ಉಪಯುಕ್ತ ಸುದ್ದಿ

ವಾಯವ್ಯ ರಸ್ತೆ ಸಾರಿಗೆ ವ್ಯಾಪ್ತಿಯ ಸಾವಳಗಿ, ರಬಕವಿ-ಬನಹಟ್ಟಿ ಬಸ್ ನಿಲ್ದಾಣ ಉದ್ಘಾಟನೆ ಮಾಡಿದ ಸಚಿವ ರಾಮಲಿಂಗಾ ರೆಡ್ಡಿ

Share It

ಬಾಗಲಕೋಟ: ಸಾವಳಗಿ, ರಬಕವಿ-ಬನಹಟ್ಟಿ ಬಸ್ ನಿಲ್ದಾಣಗಳನ್ನು ಸಾರಿಗೆ ಹಾಗೂ ‌ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಾಕರಸಾ ಸಂಸ್ಥೆಯಲ್ಲಿ ಚಾಲನಾ ಸಿಬ್ಬಂದಿ ಕೊರತೆ ಇದ್ದು, 2000 ಚಾಲನಾ ಸಿಬ್ಬಂದಿ ನೇಮಕಕ್ಕೆ ಅನುಮೋದನೆ ‌ನೀಡಿಲಾಗಿದೆ. ಈಗಾಗಲೇ 1000 ಜನರ ನೇಮಕಾತಿ ‌ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.

ನಾನು ಈ ಹಿಂದೆ ಸಾರಿಗೆ ಮಂತ್ರಿಯಾಗಿದ್ದ ಸಮಯದಲ್ಲಿ ನವನಗರ, ಜಮಖಂಡಿ, ತೇರದಾಳ, ಬಾದಾಮಿ, ಹುನಗುಂದ, ಬಾಡಗಂಡಿ, ಹಾಗೂ ಯಡಹಳ್ಳಿ ನೂತನ ಬಸ್ ನಿಲ್ದಾಣಗಳ ನಿರ್ಮಾಣ ಮಾಡಲಾಗಿತ್ತು. ಬಾಗಲಕೋಟೆ ಜಿಲ್ಲೆಯಲ್ಲಿ ಅತೀ ಹೆಚ್ಚಿನ ‌ಬಸ್ ನಿಲ್ದಾಣಗಳನ್ನು ನಿರ್ಮಿಸಿದ್ದೇವೆ ಎಂದರು.

ಕಳೆದ 5 ವರ್ಷಗಳಿಂದ ‌ಹೊಸ ಬಸ್ಸುಗಳ ಖರೀದಿ ಇರಲಿಲ್ಲ. ಈಗ‌ ನಮ್ಮ‌ ಸರ್ಕಾರ ಬಂದ ಮೇಲೆ ಹೊಸ ಬಸ್ಸುಗಳನ್ನು ಖರೀದಿ ಮಾಡಿದ್ದೇವೆ.

ಅಲ್ಲದೇ, ಸಾವಳಗಿ‌ ಗ್ರಾಮದ 31 ವರ್ಷಗಳ ಕನಸು ಈ ನೂತನ ಬಸ್ ನಿಲ್ದಾಣ ಇಂದು ಉದ್ಘಾಟನೆ ಮಾಡಿದ್ದೇವೆ. ಜೊತೆಗೆ ಶಿಥಿಲಾವಸ್ಥೆಯಲ್ಲಿದ್ದ ಹಳೆಯ ರಬಕವಿ ಮತ್ತು ಬನಹಟ್ಟಿ ಬಸ್ ನಿಲ್ದಾಣಗಳನ್ನು ತೆರವುಗೊಳಿಸಿ, ನೂತನವಾಗಿ ರಬಕವಿ ಮತ್ತು ಬನಹಟ್ಟಿ ಬಸ್ ನಿಲ್ದಾಣಗಳನ್ನೂ ಉದ್ಘಾಟನೆ ಮಾಡಿದ್ದೇವೆ ಎಂದು ತಿಳಿಸಿದರು.

ಈ ಭಾಗದಿಂದ ಬೆಂಗಳೂರಿಗೆ ಪಲ್ಲಕ್ಕಿ‌ ಬಸ್ಸುಗಳ ಬೇಡಿಕೆ‌ ಇದ್ದು, ಸದ್ಯ KSRTC ಯಲ್ಲಿ ‌ಮಾತ್ರ ಪಲ್ಲಕ್ಕಿ‌ ಬಸ್ಸುಗಳ ಖರೀದಿ ‌ಇದ್ದು, KSRTC ಬೆಂಗಳೂರಿನಿಂದಲೇ ಈ ಭಾಗಕ್ಕೆ ಪಲ್ಲಕ್ಕಿ ಬಸ್ಸುಗಳ ಕಾರ್ಯಾಚರಣಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ KSRTC ಕಾರ್ಮಿಕ‌ ಸಂಘಟನೆ ಸಲ್ಲಿಸಿದ‌ ಮನವಿ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಅಬಕಾರಿ ಸಚಿವ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ಭರಮಗೌಡ ಕಾಗೆ, ಶಾಸಕ ಸಿದ್ದು ಸವದಿ, ಜಗದೀಶ್ ಎಸ್ ಗುಡುಗುಂಟಿ ಮಾನ್ಯ ಶಾಸಕರು, ಮಾಜಿ ಶಾಸಕ ಆನಂದ್‌ ನ್ಯಾಮಗೌಡ ಭಾಗವಹಿಸಿದ್ದರು.


Share It

You cannot copy content of this page