ಗಣೇಶನನ್ನು ದೊಡ್ದವರಿಂದ ಚಿಕ್ಕವರ ವರೆಗೆ ಎಲ್ಲರೂ ಪೂಜಿಸುತ್ತಾರೆ. ಗಣೇಶನನ್ನು ಪೂಜಿಸುವಾಗ ಸರಿಯಾಗಿ ವಿಧಿ ವಿಧಾನಗಳ ಮೂಲಕ ಪೂಜಿಸದಿದ್ದರೆ ಅವನ ಕೋಪಕ್ಕೆ ಕಾರಣವಾಗಬೇಕಾಗುತ್ತದೆ. ಆದ್ದರಿಂದ ಗಣೇಶನನ್ನು ಸರಿಯಾದ ಕ್ರಮದಲ್ಲಿ ಮತ್ತು ಯಾವ ಸಮಯ ಕುರಿಸಬೇಕು ಎಂಬ ಮಾಹಿತಿಯನ್ನು ಕೆಳಗಿನಂತೆ ತಿಳಿಯೋಣ.
ಗಣೇಶ ಮೂರ್ತಿ ಪ್ರತಿಷ್ಠಾಪನಾ ಸಮಯ
ಶನಿವಾರ ಬೆಳಗ್ಗೆ 5:45 ರಿಂದ 7:30 ಬ್ರಾಹ್ಮಿ ಮುಹೂರ್ತವು ಗಣೇಶನನ್ನು ಕೂರಿಸಲು ಸೂಕ್ತ ಸಮಯವಾಗಿದೆ. ಅಥವಾ 7:30 ರಿಂದ 9 ಗಂಟೆಯ ವರೆಗೆ ಒಳ್ಳೆಯ ಸಮಯ ಇದೆ. ಬಳಿಕ ರಾಹುಕಾಲ ಇದೆ. ಇದಾದ ಬಳಿಕ 10: 30 ರಿಂದ 12 ಗಂಟೆಯೊಳಗೆ ಗಣೇಶನನ್ನು ಕೂರಿಸಲು ಒಳ್ಳೆಯ ಸಮಯವಿದೆ. ಅಥವಾ ಸಂಜೆ 4:30 ರಿಂದ 7 ಗಂಟೆಯ ಒಳಗೆ ಗಣೇಶನನ್ನು ಕುರಿಸಬಹುದು.
ಗಣಪತಿ ಪ್ರತಿಷ್ಠಾಪಿಸುವ ವಿಧಾನ
ಗಣೇಶನನ್ನು ಪೂಜಿಸುವವರು ಶುಭ್ರ ವಾಗಿ ಒಳ್ಳೆಯ ಮನಸ್ಸಿನಿಂದ ಗಣೇಶನನ್ನು ಪೂಜಿಸಬೇಕು. ಗಣೇಶನನ್ನು ಉತ್ತರ ಅಥವಾ ಪೂರ್ವಕ್ಕೆ ಮುಖವನ್ನು ಇರುವಂತೆ ಕೂರಿಸಬೇಕು. ಮೊದಲು ಎರಡು ಬಾಳೆ ಎಲೆಯನ್ನು ಆಕಿ ಅದರ ಮೇಲೆ ಅಕ್ಕಿಯನ್ನು ಹರಡಿ ಅಕ್ಕಿಯ ಮೇಲೆ ಗಣೇಶನನ್ನು ಕೂರಿಸಬೇಕು. ಬಳಿಕ ಗಣೇಶನಿಗೆ ಇಷ್ಟವಾದ ಕಡುಬು ಮಾಡಿ ಇಡಿ. ಹಣ್ಣುಗಳನ್ನು ಸಮರ್ಪಿಸಿ. ನೈವೇದ್ಯವನ್ನು ಮಾಡಿ ಭಕ್ತಿಯಿಂದ ಗಣಪನನ್ನು ಪೂಜಿಸಿ.

