ಬೆಂಗಳೂರು: ಬಳ್ಳಾರಿ ಗಲಭೆ ಪ್ರಕರಣದಲ್ಲಿ ಫೈರ್ ನಡೆಸಿದ ಆರೋಪದಲ್ಲಿ ಐದು ಖಾಸಗಿ ಗನ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಗನ್ ಮ್ಯಾನ್ಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಓರ್ವ ಕಾರ್ಯಕರ್ತ ಮೃತಪಟ್ಟ ಬೆನ್ನಲ್ಲೇ ಗನ್ಗಳನ್ನು ವಶಕ್ಕೆ ಪಡೆಯಲಾಗಿತ್ತು. ಜನಾರ್ದನ ರೆಡ್ಡಿಯ ಗನ್ ಮ್ಯಾನ್ನಿಂದ ಒಂದು ಮತ್ತು ಸತೀಶ್ ರೆಡ್ಡಿ ಗನ್ ಮ್ಯಾನ್ಗಳಿಂದ ನಾಲ್ಕು ಗನ್ಗಳನ್ನು ವಶಕ್ಕೆ ಪಡೆಯಲಾಗಿತ್ತು.
ಇದೀಗ ವಿಚಾರಣೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಸತೀಶ್ ರೆಡ್ಡಿ ಅವರ ನಾಲ್ವರು ಗನ್ ಮ್ಯಾನ್ಗಳ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ವಶಕ್ಕೆ ಪಡೆದಿರುವ ಐದು ಗನ್ಗಳಿಂದ ಯಾವುದೇ ಬುಲೆಟ್ ಫೈರ್ ಆಗಿಲ್ಲ ಎನ್ನಲಾಗುತ್ತಿದೆ.
ಇನ್ನೂ ಯಾವ ಗನ್ನಿಂದ ಫೈಯರ್ ಆಯ್ತು ಎಂಬುದು ನಿಗೂಢವಾಗಿಯೇ ಉಳಿದಿದೆ. ಆ ಗನ್ ಇನ್ನೂ ಪೊಲೀಸರಿಗೆ ಸಿಕ್ಕಿಲ್ಲ. ಫೈರಿಂಗ್ ಆಗಿರುವ ಗನ್ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

