ಬೆಂಗಳೂರು: ತಿರುಪತಿಯಲ್ಲಿ ನಡೆದ ಕಾಲ್ತುಳಿತದಿಂದ ಕರ್ನಾಟಕ ಭಕ್ತಾಧಿಗಳಿಗೆ ತೊಂದರೆಯಾಗಿದ್ದು, ಅವರಿಗೆ ಕರ್ನಾಟಕ ಭವನದಲ್ಲಿಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ತಿರುಪತಿಯಲ್ಲಿ ನಡೆದ ಘಟನೆಯಲ್ಲಿ ಆರು ಜನ ಭಕ್ತರು ಮೃತಪಟ್ಟಿರುವುದು ವಿಷಾಧನೀಯ. ಆದರೆ, ರಾಜ್ಯದ ಯಾವುದೇ ಭಕ್ತರಿಗೆ ಸಮಸ್ಯೆಯಾಗಿಲ್ಲ. ಭಯಗೊಂಡಿರುವ ಭಕ್ತರಿಗೆ ಕರ್ನಾಟಕ ಭವನದ ಛತ್ರದಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ತಿರುಮಲದಲ್ಲಿರುವ ಇಲಾಖೆ ಅಧಿಕಾರಿಗಳ ಜತೆಗೆ ನಾನು ಖುದ್ದಾಗಿ ಮಾತನ್ನಾಡಿದ್ದೇನೆ. ರಾಜ್ಯದ ಭಕ್ತಾಧಿಗಳ ಸಮಸ್ಯೆಗೆ ಶೀರ್ಘವೇ ಸ್ಪಂದಿಸಬೇಕು. ಅವರಿಗೆ ಅಗತ್ಯವಿರುವ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಕರ್ನಾಟಕ ಭವನದಲ್ಲಿ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಲಾಗಿದೆ ಎಂದು ಹೇಳಿದ್ದಾರೆ.