ಬೆಂಗಳೂರು: ನಡುರಸ್ತೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.
ಮಾರ್ಚ್ 31 ರಂದು ಐವರು ಆರೋಪಿಗಳು ವ್ಯಕ್ತಿ ಒಬ್ಬರನ್ನು ನಡು ರಸ್ತೆಯಲ್ಲಿಯೇ ಮನಬಂದಂತೆ ಥಳಿಸಿದ್ದರು. ಆತನನ್ನು ರಸ್ತೆ ಹಾಕಿ ತುಳಿದು, ಆತನಿಂದ ಬ್ಯಾಗ್ ಕಿತ್ತುಕೊಂಡು, ಕಳೆಗೆ ಬಿದ್ದರೂ ಬಿಡದೆ, ಆತನ ಮೇಲೆ ಹತ್ತಿ ಕುಳಿತು ಗಾಯಗೊಳಿಸಿದ್ದರು.
ಹಾಡುಹಗಲೇ ನಡೆದ ಈ ಘಟನೆಯನ್ನು ಹಿಂದಿನ ಕಾರಿನಲ್ಲಿದ್ದ ಡ್ಯಾಶ್ ಬೋರ್ಡ್ ಕ್ಯಾಮೆರಾ ಸೆರೆಹಿಡಿದಿತ್ತು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಸಂಚಲನ ಸೃಷ್ಟಿಸಿತ್ತು.
ರಾಜಧಾನಿಯಲ್ಲಿ ಹೀಗೆ ಹಾಡುಹಗಲೇ ರೈಡಿಗಳು ಅಟ್ಟಹಾಸ ಮೆರೆದರೆ, ನಗರದ ಕಾನೂನು ಸುವ್ಯವಸ್ಥೆ ಹೇಗೆ? ಎಂದು ನೆಟ್ಟಿಗರು ಪೊಲೀಸರನ್ನು ಪ್ರಶ್ನೆ ಮಾಡಿದ್ದರು. ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು, ವಿಡಿಯೋ ಹಾಗೂ ಅಕ್ಕಪಕ್ಕದ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.