ಫ್ಯಾಷನ್ ಸಿನಿಮಾ ಸುದ್ದಿ

ರುಚಿಸಲಿಲ್ಲ ಬಿಗ್ ಬಾಸ್ ವೀಕ್ಷಕರಿಗೆ ಕಿಚ್ಚನಿಲ್ಲದ ವೀಕೆಂಡ್ !

Share It


ಬೆಂಗಳೂರು: ಕನ್ನಡ ಬಿಗ್ ಬಾಸ್ ಸುದೀಪ್ ನಿರೂಪಣೆಯಿಂದ ಮಾಡಿದಷ್ಟು ಸದ್ದನ್ನು ಬೇರೆ ವಿಚಾರದಲ್ಲಿ ಮಾಡುವುದಿಲ್ಲ. 11 ಸೀಸನ್ ಸುದೀಪ್ ನೆರಳಲ್ಲಿ ಹರಳಿದೆ ಎಂದರೆ ತಪ್ಪಲ್ಲ.

ಸುದೀಪ್ ತಾಯಿ ಇತ್ತೀಚೆಗೆ ನಿಧನರಾಗಿರುವುದು ನಮಗೆಲ್ಲ ಗೊತ್ತೇ ಇದೆ‌. ಇದೇ ಕಾರಣಕ್ಕೆ ಅವರು ಈ ವಾರದ ವೀಕೆಂಡ್ ಶೋ ನಡೆಸಲಿಲ್ಲ. ಇದು ಸಹಜವಾಗಿಯೇ ಕನ್ನಡದ ವೀಕ್ಷಕರಿಗೆ ಬೇಸರ ತರಿಸಿದೆ.

ಜಗದೀಶ್ ಮತ್ತು ರಂಜಿತ್ ಮನೆಯಿಂದ ಹೊರಬಂದ ಕುರಿತು ಇಡೀ ಮನೆಗೆ ಕ್ಲಾಸ್ ತೆಗೆದುಕೊಂಡಾಗಲೇ ಸುದೀಪ್ ಅವರಿಗೆ ತಾಯಿಯ ಸಾವಿನ ಸುದ್ದಿ ಬಂದಿತ್ತು. ಈ ನೋವಿನಲ್ಲೂ ಕಳೆದ ವಾರದ ಶೋ ಮುಗಿಸಿ ಬಂದಿದ್ದರು ಕಿಚ್ಚ ಸುದೀಪ್.

ಆದರೆ, ಚೈತ್ರಾ ಕುಂದಾಪುರ, ಸುದೀಪ್ ಸರ್ ಜಗದೀಶ್ ಪರ ಮಾತನಾಡಿದರು ಎಂಬರ್ಥದಲ್ಲಿ ಮಾತನಾಡಿ, ಸುದೀಪ್ ಮತ್ತು ಬಿಗ್ ಬಾಸ್ ಮನೆಯನ್ನೇ ಅನುಮಾನದಿಂದ ನೋಡುವಂತೆ ಮಾಡಿದ್ದರು. ಇದನ್ನು ವೀಕೆಂಡ್ ನಲ್ಲಿ ಬಂದ ಯೋಗರಾಜ್ ಭಟ್ ಮನೆಮಂದಿಗೆ ತಿಳಿಸಿ ತರಾಟೆ ತೆಗೆದುಕೊಂಡರು.

ಹೊರಗೆ ಜನ, ವೀಕ್ಷಕರು ಮಾತನಾಡುವುದನ್ನು ಮನೆಯಲ್ಲಿರುವವರಿಗೆ ಅರ್ಥವಾಗುವಂತೆ ಹೇಳಿ ಮನವರಿಕೆ ಮಾಡಿಕೊಡುವುದು ಸುದೀಪ್ ಅವರ ಕರ್ತವ್ಯ. ಕಳೆದ ವಾರ ಜಗದೀಶ್ ಬಗ್ಗೆ ಇಡೀ ರಾಜ್ಯ ಮಾತನಾಡಿಕೊಂಡಿದ್ದು, ಜಗದೀಶ್ ಗೆ ಇಡೀ ಮನೆ ಕೊಟ್ಟ ಕಾಟವನ್ನು ಸ್ಪರ್ಧಿಗಳ ಮುಂದಿಟ್ಟಿದ್ದರು.

