ಸುದ್ದಿ

ಟಾಟಾ ಮೋಟರ್ಸ್ ನಿಂದ ದೇಶ್ ಕಾ ಟ್ರಕ್ ಉತ್ಸವ: ತಜ್ಞರಿಂದ ಮಾಹಿತಿ ಪಡೆದ ಗ್ರಾಹಕರು

Share It

ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟಾರ್ಸ್ 2024ರ ಸೆ.24 ರಂದು ಬೆಂಗಳೂರಿನಲ್ಲಿ ಒಂದು ದಿನದ ದೇಶ್ ಕಾ ಟ್ರಕ್ ಉತ್ಸವ ಆಯೋಜಿಸಿತ್ತು.

ಕಾರ್ಯಕ್ರಮದಲ್ಲಿ ತಮ್ಮ ಉತ್ಪನ್ನಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು, ಇಂಧನ ದಕ್ಷತೆಯನ್ನು ಸುಧಾರಿಸಲು ಮತ್ತು ಹೆಚ್ಚಿನ ಲಾಭದಾಯಕತೆಯನ್ನು ಸಾಧಿಸಲು ತಜ್ಞರಿಂದ ಗ್ರಾಹಕರು ಮಾರ್ಗದರ್ಶನ ಪಡೆದರು.

ಉತ್ಸವದಲ್ಲಿ ವಾಹನಗಳ ಕುರಿತಾದ ಸಮಗ್ರ ಮಾಹಿತಿಯನ್ನು ಗ್ರಾಹಕರು ಪಡೆದರು.
ಕಾರ್ಯಕ್ರಮದಲ್ಲಿ ವಾಹನ ನಿರ್ವಹಣೆ ಸಂವಾದ, ವಾಹನ ನಿರ್ವಹಣೆ ಉತ್ಪನ್ನಗಳು, ವಾರ್ಷಿಕ ನಿರ್ವಹಣಾ ಪ್ಯಾಕೇಜ್‌ ಗಳು ಮತ್ತು ಸಂಪೂರ್ಣ ಸೇವಾ 2.0 ಯೋಜನೆಯ ಮೂಲಕ 24/7 ರೋಡ್ ಸೈಡ್ ಅಸಿಸ್ಟ್ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು

ಕಾರ್ಯಕ್ರಮದಲ್ಲಿ ಟಾಟಾ ಮೋಟಾರ್ಸ್‌ ನ ಹೊಸ ಟ್ರಕ್‌ ಶ್ರೇಣಿಗಳನ್ನು ಹತ್ತಿರದಿಂದ ನೋಡಿ ತಿಳಿಯುವ ಅವಕಾಶ ಒದಗಿಸಲಾಗಿತ್ತು. ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್‌ ನ ಟ್ರಕ್ಸ್‌ ವಿಭಾಗದ ಉಪಾಧ್ಯಕ್ಷ ಮತ್ತು ಬಿಸಿನೆಸ್ ಹೆಡ್ ರಾಜೇಶ್ ಕೌಲ್ ಮಾತನಾಡಿ, ಟಾಟಾ ಮೋಟಾರ್ಸ್ ಗ್ರಾಹಕರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅದಕ್ಕೆ ತಕ್ಕ ಪರಿಹಾರ ಒದಗಿಸಲು ಬದ್ಧವಾಗಿದೆ.

ದೇಶ್ ಕಾ ಟ್ರಕ್ ಉತ್ಸವವು ನಾವು ಗ್ರಾಹಕರೊಂದಿಗೆ ನೇರವಾಗಿ ಸಂವಹನ ಮಾಡಲು ಅವಕಾಶ ಒದಗಿಸುವ ಪ್ರಮುಖ ವೇದಿಕೆಯಾಗಿದೆ. ಇತ್ತೀಚಿನ ಡಿಜಿಟಲ್ ಉತ್ಪನ್ನಗಳನ್ನು ಪ್ರದರ್ಶಿಸಲಾಗಿದ್ದು, ಕಾರ್ಯಕ್ರಮದಲ್ಲಿ ಟ್ರಕ್ ಉತ್ಪನ್ನಗಳ ಶ್ರೇಣಿ ಮತ್ತು ಮೌಲ್ಯವರ್ಧಿತ ಸೇವೆಗಳನ್ನು ಪ್ರದರ್ಶಿಸಲಾಗಿದೆ.

