ಅಪರಾಧ ರಾಜಕೀಯ ಸುದ್ದಿ

ಎಚ್.ಡಿ. ರೇವಣ್ಣ ಬಂಧನ: ಯೂ ಟರ್ನ್ ಹೊಡೆದ ಬಿಜೆಪಿ

Share It

ಬೆಂಗಳೂರು: ಎಚ್‌ಡಿ.ಡಿ.ರೇವಣ್ಣ ಅವರ ಬಂಧನವಾಗುತ್ತಿದ್ದAತೆ ಮೈತ್ರಿ ಪಕ್ಷ ಬಿಜೆಪಿ ಯೂಟರ್ನ್ ತೆಗೆದುಕೊಂಡಿದ್ದು, ಪ್ರಜ್ವಲ್ ಪ್ರಕರಣದ ಮುಜುಗರ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದೆ.

ಪ್ರಜ್ವಲ್ ಪೆನ್‌ಡ್ರೆöÊವ್ ಹೊರಬರುತ್ತಿದ್ದಂತೆ ಕಾಂಗ್ರೆಸ್ ನಾಯಕರು ಜೆಡಿಎಸ್ ವಿರುದ್ಧ ಮುಗಿಬಿದ್ದಿದ್ದರು. ಆದರೆ, ಮೈತ್ರಿಪಕ್ಷ ಬಿಜೆಪಿ ನಾಯಕರು ಗೊಂದಲಕ್ಕೊಳಗಾದರು. ಮೊದಮೊದಲು ಪೆನ್‌ಡ್ರೆöÊವ್ ನೂರು ರ‍್ತಾವೆ, ಇದಕ್ಕೆಲ್ಲ ಏನೂ ಮಾಡೋಕಾಗಲ್ಲ ಎಂಬರ್ಥದಲ್ಲಿ ಮಾತನಾಡಿದರು. ಆದರೆ, ಪ್ರರಕಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಇದೀಗ ಯೂಟರ್ನ್ ತೆಗೆದುಕೊಳ್ಳುತ್ತಿದ್ದಾರೆ. ಆ ಮೂಲಕ ಜೆಡಿಎಸ್ ಜತೆಗೆ ಅಂತರಕಾಯ್ದುಕೊಳ್ಳುವ ಪ್ರಯತ್ನ ನಡೆಯುತ್ತಿದೆ.

ಪೆನ್‌ಡ್ರೆöÊವ್ ಬಗ್ಗೆ ಮೊದಲಿಗೆ ಪ್ರತಿಕ್ರಿಯೆ ನೀಡಿದ್ದ ಬೊಮ್ಮಾಯಿ ಅವರು, ಇದೊಂದು ಫೇಕ್ ವಿಡಿಯೋ, ಚಾರಿತ್ರö್ಯ ಹರಣ ಮಾಡುವ ಉದ್ದೇಶದಿಂದ ಇಂತಹ ವಿಡಿಯೋಗಳನ್ನು ಬಿಡಲಾಗುತ್ತದೆ. ಈ ಬಗೆಗ ಸೂಕ್ತ ತನಿಖೆಯಾಗಬೇಕು ಎಂದು ತಿಳಿಸಿದ್ದರು. ಮೊದಮೊದಲಿಗೆ ಪ್ರಜ್ವಲ್ ರೇವಣ್ಣ ಅವರನ್ನು ಸಮರ್ಥನೆ ಮಾಡಿಕೊಳ್ಳುವ ರೀತಿಯಲ್ಲಿ ಮಾತನ್ನಾಡಿದ್ದರು.

