ರಾಜಕೀಯ ಸುದ್ದಿ

ಟ್ವೀಟ್ ಮಾಡಿ ಮರ್ಯಾದೆ ತೆಗೆದುಕೊಳ್ಳುವುದರಲ್ಲೇ ಬಿಜೆಪಿ ನಾಯಕರಿಗೆ ಬಹಳ ಖುಷಿ’

Share It

ಬೆಂಗಳೂರು: ಬಿಜೆಪಿ ನಾಯಕರಿಗೆ ಟ್ಟೀಟ್ ಮಾಡಿ, ಅದಕ್ಕೆ ನಾವು ಪ್ರತ್ಯುತ್ತರ ಕೊಟ್ಟು‌ ಅವರ ದುರಾಡಳಿತದ ABCD ವಿವರಿಸಿ ಮಾನ ಮಾರ್ಯಾದೆ ತೆಗೆದರೆ ಮಾತ್ರ ಅವರಿಗೆ ತಿಂದದ್ದು‌ ಜೀರ್ಣವಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಟೀಕಿಸಿದ್ದಾರೆ.

ಆಡಳಿತದಲ್ಲಿ ಕೆಲವೊಂದು ಪದಗಳನ್ನು ವಿಷಯಾನುಸಾರ‌ ಪ್ರಯೋಗ ಮಾಡುತ್ತಾರೆ
ಉದಾ: ತಿಳುವಳಿಕೆ, ಮನವಿ, ಆದೇಶ, ಎಚ್ಚರಿಕೆ, ಕ್ರಮ ಹೀಗೆ. ಇದ್ಯಾವುದರ ಅರಿವಿಲ್ಲದ ಬಿಜೆಪಿ ಅವರ ಸಾಮಾಜಿಕ‌ ಜಾಲತಾಣ ನಿರ್ವಹಿಸುವ ಎಳಸುಗಳು ಕೂತರೆ ಟ್ಟೀಟ್, ‌ನಿಂತರೆ ಟ್ಟೀಟ್‌‌ ಮಾಡಿ ಅವರ ಜ್ಞಾನದ ಪರಮಾವಧಿಯನ್ನು ಜಗಜಾಹ್ಹೀರು  ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಸರ್ವಾಧಿಕಾರಿಗಳು ನಾವಲ್ಲ, 2021ರ ನಿಮ್ಮ ಬಿಜೆಪಿ‌ ಆಡಳಿತದ ಅವಧಿಯಲ್ಲಿ ಸಾರಿಗೆ ನಿಗಮಗಳ 1624 ಸಿಬ್ಬಂದಿಗಳನ್ನು ಅಮಾನತ್ತಲ್ಲ,‌‌ ಕೆಲಸದಿಂದ ವಜಾ ಮಾಡಿ, ನೂರಾರು ಸಿಬ್ಬಂದಿಗಳ ಮೇಲೆ ನೂರಾರು FIR  ಹಾಕಿಸಿದ್ದೀರಲ್ಲ?  ಇದು ನಿಜವಾದ ಸರ್ವಾಧಿಕಾರ ! ಇದಕ್ಕೆ ಎಮರ್ಜೆನ್ಸಿ ಎನ್ನದೇ ಇನ್ನಾವ ಹೆಸರಿನಿಂದ ಕರೆಯಬೇಕು? ಎಂದು‌‌ ತಾವೇ ಸೂಚಿಸಿ ! ಇಂದಿಗೂ ವಜಾಗೊಂಡ ಹಲವು ಸಿಬ್ಬಂದಿ ಕೋರ್ಟ್ ಕಛೇರಿ ಎಂದು ತಡಕಾಡುತ್ತಾ ಕಣ್ಣೀರು ಸುರಿಸುತ್ತಿದ್ದಾರೆ. ಇದಕ್ಕೆ ನಿಜಕ್ಕೂ ಮತ್ತೊಂದು‌‌ ಉತ್ತರದ‌ ಟ್ಟೀಟ್ ನ ನಿರೀಕ್ಷೆಯಲ್ಲಿದ್ದೇವೆ‌ ಎಂದಿದ್ದಾರೆ.

