ಉಪಯುಕ್ತ ಸುದ್ದಿ

ನವೀಕರಿಸಬಹುದಾದ ಇಂಧನ: ಆರು ತಿಂಗಳಲ್ಲಿ ಶೇ.25ರಷ್ಟು ಪ್ರಗತಿ:; ಜೋಶಿ

Share It

ನವೀಕರಿಸಬಹುದಾದ ಇಂಧನ: ಆರು ತಿಂಗಳಲ್ಲಿ ಶೇ.25ರಷ್ಟು ಪ್ರಗತಿ:; ಜೋಶಿ

  • 2026 ಮೊದಲರ್ಧದಲ್ಲಿ 30,581.31 ಮೆಗಾವ್ಯಾಟ್ ಸಾಮರ್ಥ್ಯ ಸೇರ್ಪಡೆ
  • ಸೌರಶಕ್ತಿಯಲ್ಲಿ ಶೇ.43ರಷ್ಟು ಹೆಚ್ಚಳ; 26,342.07 ಮೆಗಾವ್ಯಾಟ್ ಉತ್ಪಾದನೆ

ನವದೆಹಲಿ: ನವೀಕರಿಸಬಹುದಾದ ಇಂಧನದಲ್ಲಿ ಭಾರತ 2026ರ ಮೊದಲರ್ಧದಲ್ಲೇ ಕಳೆದ ವರ್ಷಕ್ಕಿಂತ ಶೇ.25ರಷ್ಟು ಪ್ರಗತಿ ಸಾಧಿಸಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

2026ರ ಈ ಆರು ತಿಂಗಳಲ್ಲಿ ಭಾರತ ಒಟ್ಟು 30,581.31 ಮೆಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸೇರ್ಪಡೆಗೊಳಿಸಿದೆ ಎಂದಿದ್ದಾರೆ.

ಕಳೆದ ವರ್ಷ ಜೂನ್ ವೇಳೆಗೆ 24554.49 ಮೆಗಾವ್ಯಾಟ್ ಸಾಮರ್ಥ್ಯದಲ್ಲಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಶೇ.25ರಷ್ಟು ಗಮನಾರ್ಹ ಬೆಳವಣಿಗೆ ಕಂಡಿದೆ. ನವೀಕರಿಸಬಹುದಾದ ಇಂಧನದಲ್ಲಿ ಭಾರತ ಅಭೂತಪೂರ್ವ ವೇಗ ಪಡೆದುಕೊಳ್ಳುತ್ತಿದೆ ಎಂದಿದ್ದಾರೆ ಜೋಶಿ.

ಪ್ರಧಾನಿ ನರೇಂದ್ರ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು ಸಮರ್ಥ ನಾಯಕತ್ವದಲ್ಲಿ ಭಾರತದ ಸ್ವಚ್ಛ ಇಂಧನ ಪಯಣ ಅಮೋಘವಾಗಿದೆ. ಇದರಲ್ಲಿ ‘ಸೌರಶಕ್ತಿ’ ಪ್ರಮುಖ ಚಾಲಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಹೇಳಿದ್ದಾರೆ.

ಸೌರಶಕ್ತಿಯಲ್ಲಿ ಶೇ.43ರಷ್ಟು ಹೆಚ್ಚಳ:
2026ರ ಜನವರಿ ಮತ್ತು ಜೂನ್ ನಡುವೆ 26,342.07 ಮೆಗಾವ್ಯಾಟ್ ಸೌರಶಕ್ತಿ ಉತ್ಪಾದನಾ ಸಾಮರ್ಥ್ಯ ಸೇರಿಸಲಾಗಿದೆ. ಸೌರಶಕ್ತಿಯಲ್ಲಿ 2025ರ ಜನವರಿಯಿಂದ ಜೂನ್ ವರೆಗೆ 18383.12 ಮೆಗಾವ್ಯಾಟ್ ಸಾಮರ್ಥ್ಯವಿತ್ತು. ಇದಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದ ಮೊದಲಾರ್ಧದಲ್ಲಿ ಶೇ.43ರಷ್ಟು ಗಮನಾರ್ಹ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.

ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಈ ಹೊಸ ಮೈಲಿಗಲ್ಲು ಶುದ್ಧ ಇಂಧನ ಪರಿವರ್ತನೆ ಹಾಗೂ ಆತ್ಮನಿರ್ಭರ ಭಾರತದ ಭದ್ರ ಭವಿಷ್ಯ ರೂಪಿಸುವ ಪ್ರಧಾನಿ ಮೋದಿ ಅವರ ಬದ್ಧತೆಗೆ ಪ್ರತೀಕವಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಪ್ರತಿಪಾದಿಸಿದ್ದಾರೆ.


Share It

You cannot copy content of this page