ಪ್ರಹ್ಲಾದ್ ಜೋಷಿ ಅವರು, ರೇವಣ್ಣ ಮತ್ತು ಸಿದ್ದರಾಮಯ್ಯ ಸ್ನೇಹಿತರು, ಹೀಗಾಗಿ, ಪ್ರಜ್ವಲ್ ಅವರು ವಿದೇಶಕ್ಕೆ ತೆರಳಲು ಸಿದ್ದರಾಮಯ್ಯ ಅವರೇ ಸಹಕಾರ ನೀಡಿರಬಹುದು ಎಂದು ಹೇಳಿಕೆ ನೀಡಿದ್ದರು. ಆದರೆ, ಇದೀಗ ಎಚ್ಚೆತ್ತುಕೊಂಡಿರುವ ಜೋಷಿ, ಪ್ರಜ್ವಲ್ ರೇವಣ್ಣ ಅವರಿಗೆ ಶಿಕ್ಷೆಯಾಗಲೇಬೇಕು. ಹೆಣ್ಣು ಮಕ್ಕಳ ಮೇಲೆ ಇಂತಹ ದೌರ್ಜನ್ಯ ಎಸಗುವವರ ಮೇಲೆ ಸರಕಾರ ಯಾವುದೇ ಕಾರಣಕ್ಕೂ ಕಠಿಣ ಕ್ರಮವಹಿಸಬೇಕು ಎಂದು ಹೇಳಿದ್ದಾರೆ.

ಮೊದಮೊದಲಿಗೆ ಜೆಡಿಎಸ್ ಪರವಾಗಿಯೇ ಮಾತನ್ನಾಡುತ್ತಿದ್ದ ಆರ್.ಅಶೋಕ್, ಇದೀಗ ರೇವಣ್ಣ ಬಂಧನಕ್ಕೆ ಆಗ್ರಹಿಸುತ್ತಿದ್ದಾರೆ. ಆ ಮೂಲಕ ಬಿಜೆಪಿ ಮುಜುಗರ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಪ್ರಜ್ವಲ್ ಪ್ರಕರಣದಲ್ಲಿ ಬಿಜೆಪಿ ಮೊದಮೊದಲು ಬೇರೆಯದ್ದೇ ಲೆಕ್ಕಾಚಾರದಲ್ಲಿತ್ತು. ಬರೀ ವಿಡಿಯೋ ವೈರಲ್ ಆಗಿ, ತನಿಖೆಗೆ ವಹಿಸಿದರೆ ಅದು ತಣ್ಣಗಾಗುತ್ತದೆ ಎಂದುಕೊAಡಿತ್ತು. ಹೀಗಾಗಿ, ಮೈತ್ರಿ ಬಗ್ಗೆ ಸಾಫ್ಟ್ ಆಗಿಯೇ ನಾಯಕರು ಪ್ರತಿಕ್ರಿಯೆ ನೀಡುತ್ತಿದ್ದರು.

ರೇವಣ್ಣ ಮತ್ತು ಪ್ರಜ್ವಲ್ ಮೇಲೆ ದೂರು ದಾಖಲಾಗಿದ್ದು, ನಂತರ ಸಂಸ್ತçಸ್ತ ಮಹಿಳೆಯಿಂದ ದಾಖಲಾದ ದೂರು, ಕೆ.ಆರ್.ನಗರದ ಮಹಿಳೆಯ ಅಪಹರಣ ಪ್ರಕರಣಗಳೆಲ್ಲವೂ ಪೆನ್‌ಡ್ರೆöÊವ್ ಪ್ರಕರಣದ ದಿಕ್ಕು ಬದಲಿಸಿದವು. ಇದು ಸಹಜವಾಗಿಯೇ ಬಿಜೆಪಿಗೆ ಮಾತಿಲ್ಲದಂತೆ ಮಾಡಿದೆ. ಹೀಗಾಗಿ, ಮುಂದೆ ಆಗುವ ಮುಜುಗರವನ್ನಾದರೂ ತಪ್ಪಿಸಿಕೊಳ್ಳಬೇಕೆಂದು ಬಿಜೆಪಿ ತೀರ್ಮಾನಿಸಿದ್ದು, ಪ್ರಜ್ವಲ್ ವಿರುದ್ಧ ಹೇಳಿಕೆಗಳನ್ನು ನೀಡಲು ಆರಂಭಿಸಿದ್ದಾರೆ. ಜತೆಗೆ ಪ್ರಕರಣದ ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.


Share It

You cannot copy content of this page