ಉಪಯುಕ್ತ ಸುದ್ದಿ

ಭಾರತೀಯರಿಗೆ ಸಿಕ್ತು ಅರಬ್ ‘ವೀಸಾ ಆನ್ ಅರೈವಲ್’

Share It

ಭಾರತದ ಪ್ರವಾಸಿಗರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಭೇಟಿ ನೀಡಲು ಸುಲಭ ವೀಸಾ ಜಾರಿಗೆ ತರಲಾಗಿದೆ. ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ನಡುವೆ ಉತ್ತಮ ಸಂಬಂಧ ಏರ್ಪಡಲು ಸಹಾಯವಾಗಲಿದೆ ಎಂದು ವರದಿಗಳು ತಿಳಿಸಿವೆ.

ಪಾಸ್ ಪೋರ್ಟ್ ಹೊಂದಿರುವ ಎಲ್ಲಾ ಭಾರತೀಯರು ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಭೇಟಿ ನೀಡಲು ಅರ್ಹರಾಗಿರುತ್ತಾರೆ.

ಹೊಸ ನಿಯಮದ ಪ್ರಕಾರ ಭಾರತೀಯರು ಪಾಸ್ ಪೋರ್ಟ್ ಹೊಂದಿದ್ದರೆ, ಯಾವುದೇ ಯುರೋಪಿಯನ್ ರಾಷ್ಟ್ರದಿಂದ ಶಾಶ್ವತ ವೀಸಾ ಅಥವಾ ಹಸಿರು ಕಾರ್ಡ್ ಹೊಂದಿರುವವರು ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಭೇಟಿ ನೀಡಬಹುದಾಗಿದೆ.

ನಿಯಮದ ಪ್ರಕಾರ ಎರಡು ರೀತಿಯ ವೀಸಾಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ನೀಡಲಿದೆ. 14 ದಿನಗಳ ವೀಸಾ ವನ್ನು ಪಡೆಯಬುದು. ಅದನ್ನು 14 ದಿನಗಳ ವರೆಗೆ ವಿಸ್ತರಣೆ ಮಾಡಬಹುದು. ಇದು ತಾತ್ಕಾಲಿಕ ವೀಸಾ ವಾಗಿರುತ್ತದೆ. ಇನ್ನು ಎರಡನೆಯದು 60 ದಿನಗಳ ಪೂರ್ಣ ವೀಸಾ ವನ್ನು ಪಡೆಯಬಹುದಾಗಿದೆ.

ಇದಕ್ಕೆ ನಿಗದಿತ ಶುಲ್ಕವನ್ನು ಪಾವತಿಸಬೇಕು. ವೀಸಾ-ಆನ್-ಅರೈವಲ್ ಸೌಲಭ್ಯಕ್ಕೆ ಅರ್ಹತೆ ಪಡೆಯಲು, ಅಕ್ಟೋಬರ್ 17 ರಿಂದ ಪಾಸ್‌ಪೋರ್ಟ್‌ಗಳು ಅಥವಾ ಪ್ರವೇಶದ ದಿನಾಂಕದಿಂದ ಕನಿಷ್ಠ ಆರು ತಿಂಗಳವರೆಗೆ ಮಾನ್ಯವಾಗಿರಬೇಕು.

ದುಬೈಗೆ ಭಾರತವು ಪ್ರವಾಸಿಗರ ಪ್ರಮುಖ ಮೂಲವಾಗಿದೆ. 2023 ರಲ್ಲಿ ಭಾರತದಿಂದ 2.46 ಮಿಲಿಯನ್ ಅರಬ್ ಸ್ವಾಗತಿಸಿತ್ತು. ಇದು ಸಾಂಕ್ರಾಮಿಕ-ಪೂರ್ವ ಮಟ್ಟಗಳಿಗೆ ಹೋಲಿಸಿದರೆ ಗಮನಾರ್ಹ 25% ಹೆಚ್ಚಾಗಿದೆ. ಫೆಬ್ರವರಿ 22 ರಂದು ನಗರ-ರಾಜ್ಯ ಆರ್ಥಿಕ ಮತ್ತು ಪ್ರವಾಸೋದ್ಯಮ ಇಲಾಖೆ ಪ್ರಕಾರ, ಭಾರತೀಯ ಪ್ರವಾಸಿಗರ ಈ ಉಲ್ಬಣವು ದುಬೈನ ಪ್ರವಾಸೋದ್ಯಮ ಉದ್ಯಮಕ್ಕೆ ಭಾರತವನ್ನು ನಂಬರ್ ಒನ್ ಮೂಲ ಮಾರುಕಟ್ಟೆಯಾಗಿದೆ ಎಂದು ತಿಳಿಸಿದೆ.

ಈ ಹೊಸ ವೀಸಾ ನೀತಿಗಳೊಂದಿಗೆ, ಯುಎಇ ಇನ್ನೂ ಹೆಚ್ಚಿನ ಭಾರತೀಯ ಪ್ರವಾಸಿಗರನ್ನು ಆಕರ್ಷಿಸಲು ಸಿದ್ಧವಾಗಿದೆ. ಮುಂಬರುವ ವರ್ಷಗಳಲ್ಲಿ, ಎರಡು ರಾಷ್ಟ್ರಗಳ ನಡುವಿನ ಸಾಂಸ್ಕೃತಿಕ ಮತ್ತು ಆರ್ಥಿಕ ಬಂಧಗಳನ್ನು ಬಲಪಡಿಸುತ್ತದೆ.


Share It

You cannot copy content of this page