕುಮಾರಸ್ವಾಮಿಯಷ್ಟು ಸ್ಪಷ್ಟವಾಗಿ ಯಾರೂ ವಿರೋಧಿಸಲಿಲ್ಲ ಎನ್ನಬಹುದು. ಆರ್‌ಎಸ್‌ಎಸ್‌ನ ಗರ್ಭಗುಡಿ ಸಿದ್ಧಾಂತ, ಶೂದ್ರರ ಮೇಲಿನ ದ್ವೇಷವನ್ನು ಅತಿ ಹೆಚ್ಚು ಕಟುವಾಗಿ ಟೀಕಿಸಿದ ಕುಮಾರಸ್ವಾಮಿ, ಆರ್‌ಎಸ್‌ಎಸ್ ಅನ್ನು ನೇರವಾಗಿ ಎದುರುಹಾಕಿಕೊಂಡು, ಬಿಜೆಪಿಯ ಗರ್ಭಗುಡಿಯ ನಾಯಕರನ್ನು ಟೀಕಿಸಿದರು. ಬಿ.ಎಲ್. ಸಂತೋಷ್, ಪ್ರಹ್ಲಾದ್ ಜೋಷಿ ಅವರಂತಹ ನಾಯಕರನ್ನು ನೇರವಾಗಿ ಟೀಕಿಸುವ ಮೂಲಕ ಬಿಜೆಪಿಯನ್ನು ಸೈದ್ಧಾಂತಿಕವಾಗಿ ಎದುರು ಹಾಕಿಕೊಂಡರು.
ಬಿಜೆಪಿ ಉರಿಗೌಡ ಮತ್ತು ನಂಜೇಗೌಡ ಪಾತ್ರಗಳ ಸೃಷ್ಟಿಯ ಮೂಲಕ ಟಿಪ್ಪು ದ್ವೇಷವನ್ನು ಹರಡಲು ಪ್ರಯತ್ನ ಮಾಡಿದರೆ, ಕುಮಾರಸ್ವಾಮಿ ಅದನ್ನು ಕಟುವಾಗಿ ಟೀಕಿಸಿ, ಒಕ್ಕಲಿಗರ ಮೇಲೆ ದೇಶದ್ರೋಹದ ಆರೋಪ ಬರದಂತೆ ತಡೆಯುವಲ್ಲಿ ಯಶಸ್ವಿಯಾದರು. ಕೊನೆಗೆ ಉರಿಗೌಡ-ನಂಜೇಗೌಡ ವಿಷ ಮಂಡ್ಯ-ಹಾಸನ ಸೇರಿ ಮೈಸೂರು ಪ್ರಾಂತ್ಯದ ಮೇಲೆ ಹರಡದಂತೆ ನೋಡಿಕೊಂಡರು. ಇಷ್ಟೆಲ್ಲ ಕೋಮುವಾದದ ವಿರುದ್ಧವಿದ್ದ, ಈ ಇಬ್ಬರು ನಾಯಕರು ಇದ್ದಕ್ಕಿಂದAತೆ ಲೋಕಸಭೆ ಚುನಾವಣೆಗೆ ಬಿಜೆಪಿ ಜತೆಗೆ ಹೋದಾಗಲೇ ರಾಜ್ಯದ ಜನತೆಗೊಂದು ಅನುಮಾನ ಕಾಡಿತ್ತು.
ಮೈತ್ರಿ ಮಾಡಿಕೊಳ್ಳುವಾಗಲೇ ತಮ್ಮ ಮೊಮ್ಮಗನ ಇಂತಹ ಕರ್ಮಕಾಡವೊಂದು ತಮ್ಮನ್ನು ಕಾಡಲಿದೆ ಎಂಬ ಅನುಮಾನ ದೇವೇಗೌಡರಿಗೆ ಇತ್ತೇನೋ, ಅಣ್ಣನ ಮಗನ ಇಂತಹದ್ದೊAದು ದುರ್ನಡತೆಯಿಂದ ಮಾಜಿ ಸಿಎಂ ಕುಮಾರಸ್ವಾಮಿ ತಾವು ವಿರೋಧಿಸುತ್ತಿದ್ದ, ಆರ್‌ಎಸ್‌ಎಸ್ ನಾಯಕರ ಜತೆಗೆ ಹೊಂದಾಣಿಕೆ ಮಾಡಿಕೊಂಡು ಬಿಟ್ಟರು.
