ಸುದ್ದಿ

80 ವರ್ಷದ ಮುದುಕನನ್ನು ಇಷ್ಟಪಟ್ಟು ಮದುವೆಯಾದ 34 ವರ್ಷದ ಯುವತಿ

Share It

80 ವರ್ಷದ ವ್ಯಕ್ತಿಯೊಬ್ಬ ಸೋಶಿಯಲ್​ ಮೀಡಿಯಾದ ಮೂಲಕ ಪರಿಚಯವಾದ ತನ್ನ 34 ವರ್ಷದ ಪ್ರೇಯಸಿಯನ್ನು ಮದುವೆಯಾಗಿರುವ ಘಟನೆ ಮಧ್ಯಪ್ರದೇಶದ ಅಗರ್ ಮಾಲ್ವಾದಲ್ಲಿ ನಡೆದಿದೆ. ಮಹಾರಾಷ್ಟ್ರದ ಶೀಲಾ (34) ಮತ್ತು ಮಧ್ಯಪ್ರದೇಶದ ಬಲುರಾಮ್(80) ವರ್ಷಗಳ ಹಿಂದೆ ಇನ್ಸ್ಟಾಗ್ರಾಮ್​ ಮೂಲಕ ಪರಿಚಯವಾಗಿದ್ದರು. 80ರ ಹರೆಯದಲ್ಲೂ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯರಾಗಿದ್ದ ಬಾಲುರಾಮ್ ತನ್ನ ಸ್ನೇಹಿತ ವಿಷ್ಣು ಗುಜ್ಜರ್ ಸಹಾಯದಿಂದ ಇನ್ಸ್ಟಾಗ್ರಾಮ್​​​ನಲ್ಲಿ ತಮಾಷೆಯ ವೀಡಿಯೊಗಳನ್ನು ಮಾಡಿ ಅಪ್‌ಲೋಡ್ ಮಾಡುತ್ತಿದ್ದರು. ಈತನ ಈ ತಮಾಷೆಯ ರೀಲ್ಸ್​​ಗೆ ಮನಸೋತ ಶೀಲಾ ಆತನಿಗೆ ಚಾಟ್​​ ಮಾಡಲು ಪ್ರಾರಂಭಿಸಿದ್ದಾಳೆ.

ಇನ್ಸ್ಟಾಗ್ರಾಮ್​ ಮೂಲಕ ಪ್ರಾರಂಭವಾದ ಮಾತು ಕತೆ ಕಡೆಗೆ ಪ್ರೀತಿಯಾಗಿ ತಿರುಗಿದ್ದು, ಇದೀಗಾ ಇವರಿಬ್ಬರ ಪ್ರೀತಿ ಮದುವೆ ಹಂತಕ್ಕೆ ಬಂದು ತಲುಪಿದೆ. ಸದ್ಯ ಇವರಿಬ್ಬರ ವಿಶಿಷ್ಟ ಪ್ರೇಮಕಥೆ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.

ಬಲುರಾಮ್‌ಗೆ ಒಬ್ಬ ಪುತ್ರ ಮತ್ತು ಮೂವರು ಪುತ್ರಿಯರಿದ್ದು, ನಾಲ್ಕು ಮಕ್ಕಳಿಗೂ ಮದುವೆಯಾಗಿದೆ. ಇದಲ್ಲದೇ ಇತ್ತೀಚೆಗಷ್ಟೇ ಬಲುರಾಮ್ ಪತ್ನಿ ಅನಾರೋಗ್ಯದಿಂದ ನಿಧನರಾಗಿದ್ದರು. ಹೆಂಡತಿಯ ಮರಣದ ನಂತರ, ತೀವ್ರ ಖಿನ್ನತೆಗೆ ಒಳಗಾಗಿದ್ದ ಬಲುರಾಮ್ ವಿಷ್ಣು ಗುಜ್ಜರ್ ಎಂಬ ವ್ಯಕ್ತಿ ಸಹಾಯದಿಂದ ಹೋಟೆಲ್‌ ಒಂದರಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅಲ್ಲಿಂದ ಇನ್ಸ್ಟಾಗ್ರಾಮ್​​ನಲ್ಲಿ ಸಕ್ರಿಯವಾಗಿದ್ದ ಬಲುರಾಮ್​​ ಹಾಸ್ಯಸ್ಪದ ವಿಡಿಯೋಗಳನ್ನು ಮಾಡಿ ಅಪ್ಲೋಡ್​​ ಮಾಡತೊಡಗಿದ್ದು, ಶೀಲಾರ ಪರಿಚಯವಾಗಿದೆ. ಏಪ್ರಿಲ್ 1 ರಂದು, ಹಿಂದೂ ಪದ್ಧತಿಯಂತೆ ಇವರಿಬ್ಬರ ಮದುವೆ ನೆರವೇರಿದೆ.


Share It

You cannot copy content of this page