ನವಲಗುಂದ ಬಸ್ ನಿಲ್ದಾಣದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣ
ನವಲಗುಂದ: ನಗರದ ಬಸ್ ನಿಲ್ದಾಣದಲ್ಲಿ ಕನ್ನಡ ಕ್ರಿಯಾ ಸಮಿತಿಯಿಂದ ಅಳವಡಿಸಿದ್ದ ಕನ್ನಡದ 8 ಮಂದಿ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರ ಭಾವ ಚಿತ್ರಗಳನ್ನು ಶಾಸಕ ಎನ್.ಎಚ್. ಕೋನರೆಡ್ಡಿ ಅನಾವರಣಗೊಳಿಸಿದರು.
ಬೆಂಗಳೂರಿನಲ್ಲಿ ಎಲ್ಲಾ ಭಾಷೆಯ ಮಂದಿ ಇದ್ದಾರೆ ಆದರೆ ನಮ್ಮ ಉತ್ತರ ಕರ್ನಾಟಕದ ಜನರು ನಿಜವಾದ ಕನ್ನಡ ಮಾತನಾಡುತ್ತಾರೆ ನಮ್ಮ ನವಲಗುಂದ ಘಟಕದ ಕನ್ನಡ ಕ್ರಿಯಾ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮಾಬುಸಾಬ್ ದಿವಾನಖಾನವರ್ ಮತ್ತು ಘಟಕದ ಅಧ್ಯಕ್ಷ ಎಂ ಆರ್ ಹೆಬಸೂರ ಸಮಿತಿ ಎಲ್ಲ ಪದಾಧಿಕಾರಿಗಳು ಸೇರಿ ಇಂದು ಕರ್ನಾಟಕಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ 8 ಮಂದಿಯ ಭಾವ ಚಿತ್ರಗಳನ್ನು ಅಳವಡಿಸುವ ಮೂಲಕ ನಮ್ಮ ನವಲಗುಂದ ಬಸ್ ನಿಲ್ದಾಣದ ರಾಜ್ಯಕ್ಕೆ ಮಾದರಿ ಬಸ್ ನಿಲ್ದಾಣ ಆಗಿದೆ. ನಾನು ಕನ್ನಡ ಕ್ರಿಯಾ ಸಮಿತಿಯ ಪದಾಧಿಕಾರಿಗಳು ವೈಯಕ್ತಿಕವಾಗಿ ಅಭಿನಂದನೆ ತಿಳಿಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಘಟಕ ವವ್ಯಸ್ಥಾಪಕ ಅಶೋಕ್ ಕಾಡರಕೊಪ್ಪ, ಸಂಘಟನಾ ಕಾರ್ಯದರ್ಶಿ ಮಾಬುಸಾಬ್ ದಿವಾನಖಾನವರ್, ಘಟಕದ ಅಧ್ಯಕ್ಷ ಎಂ. ಆರ್. ಹೆಬಸೂರ ಮುಂತಾದವರು ಉಪಸ್ಥಿತರಿದ್ದರು.