ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಹೆಗ್ಗನಹಳ್ಳಿಯ ಅಂದ್ರಹಳ್ಳಿ ಮುಖ್ಯ ರಸ್ತೆಯ ಮಯೂರ ನಗರ ಗ್ರೌಂಡ್ ನಲ್ಲಿ 3ನೇ ವರ್ಷದ ಶ್ರೀ ರಾಮನವಮಿ ಜಯಂತಿಯನ್ನು ಹೆಸರುಬೇಳೆ, ಮಜ್ಜಿಗೆ, ಪಾನಕ ಹಾಗೂ ಅನ್ನದಾನ ವಿತರಿಸುವ ಮೂಲಕ ಆಚರಣೆ ಮಾಡಲಾಯಿತು.
ಈ ಕಾರ್ಯಕ್ರಮಕ್ಕೆ ಸೌಮ್ಯ ಪ್ಯಾಕೇಜಿಂಗ್ ಮಾಲಿಕ ಉಮೇಶ್, ತಿರುಮಲ ಇಂಜಿನಿಯರಿಂಗ್ ಮಾಲಿಕ ಸಿರಾಗೋವಿಂದರಾಜು, ಪರಿಣಿತಿ ಮೆಟಲ್ ನ ತಿರುಮೂರ್ತಿ, ನಂದಿ ಟೆಕ್ನಾಲಜಿ ರಮೇಶ್, ಗುಜರಿ ಕೃಷ್ಣಪ್ಪ ಆಗಮಿಸಿ ಶ್ರೀರಾಮನಿಗೆ ಪೂಜೆ ಸಲ್ಲಿಸಿ ಮಜ್ಜಿಗೆ ಹಾಗೂ ಪ್ರಸಾದ ವಿತರಣೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ರಾಜಮುಡಿ, ಮಧು, ರಮೇಶ್, ಅರುಣ್, ಸೂರಿ, ಎಚ್‌ಪಿ ಶಿವಣ್ಣ, ನಾಗರಾಜ್, ಗುಂಡ, ಜಗ,ಕಲ್ಕಿ, ಈಶ್ವರ್, ಮೋಹನ್, ಮಣಿ, ಶಿವಕುಮಾರ್, ರಂಗನಾಥ್, ಮಹೇಶ್, ಗೋವಿಂದರಾಜು, ಸೋಮನಾಥ್, ಸಿದ್ಧರಾಜು, ಬುಲೆಟ್, ಸತೀಶ್, ಪಾನಿಪುರಿ ರಾಮಣ್ಣ, ಆಟೋ ಸತೀಶ, ಬುಂದಿ ಮಂಜು, ಮಂಜುನಾಥ್, ಕಿರಣ್, ಶಶಿ ಸ್ವಾಮಿ, ಕಾರ್ತಿಕ್, ರಮೇಶ್, ಸಿದ್ಧ ಮುಂತಾದವರು, ಸಾರ್ವಜನಿಕರು ಮಹಿಳೆಯರು ಭಾಗವಹಿಸಿದ್ದರು.