ಅಪರಾಧ ಸುದ್ದಿ

ಹಾಡುಹಗಲೇ ಮನೆಗೆ ನುಗ್ಗಿ ಅಪ್ರಾಪ್ತೆ ಮೇಲೆ ಅತ್ಯಾಚಾರ: ತಂದೆ ಕೊಡುವ ಹಣಕ್ಕೆ ಬಾಲಕಿ ಮೇಲೆ ದೌರ್ಜನ್ಯ

Share It

ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಯನ್ನು ಬಂಧಿಸಿದಿ ಮಾದನಾಯಕನಹಳ್ಳಿ ಪೊಲೀಸರು
ಬೆಂಗಳೂರು: ಅಪ್ರಾಪ್ತೆಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಆರೋಪಿಯೊಬ್ಬನನ್ನು ಬೆಂಗಳೂರು ಉತ್ತ ವಿಭಾಗದ ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ರವಿಕುಮಾರ್ (39) ಎಂಬಾತ ಬಾಲಕಿಯೊಬ್ಬಳ್ಳನ್ನು ಮನೆಗೆ ನುಗ್ಗಿ ಅತ್ಯಾಚಾರ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಬಾಲಕಿಯ ತಂದೆ ಆರೋಪಿಯಿಂದ ೭೦ ಸಾವಿರ ರು. ಸಾಲ ಪಡೆದಿದ್ದರು, ಈ ಮೊದಲೇ ಆರೋಪಿಗೆ ೩೦ ಸಾವಿರ ಹಣ ವಾಪಸ್ ನೀಡಿದ್ದರೂ, ಬಡ್ಡಿ ಮತ್ತು ಚಕ್ರಬಡ್ಡಿ ರೂಪದಲ್ಲಿ ಅವರಿಂದ ೪೦ ರು. ಕೊಡುವಂತೆ ಆರೋಪಿ ಪೀಡಿಸುತ್ತಿದ್ದ. ಹಣ ಕೊಡದಿರುವ ಕಾರಣಕ್ಕೆ ಮಗಳ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ.

ಈ ಸಂಬAಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಫಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಬಾಲಕಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.

ಆರೋಪಿ ಹಣ ಕೊಡಿಸುವಂತೆ ಬಾಲಕಿಯ ತಂದೆಗೆ ಪೀಡಿಸುವುದರ ಜತೆಗೆ, ಮನೆಯಲ್ಲಿದ್ದ ಬಾಲಕಿಯ ಮೇಲೆ ಈ ಹಿಂದೆಯೂ ದೌರ್ಜನ್ಯ ಎಸಗಿದ್ದ. ಒಮ್ಮೆ ಹಣ ಕೇಳಲು ಬಂದು ಬಲವಂತವಾಗಿ ಬಾಲಕಿಗೆ ಕಿಸ್ ಕೊಟ್ಟಿದ್ದ, ಅದನ್ನು ಫೋಟೋ ತೆಗೆದುಕೊಂಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸುತ್ತಿದ್ದ, ಅನಂತರ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಅತ್ಯಾಚಾರ ನಡೆಸಿದ್ದಾನೆ ಎಂದು ದೂರು ನೀಡಲಾಗಿದೆ.


Share It

You cannot copy content of this page