ಬೆಂಗಳೂರು: ನೀರಿನಲ್ಲಿ ಆಟವಾಡಿದ್ದಕ್ಕೆ ಶಿಕ್ಷಕಿ ವಿದ್ಯಾರ್ಥಿಗೆ ಹೊಡೆದು ಹಲ್ಲು ಮುರಿದಿರುವ ಘಟನೆ ಜಯನಗರದ ಹೋಲಿ ಕ್ರಿಸ್ಟ್ ಶಾಲೆಯಲ್ಲಿ ನಡೆದಿದೆ.
ಜಯನಗರದ ಹೋಲಿ ಕ್ರಿಸ್ಟ್ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿರುವ ಅಶ್ವಿನ್ ಎಂಬ ವಿದ್ಯಾರ್ಥಿ ಗುರುವಾರ ಮಧ್ಯಾಹ್ನ ಊಟದ ಸಮಯದಲ್ಲಿ ನೀರಿನಲ್ಲಿ ಆಟವಾಡುತ್ತಿದ್ದ. ಇದರಿಂದ ಕೋಪಗೊಂಡ ಹಿಂದಿ ವಿಷಯ ಶಿಕ್ಷಕಿ ಅಜ್ಮತ್ ವಿದ್ಯಾರ್ಥಿ ಅಶ್ವಿನ್ ಮುಖಕ್ಕೆ ಕಟ್ಟಿಗೆಯಿಂದ ಹೊಡೆದಿದ್ದಾರೆ. ಇದರಿಂದ ವಿದ್ಯಾರ್ಥಿ ಅಶ್ವಿನ್ನ ಹಲ್ಲು ಮುರಿದಿದೆ.
ಶಿಕ್ಷಕಿ ಅಜ್ಮತ್ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಶಿಕ್ಷಕಿ ಅಜ್ಮತ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ. ಅಶ್ವಿನ್ ಪೋಷಕರು ಶಿಕ್ಷಕಿ ಅಜ್ಮತ್ಗೆ ನೋಟಿಸ್ ನೀಡಿದ್ದಾರೆ. ವಿದ್ಯಾರ್ಥಿ ಅಶ್ವಿನ್ನನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಹಿಂದೆ ಅಶ್ವಿನ್ನ ತಂಗಿಗು ಕೂಡ ಹೊಡೆದಿದ್ದು, ಕೈ ಊದಿಕೊಂಡಿತ್ತು. ಆಗ, ಶಾಲಾ ಆಡಳಿತ ಮಂಡಳಿ ಕ್ಷಮಾಪಣೆ ಪತ್ರ ಬರೆದು ಕೊಟ್ಟಿದ್ದರು. ಇದೀಗ ಅದೇ ಶಿಕ್ಷಕಿಯಿಂದ ಮತ್ತೊಂದು ಹಲ್ಲೆ ಪ್ರಕರಣ ನಡೆದಿದೆ.