ಅಪರಾಧ ಸುದ್ದಿ

ಕೆರೆಗೆ ಬಿದ್ದು ಇಬ್ಬರು ಸಾವು

Share It

ಹುಬ್ಬಳ್ಳಿ: ಬೇಸಿಗೆ ಬಿಸಲಿನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೆರೆಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ಇಬ್ಬರು ಯುವಕರು ಶವವಾಗಿ ಪತ್ತೆಯಾಗಿರುವ ಘಟನೆ ದೇವರಗುಡಿಹಾಳ ಗ್ರಾಮದಲ್ಲಿ ಶುಕ್ರವಾರ ಘಟನೆ ನಡೆದಿದೆ.

ಏಳು ಮಂದಿ ಸ್ನೇಹಿತರು ದೇವರಗುಡಿಹಾಳ ಕರೆಗೆ ಈಜಲು ತೆರಳಿದ್ದರು. ಇದರಲ್ಲಿ ಗದಗದ ದೀಪಕ್ ರೋಣದ(೨೧) ಮತ್ತು ವಿದ್ಯಾನಗರ ಲೋಕಪ್ಪನಹಕ್ಕಲ ನಿವಾಸಿ ಮೈಲಾರಿ (೨೪) ಮೃತಪಟ್ಟಿದ್ದಾರೆ. ಮೊದಲಿಗೆ ನವೀನ್ ಮೇಲಗೊಪ್ಪ, ಮುಜಾಮಿಲ್, ಅಕ್ಷಯ್, ರಜತ್, ಇಸಾಕ್ ಕೆರೆಗಿಳಿದು ಈಜಿ ಸುರಕ್ಷಿತವಾಗಿ ದಡ ಸೇರಿದ್ದಾರೆ.

ಆದರೆ ದೀಪಕ್ ಮತ್ತು ಮೈಲಾರಿ ಈಜುತ್ತಾ ಕೆರೆ ಮಧ್ಯೆ ಹೋಗಿ ವಾಪಸ್ ಬರುವಾಗ ಮುಳುಗಿದ್ದಾರೆ. ತಕ್ಷಣ ದಡಕ್ಕೆ ಬಂದಿದ್ದ ಸ್ನೇಹಿತರು ಅವರಿಗೆ ಹಗ್ಗ ನೀಡಲು ಮುಂದಾದರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ. ತಕ್ಷಣವೇ ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಹಾಗು ಸ್ಥಳೀಯರು ಇಬ್ಬರ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದರು.

ನಿನ್ನೆ ಬೆಳಗ್ಗೆ ೯ ಗಂಟೆಗೆ ಓರ್ವನ ಮೃತದೇಹ ಹಾಗು ೧೧ ಗಂಟೆಯ ವೇಳೆಗೆ ಮತ್ತೊಬ್ಬನ ಮೃತದೇಹಗಳು ದೊರೆತಿವೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share It

You cannot copy content of this page