ಬೆಂಗಳೂರು: ಫೈವ್ ಸ್ಟಾರ್ಸ್ ಸಂಸ್ಥೆ ಆಯೋಜನೆ ಮಾಡಿರುವ ಎವಿಆರ್ ಸಿನಿಮಾಸ್ ಅರ್ಪಿಸುವ ಮೀಡಿಯಾ ಕಪ್ ಟ್ರೋಪಿಯನ್ನು ನಟ ವಸಿಷ್ಠ ಸಿಂಹ ಅನಾವರಣಗೊಳಿಸಿದರು.
ನಾಗರಬಾವಿಯ ಕಿಂಗ್ಸ್ ಕ್ಲಬ್ ನಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆ ಮತ್ತು ಟ್ರೋಪಿ ಅನಾವರಣ ಕಾರ್ಯಕ್ರಮದಲ್ಲಿ ಎಂಟು ತಂಡಗಳ ಆಯ್ಕೆ ನಡೆಯಿತು. ಇದೇ ವೇಳೆ ಎಲ್ಲ ತಂಡಗಳ ಜರ್ಸಿಗಳನ್ನು ಬಿಡುಗಡೆಗೊಳಿಸಲಾಯಿತು.
ನಿಶ್ಚುತ ಚಾಲೆಂಜರ್ಸ್, ರಂಗ ಎಲೆವೆನ್, ತೀಂ ಪರ್ವಂ, ಬಸವನಗುಡಿ ಸಾಯಿ ಕ್ರಿಕೇಟರ್ಸ್ , ಸಿಆರ್ ಚಾಲೆಂಜರ್ಸ್, ದೇವ್ ಬ್ಯಾಟ್ಲರ್ಸ್, ಗುರು ಸುಜಯ್ ಕ್ರಿಕೇಟರ್ಸ್, ಮರೀನ್ ಫೈಟರ್ಸ್ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ನವೆಂಬರ್ ಕೊನೆಯ ವಾರದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಮಾಧ್ಯಮದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ವಸಿಷ್ಠ ಸಿಂಹ ಅವರ ಜತೆಗೆ, ಹಿರಿಯ ಪತ್ರಕರ್ತ ರಮಾಕಾಂತ್ ಶಿವಕುಮಾರ್ ಬೆಳ್ಳಿತಟ್ಟೆ, ಆಯೋಜಕರಾದ ಕೃಷ್ಣ ನಾಯಕ್, ರಚನ್, ಜಯಪ್ರಕಾಶ್, ಸಯ್ಯದ್ ಹಾಗೂ ಎಲ್ಲ ತಂಡಗಳ ಮಾಲೀಕರು ಭಾಗವಹಿಸಿದ್ದರು.