ಜೊತೆಗೆ ಗ್ರಾಹಕರಿಗೆ ದೀರ್ಘಕಾಲೀನ ಲಾಭದಾಯಕತೆ ಮತ್ತು ಯಶಸ್ಸನ್ನು ಉಂಟು ಮಾಡಲು ಹಲವು ಸೌಲಭ್ಯಗಳನ್ನು, ಮಾಹಿತಿಗಳನ್ನು ನೀಡಲಾಗಿದೆ. ನಮ್ಮ ಅತ್ಯಾಧುನಿಕ ಉತ್ಪನ್ನಗಳನ್ನು ಗ್ರಾಹಕರ ಉದ್ಯಮವು ಭವಿಷ್ಯಕ್ಕೆ ಸಿದ್ಧಗೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಅವರು ಬೆಳೆಯುತ್ತಿರುವ ಈ ಜಗತ್ತಿನಲ್ಲಿ ಮುಂದೆ ಇರುವಂತೆ ನೋಡಿಕೊಳ್ಳುತ್ತದೆ ಎಂದು ಹೇಳಿದರು.

ಗ್ರಾಹಕರ ಬೇಡಿಕೆಗೆ ಅನುಗುಣವಾದ ಟ್ರಕ್:

ಎಲ್‌ಪಿಟಿ, ಅಲ್ಟ್ರಾ, ಸಿಗ್ನಾ ಮತ್ತು ಪ್ರೈಮಾ ಸೇರಿದಂತೆ ಹಲವು ರೀತಿಯ ಕ್ಯಾಬಿನ್ ಆಯ್ಕೆಗಳುಳ್ಳ ವ್ಯಾಪಕ ಶ್ರೇಣಿಯ ಟ್ರಕ್‌ ಗಳನ್ನು ಟಾಟಾ ಮೋಟಾರ್ಸ್ ನೀಡುತ್ತದೆ. ಮಾರ್ಕೆಟ್ ಸರಕು, ಕೃಷಿ, ಸಿಮೆಂಟ್, ಕಬ್ಬಿಣ ಮತ್ತು ಉಕ್ಕು, ಕಂಟೇನರ್, ಪೆಟ್ರೋಲಿಯಂ, ರಾಸಾಯನಿಕ, ನೀರಿನ ಟ್ಯಾಂಕರ್‌ಗಳು, ಎಲ್‌ಪಿಜಿ, ಎಫ್‌ಎಂಸಿಜಿ, ನಿರ್ಮಾಣ, ಗಣಿಗಾರಿಕೆ, ಪುರಸಭೆ ಕಾರ್ಯಾಚರಣೆ ಸೇರಿದಂತೆ ಸರಕು ಸಾಗಣಿಕಾ ಕ್ಷೇತ್ರದ ವೈವಿಧ್ಯಮಯ ಬೇಡಿಕೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಸಂಪೂರ್ಣ ನಿರ್ಮಿತ ಟ್ರಕ್‌ ಗಳು ಲಭ್ಯವಿವೆ.

ಈ ಉತ್ಪನ್ನ ಶ್ರೇಣಿಯು ಫ್ಲೀಟ್ ಎಡ್ಜ್ ಅನ್ನು ಹೊಂದಿದ್ದು, ಅದು ಉತ್ಪನ್ನಗಳ ಸಮರ್ಥ ನಿರ್ವಹಣೆಗಾಗಿ ಇರುವ ಟಾಟಾ ಮೋಟಾರ್ಸ್ ನ ಸಂಪರ್ಕಿತ ವಾಹನ ವೇದಿಕೆ ಆಗಿದೆ. ಹೆಚ್ಚು ಬಾಳಿಕೆ ಬರಲು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ವಿನ್ಯಾಸ ಮಾಡಲಾಗಿದೆ ಮತ್ತು ನಿರ್ದಿಷ್ಟ ಗ್ರಾಹಕರ ಅಗತ್ಯಗಳನ್ನು ಪೂರೈಸುವಂತೆ ಅಭಿವೃದ್ಧಿ ಪಡಿಸಲಾಗಿದೆ.

ಈ ವಾಹನಗಳು ಟಾಟಾ ಮೋಟಾರ್ಸ್‌ ನ ವ್ಯಾಪಕ ನೆಟ್‌ ವರ್ಕ್‌ ನ ನೆರವನ್ನು ಪಡೆಯಬಹುದಾಗಿದ್ದು, ಕರ್ನಾಟಕದಲ್ಲಿ 146 ಸೇರಿದಂತೆ ರಾಷ್ಟ್ರವ್ಯಾಪಿ 2500ಕ್ಕೂ ಹೆಚ್ಚು ಟಾಟಾ ಮೋಟಾರ್ಸೋ ಮಾರಾಟ ಮತ್ತು ಸೇವಾ ಕೇಂದ್ರಗಳಲ್ಲಿ ಗ್ರಾಹಕರು ನೆರವನ್ನು ಪಡೆಯಬಹುದಾಗಿದೆ.


Share It

You cannot copy content of this page