ಹೊನ್ನಯ್ಯ ಡಿ. ಪೂಜಾರಿ, ಸಾ|| ಹತ್ತಿಗೂಡೂರು, ಜಿಲ್ಲಾ || ಯಾದಗಿರ ರವರು ಸರ್ಕಾರದ ಸಾರಿಗೆ ಇಲಾಖೆ ಕಾರ್ಯದರ್ಶಿ ಅವರಿಗೆ ಪತ್ರ ಬರೆದು,  ಸರ್ಕಾರದ ಮಹತ್ವಕಾಂಕ್ಷೆ ಶಕ್ತಿ ಯೋಜನೆ ಕುರಿತು ಚಾಲಕ, ನಿರ್ವಾಹಕ ಸಿಬ್ಬಂದಿ ಸಾರ್ವಜನಿಕ ಸ್ಥಳಗಳಲ್ಲಿ ಮನಬಂದಂತೆ, ಅಸಂಭದ್ದವಾಗಿ ಮಾತನಾಡದಂತೆ, ಇದರಿಂದ  ಸಂಸ್ಥೆಯ ಘನತೆಗೆ ಧಕ್ಕೆ ಉಂಟಾಗುವುದಾಗಿ ಎಚ್ಚರಿಸಿ, ಮುಂದಿನ ದಿನಗಳಲ್ಲಿ ಈ ರೀತಿಯ ಲೋಪಕ್ಕೆ ಅವಕಾಶ ನೀಡದಂತೆ ಜಾಗೃತೆ ವಹಿಸಿ ಕರ್ತವ್ಯ ನಿರ್ವಹಿಸುವಂತೆ ನಿರ್ದೇಶನ ನೀಡಲು ಕ್ರಮ ಕೈಗೊಳ್ಳಬೇಕು ಎಂದು‌ ಪತ್ರ ಬರೆದಿರುತ್ತಾರೆ ಎಂದು ತಿಳಿಸಿದ್ದಾರೆ.

ಆ‌ ಪತ್ರವನ್ನು ವಿಭಾಗಗಳಿಗೆ ರವಾನಿಸಿ, ಈ‌ ಬಗ್ಗೆ ಸಿಬ್ಬಂದಿಗೆ ತಿಳುವಳಿಕೆ ನೀಡಿ ಎಂದು ಸೂಚನೆ ನೀಡಲಾಗಿದೆ. ಸಾರ್ವಜನಿಕರ‌ ಪತ್ರಕ್ಕೆ ಸ್ಪಂದಿಸುವ ಕಾರ್ಯ ಇವರಿಗೆ ಸರ್ವಾಧಿಕಾರಿ ಧೋರಣೆಯೇ?  ಎಮರ್ಜೆನ್ಸಿ ಯೇ? ಬಿಜೆಪಿರವರಿಗೆ ಜ್ಞಾನದ ಅನಾವೃಷ್ಠಿಯೋ ಅಥವಾ ಅಜ್ಞಾನದ ಅತಿವೃಷ್ಠಿಯೋ ತಿಳಿಯದಾಗಿದೆ.ಜ್ಞಾನ ಎಂಬುವುದು ಒಬ್ಬರ ಸ್ವತ್ತಲ್ಲ ಅದನ್ನು ಹಂಚಿಕೊಳ್ಳಬೇಕು. ಆದರೆ ಅಜ್ಞಾನವನ್ನು ಈ ರೀತಿ ಹಂಚಿಕೊಂಡರೆ ಸಮಾಜದ ಅಧಃಪತನ ಖಂಡಿತ. ಬಿ.ಜಿ.ಪಿ ಅವರೇ ಇನ್ನಾದರೂ ಸುಧಾರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.


Share It

You cannot copy content of this page