ಸುದೀಪ್ ಅವರ ಕಾಳಜಿಯನ್ನು ಅರ್ಥ ಮಾಡಿಕೊಳ್ಳದ ಸ್ಪರ್ಧಿಗಳು ಅವರ ವಿರುದ್ಧವೇ ಮಾತನಾಡಿದ್ದಾರೆ. ಆ ಮೂಲಕ ತಾವು ಬದಲಾಗುವುದಿಲ್ಲ ಎಂಬ ಸಂದೇಶ ಕೊಟ್ಟಿದ್ದಾರೆ. ಈ ಸಲದ ಸ್ಒರ್ಧಿಗಳ ಪೈಕಿ ಅಷ್ಟೊಂದು ಯಾರೂ ಗಮನ ಸೆಳೆಯುತ್ತಿಲ್ಲ. ಜಗದೀಶ್ ಹೊರಬಂದ ನಂತರ ಟಿಆರ್ ಪಿ ಕಡಿಮೆಯಾಗಿದೆ ಎಂಬ ಮಾಹಿತಿಯಿದೆ.

ವೀಕ್ಷಕರು ಯಾರೊಬ್ಬ ಸ್ಪರ್ಧಿಯನ್ನು ಮೆಚ್ಚುತ್ತಿಲ್ಲ. ಇನ್ನೂ ಇದೇ ಕಾರಣಕ್ಕೆ ಸೆಲಿಬ್ರಿಟಿಗಳನ್ನು ಒಳಗೆ ಕಳುಹಿಸಿ ಟಿಆರ್ ಪಿ ಹೆಚ್ಚಿಸುವ ಪ್ರಯತ್ನ ನಡೆದರೂ, ಆ ಪ್ರಯತ್ನ ಠುಸ್ಸ್ ಆಗಿದೆ. ಹನುಮಂತ ಸ್ಪರ್ಧಿಯಾದಾಗ ಸ್ವಲ್ಪ ನಿರೀಕ್ಷೆ ಇತ್ತು. ಮನೆ ಮಂದಿ ಅವನನ್ನು ಟಾರ್ಗೆಟ್ ಮಾಡುತ್ತಿದ್ದು, ವೀಕ್ಷಕರ ಕೋಪಕ್ಕೆ ಕಾರಣವಾಗಿದೆ.

ಈ ನಡುವೆ ವಾರದ ಎಲಿಮಿನೇಷನ್ ಪೂರ್ಣಗೊಂಡಿದ್ದು, ಹಂಸಾ ಮನೆಯಿಂದ ಹೊರಬಂದಿದ್ದಾರೆ. ಮೊದಲ ವಾರವೇ ಹೊರಬರುವ ಸ್ಥಿತಿಗರ ತಲುಪಿದ್ದ ಹಂಸ ಜಗದೀಶ್ ಜೋಡಿಯಾಗಿ ಎರಡನೇ ವಾರ ಕಮಾಲ್ ಮಾಡಿದ್ದರು.

ಮತ್ತೇ ಅವರ ವಿರುದ್ಧ ಮಾತನಾಡಿ, ಅವರಿಂದ ದೂರವಾಗಿ ಜಗಳಕ್ಕೆ ಕಾರಣವಾಗಿದ್ದರು. ಅನಂತರ ಹಂಸಾ ಅವರ ಗ್ರಾಫ್ ಮೇಲೇಳಲೇ ಇಲ್ಲ. ಇದು ಕೊನೆಗೆ ಮನೆಯಿಂದ ಹೊರಬರುವ ಹಂತಕ್ಕೆ ತಂದು ನಿಲ್ಲಿಸಿದೆ. ಕೊನೆಯ ಕ್ಷಣದಲ್ಲಿ ಬಚಾವಾದ ಮೋಕ್ಷಿತಾ ಇವತ್ತಿಂದ ಆಟ ಶುರು ಎಂದು ಚಾಲೆಂಜ್ ಮಾಡಿದ್ದು ಅದೇನ್ ಮಾಡ್ತಾರೋ ಕಾದು ನೋಡಬೇಕಿದೆ.


Share It

You cannot copy content of this page