ಮೋದಿ ಪ್ರಧಾನಿಯಾದರೆ, ದೇಶ ಬಿಡುತ್ತೇನೆ ಎಂದ ದೊಡ್ಡಗೌಡರೇ, ಮೋದಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ಹೊಗಳಿ ಅಟ್ಟಕ್ಕೇರಿಸಿದರು. ಅನುದಾನಕ್ಕಾಗಿ ಪ್ರಾದೇಶಿಕ ಅಸ್ಮಿತೆಯಡಿಯಲ್ಲಿ ಹೋರಾಡುತ್ತಿದ್ದವರು, ಕೇಂದ್ರದ ಅನುದಾನವನ್ನು ಭಿಕ್ಷೆ ಬೇಡುತ್ತಾರೆ ಎಂದರು. ಮೋದಿ ಮೆಚ್ಚಿಸುವ ಭರದಲ್ಲಿ ನಾಡಿಗೆ ಕಾಂಗ್ರೆಸ್ ಕೊಡುತ್ತಿರುವ ಗ್ಯಾರಂಟಿಯನ್ನು ಟೀಕಿಸುವ ಅವಸರದಲ್ಲಿ ಇಡೀ ನಾಡಿನ ಮಹಿಳೆಯರನ್ನು ಹಾದಿ ತಪ್ಪುತ್ತಿದ್ದಾರೆ ಎಂದು ನಾಡಿನ ಮಹಿಳೆಯರ ವಿರೋಧ ಕಟ್ಟಿಕೊಂಡು ಕ್ಷಮೆ ಕೇಳಿದರು.
ಇಷ್ಟೆಲ್ಲ ಮಾಡಿ, ತಮ್ಮ ಕುಟುಂಬದ ಮಾನ ಮರ್ಯಾದೆ ಉಳಿಸಿಕೊಳ್ಳಲು ದೊಡ್ಡಗೌಡರು ಮತ್ತು ಕುಮಾರಸ್ವಾಮಿ ನಡೆಸಿದ ಪ್ರಯತ್ನ ಇದೀಗ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಪ್ರಜ್ವಲ್ ಎಂಬ ಕುಟುಂಬದ ಕುಡಿಯ ಕೆಡುಕು ದೊಡ್ಡಗೌಡರ ಕುಟುಂಬವನ್ನೇ ತಲೆತಗ್ಗಿಸುವಂತೆ ಮಾಡಿದೆ. ಅವರನ್ನು ನಂಬಿ ೧೯ ಸ್ಥಾನ ಗೆದ್ದರೂ ಎದೆಯುಬ್ಬಿಸಿಕೊಂಡು ಓಡಾಡುತ್ತಿದ್ದ ಜೆಡಿಎಸ್ ಕಾರ್ಯಕರ್ತರನ್ನು ನಾಚುವಂತೆ ಮಾಡಿದೆ. ಪಕ್ಷ ಮುಂದೆ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿ ಈಗ ದೊಡ್ಡಗೌಡರನ್ನು ಕಾಡುತ್ತಿದೆ.
ಇದರಿಂದ ದೊಡ್ಡಗೌಡರ ಕುಟುಂಬಕ್ಕೆ ಮಾತ್ರವಲ್ಲ, ಪ್ರಾದೇಶಿಕ ಅಸ್ಮಿತೆಯ ಮೇಲೆ ಪ್ರೀತಿ ಇರುವ ಇಡೀ ಕನ್ನಡ ಕುಲಕ್ಕೆ ನಷ್ಟವಾಗಿದೆ. ನಾಡಿನ ಬಗ್ಗೆ ಧ್ವನಿಯೆತ್ತುವ ಇಂತಹ ಮತ್ತೊಬ್ಬ ನಾಯಕ, ಪ್ರಾದೇಶಿಕ ನಾಯಕ ನಮಗೆ ಮತ್ತೆ ಸಿಗುತ್ತಾನಾ ಎಂಬ ಅನುಮಾನ ಕನ್ನಡಿಗರದ್ದು. ದೇವೇಗೌಡರು ಅನೇಕ ಬಾರಿ ಧೂಳಿನಿಂದ ಎದ್ದು ಬಂದವರು. ಈ ಅವಮಾನವನ್ನು ಮೆಟ್ಟಿ, ಕುಟುಂಬ ವ್ಯಾಮೋಹವನ್ನು ಬಿಟ್ಟು ಮತ್ತೊಮ್ಮೆ ಪಕ್ಷವನ್ನು, ಪಕ್ಷದ ಕಾರ್ಯಕರ್ತರನ್ನು ಗರ್ವದಿಂದ ಎದೆಸೆಟೆಸಿ ನಿಲ್ಲುವಂತೆ ಮಾಡುತ್ತಾರಾ ಕಾದು ನೋಡಬೇಕಿದೆ.