ಈ ಬಾರಿಯ ಚಾಂಪಿಯನ್ ಟ್ರೋಫಿ ಗೆ ಆಸ್ಟ್ರೇಲಿಯ ಲೇಟೆಸ್ಟ್ ಆಗಿ ತನ್ನ ಬಲಿಸ್ಟ ತಂಡವನ್ನು ಪ್ರಕಟಿಸಿದೆ. ತಂಡದಲ್ಲಿ ಯಾರೆಲ್ಲ ಸ್ಥಾನ ಪಡೆದಿದ್ದಾರೆ. ಎಂಬುದನ್ನ ನೋಡೋಣ ಬನ್ನಿ.
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಸ್ಟ್ರೇಲಿಯ ತಂಡ ಸದ್ಯ ಚಾಂಪಿಯನ್ ಟ್ರೋಫಿಗೆ ತನ್ನ ಬಲಿಷ್ಠವಾದ ತಂಡವನ್ನು ಪ್ರಕಟಿಸಿದೆ. ಈ ಬಾರಿಯ ಚಾಂಪಿಯನ್ ಟ್ರೋಫಿಯಲ್ಲಿ ಪ್ಯಾಟ್ ಕಮಿನ್ಸ್ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.
ಈ ಹಿಂದೆ ಕಮಿನ್ಸ್ ಚಾಂಪಿನಯನ್ ಟ್ರೋಫಿಯಿಂದ ಹೊರಗುಳಿಯುವ ಸಾಧ್ಯತೆ ಇತ್ತು. ತಮ್ಮ ಎರಡನೆಯ ಮಗುವಿನ ಜನನ ಕಾರಣದಿಂದ ಲಂಕಾ ವಿರುದ್ಧದ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಇನ್ನು ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ವೇಗಿ ಜೋಶ್ ಹ್ಯಾಜೆಲ್ ವುಡ್ ಗಾಯದಿಂದ ಕೆಲ 2 ಪಂದ್ಯ ಮಾತ್ರ ಆಡಿದ್ದರು. ಈಗ ಪಿಟ್ ಆಗಿ ತಂಡಕ್ಕೆ ಮರಳಿದ್ದಾರೆ.
ಹಾಗೆ ಪಾಕಿಸ್ತಾನ ವಿರುದ್ಧ ಏಕದಿನ ಸರಣಿಯಲ್ಲಿ ಆರಂಭಿಕನಾಗಿ ಆಡಿದ್ದ ಜೇಕ್ ಫ್ರೇಸರ್-ಮೆಕ್‌ಗುರ್ಕ್ ತಂಡದಿಂದ ಕೈ ಬಿಡಲಾಗಿದೆ. ಆಸ್ಟ್ರೇಲಿಯ ತಂಡ ಹೀಗಿದೆ :
ಪ್ಯಾಟ್ ಕಮಿನ್ಸ್ (ನಾಯಕ), ಮಾರ್ಕಸ್ ಸ್ಟೊಯಿನಿಸ್,
ನಾಥನ್ ಎಲ್ಲಿಸ್, ಆರನ್ ಹಾರ್ಡಿ, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಆಡಮ್ ಜಂಪಾ, ಅಲೆಕ್ಸ್ ಕ್ಯಾರಿ,
ಮಾರ್ನಸ್ ಲಬುಶೇನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಹ್ಯಾಜಲ್‌ವುಡ್,ಮ್ಯಾಟ್ ಶಾರ್ಟ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್.