ಸುದ್ದಿ

Sandalwood comedy actor death in Bengaluru : ಕನ್ನಡದ ಹಾಸ್ಯ ಚಕ್ರವರ್ತಿ ನಟ ಸರಿಗಮ ವಿಜಿ ಇನ್ನಿಲ್ಲ.

Share It

ಬೆಂಗಳೂರು: ಹಿರಿಯ ಹಾಸ್ಯನಟ ಸರಿಗಮ ವಿಜಿ ಅವರು ಇಂದು (ಬುಧವಾರ) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕನ್ನಡದ ಹಲವು ಚಿತ್ರಗಳಲ್ಲಿ ಹಾಸ್ಯನಟರಾಗಿ ಅಭಿನಯಿಸಿ, ನೋಡುಗರನ್ನು ರಂಚಿಸುವ ಮೂಲಕ ಹಾಸ್ಯ ಚಕ್ರವರ್ತಿ ಎಂದೇ ಹೆಸರಾಗಿದ್ದರು.

ಸರಿಗಮ ವಿಜಿ ಅವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಕೆಲದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.ಸರಿಗಮ ವಿಜಿ ಎಂಬ ತಮ್ಮ ರಂಗನಾಮದಿಂದ ಕರೆಯಲ್ಪಡುವ ಆರ್. ವಿಜಯ್ಕುಮಾರ್ ಕನ್ನಡದ ಜನಪ್ರಿಯ ಹಾಸ್ಯ ನಟ,ಹಾಗೂ ಬರಹಗಾರರಾಗಿದ್ದರು.

ವಿಜಿ ರವರು ನಟನಾಗಿ ಚೊಚ್ಚಲ ಕನ್ನಡ ಚಲನಚಿತ್ರ ಬೆಳುವಲದ ಮಡಿಲಲ್ಲಿ (1975) ಬಂದಿತು. 2018 ರ ಹೊತ್ತಿಗೆ ಅವರು ಕನ್ನಡದಲ್ಲಿ ಸುಮಾರು 269 ಚಿತ್ರಗಳಲ್ಲಿ ನಟಿಸಿದ್ದಾರೆ.ಇನ್ನೂ
80 ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿಯು ಕೆಲಸ ಮಾಡಿದ್ದಾರೆ. ಸಂಸಾರದಲ್ಲಿ ಸರಿಗಮ, ಅವರು ನಿರ್ದೇಶಿಸಿದ ಮತ್ತು ನಟಿಸಿದ ಮೊದಲ ರಂಗಭೂಮಿ ನಾಟಕ, ಇದು 1390ಕ್ಕೂ ಹೆಚ್ಚು ಬಾರಿ ಪ್ರದರ್ಶನಗೊಂಡಿದೆ.

ಮದುವೆ ಮಾಡಿ ನೋಡು (1965), ಬೆಳವಲದ ಮಡಿಲಲ್ಲಿ (1975), ಕಪ್ಪು ಕೋಲ (1980) ಭೀಮಾ (ಆರ್.ವಿಜಯ್ಕುಮಾರ್ ಎಂದು ಮನ್ನಣೆ). ಪ್ರತಾಪ್ (1990) ಮನ ಮೆಚ್ಚಿದ ಸೊಸೆ (1992), ಕೆಂಪಯ್ಯ IPS (1993) ಚಿನ್ನದ ಪದಕ (1994), ಜಗತ್ ಕಿಲಾಡಿ (1998), ಯಮಲೋಕದಲ್ಲಿ ವೀರಪ್ಪನ್ (1998), ದುರ್ಗಿ (2004), ಸ್ವಾರ್ಥರತ್ನ (2018)ಗಳು ಹೆಸರು ತಂದುಕೊಟ್ಟಿದ್ದವು.


Share It

You cannot copy content of this page