ಹಾಸನ : ನಟ ಯಶ್ ತಾಯಿ ಪುಷ್ಪಾ ಅವರಿಗೆ ಸೇರಿದ ಕಾಂಪೌಂಡ್ ಜಾಗವನ್ನು ತೆರವುಗೊಳಿಸಲಾಗಿದೆ.
ಹಾಸನದ ವಿದ್ಯಾನಗರದಲ್ಲಿರುವ ಯಶ್ ತಾಯಿ ಪುಷ್ಪಾ ಅವರ ಪಕ್ಕದ ಮನೆಯ ನಿವಾಸಿಗಳು, ಇದು ನಮಗೆ ಸೇರಿದ ಜಾಗ. ಕಾಂಪೌಂಡ್ ಹಾಕುವಾಗಲೂ ನಾವು ವಿರೋಧ ಮಾಡಿದ್ದೆವು. ಗಲಾಟೆ ಆದ ಕಾರಣಕ್ಕೆ ನ್ಯಾಯಾಲಯಕ್ಕೆ ಹೋಗಿ, ಈಗ ನ್ಯಾಯಾಲಯದ ಆದೇಶದ ಮೇರೆಗೆ ತೆರವು ಮಾಡಲಾಗಿದೆ.
ಆದರೆ, ಪುಷ್ಪಾ ಪರ ವಕೀಲರು, ಇದು ನಮ್ಮ ಜಾಗ. ಅವರು ಬೇರೆ ಯಾವುದೋ ಜಾಗದ ಆದೇಶ ತೆಗೆದುಕೊಂಡು ಬಂದು ಇಲ್ಲಿ ಕಾಂಪೌಡ್ ತೆರವು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಯಾವುದೇ ನೋಟೀಸ್ ನೀಡಿಲ್ಲ ಎಂದು ಹೇಳಿದ್ದಾರೆ. ಆದರೆ, ಒಂದು ತಿಂಗಳ ಹಿಂದೆಯೇ ಆದೇಶ ಬಂದಿದ್ದು, ಮಾತುಕತೆ ನಡೆಸಲು ಕರೆಯಲಾಗಿತ್ತು. ಆದರೆ, ಉದ್ಯಾವುದಕ್ಕೂ ಯಶ್ ತಾಯಿ ಕಡೆಯವರು ಬರಲಿಲ್ಲ ಎಂದು ಆರೋಪಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಕಾನೂನು ರೀತಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿ, ಪರಿಸ್ಥಿತಿ ಶಾಂತಗೊಳಿಸಿದ್ದಾರೆ.

