ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರ ಸಹಿಯನ್ನು ನಕಲು ಮಾಡಿ, ಕೋಟ್ಯಂತರ ರು. ಹಣ ವಿತ್ ಡ್ರಾ ಮಾಡಿದ್ದ ಐವರು ಆರೋಪಿಗಳನ್ನು ಬ್ರಹ್ಮಗಿರಿ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಸಂಬAಧ ಪೊಲೀಸರು 30 ಲಕ್ಷ ಹಣ ಜಪ್ತಿ ಮಾಡಿಕೊಂಡಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಆಯುಕ್ತರ ಆಪ್ತಸಹಾಯಕ ಸೇರಿ ಐವರು ಆರೋಪಿಗಳು ನಕಲಿ ಸಹಿ ಬಳಸಿ ಬ್ಯಾಂಕ್‌ನಿAದ 1.32 ಕೋಟಿ ರು. ವಿತ್ ಡ್ರಾ ಮಾಡಲು ಸಿದ್ಧವಾಗಿದ್ದರು.
ಚೆಕ್‌ನಲ್ಲಿ 1.32 ಕೋಟಿ ಹಣ ವಿತ್ ಡ್ರಾಗೆ ನಕಲಿ ಸಹಿ ಬಳಸಿದ್ದು, 35,56,560 ರು ಡ್ರಾ ಮಾಡಿದ್ದರು. ಉಳಿದ ಚೆಕ್‌ಗಳು ಬ್ಯಾಂಕ್‌ಗೆ ಬಂದಾಗ ಬ್ಯಾಂಕ್ ಸಿಬ್ಬಂದಿ ಅನುಮಾನಗೊಂಡು, ಆಯುಕ್ತರ ಕಚೇರಿಗೆ ಮಾಹಿತಿ ನೀಡಿದ್ದರು.
ಆಯುಕ್ತರ ಕಚೇರಿಯಲ್ಲಿ ಯಾವುದೇ ಹಣ ಡ್ರಾ ಮಾಡಲು ಚೆಕ್ ಕೊಟ್ಟಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು, ದೂರು ನೀಡಲಾಗಿತ್ತು. ಹೀಗಾಗಿ, ಆಯುಕ್ತರ ಆಪ್ತ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಬಂಧಿತರಿAದ 30 ಲಕ್ಷ ರು. ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.